
ಬೆಂಗಳೂರಿನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಸೌಮ್ಯನಾಥ ಸ್ವಾಮಿಜಿ, ಮಹಾಲಕ್ಷ್ಮಿಪುರದ ಅಭಯ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಮಹಾಲಕ್ಷ್ಮೀ ಲೇಔಟ್ ಶಾಸಕ ಗೋಪಾಲಯ್ಯ, ಕಾಂಗ್ರೆಸ್ ಮುಖಂಡ ನಟರಾಜ್ ಗೌಡ ಉಪಸ್ಥಿತಿಯಲ್ಲಿ ಶಾಸಕ ಗೋಪಾಲಯ್ಯ ಮಾತನಾಡಿ, ನೂತನವಾಗಿ ನಿರ್ಮಿಸಿರುವ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ. ನಿರ್ಮಲಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯಲಿದೆ. ನಾಳೆಯಿಂದ ಮೂರುದಿನಗಳ ಕಾಲ ಕಾರ್ಯಕ್ರಮ ನಡೆಯಲಿದ್ದು, ಏಪ್ರಿಲ್ 15 ರಂದು ಡಿಸಿಎಂ ಡಿ.ಕೆ ಶಿವಕುಮಾರ್ ಭಾಗಿಯಾಗ್ತಾರೆ. ಮಾಜಿ ಸಿಎಂ ಸದಾನಂದ ಗೌಡರು ಸೇರಿ ಪ್ರಮುಖರು ಹಾಜರಾಗ್ತಾರೆ ಎಂದಿದ್ದಾರೆ.
ಏಪ್ರಿಲ್ 16ರಂದು ಮಾಜಿ ಪ್ರಧಾನಿ ದೇವೇಗೌಡರು ಕಾರ್ಯಕ್ರಮ ಉಧ್ಘಾಟನೆ ಮಾಡಲಿದ್ದಾರೆ. ಕೇಂದ್ರ ಸಚಿವರಾಗಿರುವ ಕುಮಾರ ಸ್ವಾಮಿ ಹಾಗೂ ಸೋಮಣ್ಣನವರು ಸೇರಿದಂತೆ ಅನೇಕ ಗಣ್ಯರು ಭಾಗಿಯಾಗ್ತಾರೆ ಎಂದಿರುವ ಶಾಸಕ ಗೋಪಾಲಯ್ಯ ಜಾತಿಗಣತಿ ಅವೈಜ್ಞಾನಿಕ, ಲಿಂಗಾಯತ, ಒಕ್ಕಲಿಗರಿಗೆ ಅನ್ಯಾಯವಾಗಿದೆ. ಹತ್ತು ವರ್ಷದ ಹಿಂದಿನದ್ದು ಇದು. ಎಲ್ಲಾ ವರ್ಗದ ಜನತೆಗೆ ಮೋಸ ಮಾಡಿದ್ದೀರಿ. ಇದನ್ನ ಸರಿಪಡಿಸುವ ಕೆಲಸ ಮಾಡಬೇಕು. ಈ ಸರ್ಕಾರಕ್ಕೆ ಮೂರು ವರ್ಷ ಸಮಯ ಇದೆ. ಮರು ಜಾತಿಗಣತಿ ಮಾಡಲಿ ಎಂದಿದ್ದಾರೆ.

ಈ ಜಾತಿ ಜನಗಣತಿಯಿಂದ ಪ್ರತಿ ಸಮುದಾಯಕ್ಕೂ ಅನ್ಯಾಯ ಆಗಿದೆ. ಈ ವರದಿ ಜಾರಿಯಾದರೆ ರಾಜ್ಯದಲ್ಲಿ ಹೋರಾಟ ಶರುವಾಗುತ್ತದೆ. ಗಣತಿಗೆ ಒಕ್ಕಲಿಗರ ಮನೆಗಳಿಗೆ ಬಂದಿಲ್ಲ. ಅವೈಜ್ಞಾನಿಕ ವರದಿ ಇದು. ಹೊಸದಾಗಿ ವರದಿ ಸಿದ್ದಪಡಿಸಿ ಜಾರಿ ಮಾಡಬೇಕು. ಈ ಸರ್ಕಾರಕ್ಕೆ ಮೂರು ವರ್ಷಗಳ ಸಮಯ ಇದೆ. ಸಿದ್ದರಾಮಯ್ಯನವರಿಗೆ ಮಹಾಲಕ್ಷ್ಮಿ ಲೇಔಟ್ ಶಾಸಕನಾಗಿ ಒತ್ತಾಯ ಮಾಡ್ತೇನೆ. ಹತ್ತು ವರ್ಷದ ಹಳೆಯ ವರದಿ ಇದು. ಯಾರು ಸತ್ತಿದ್ದಾರೆ ಯಾರು ಬದುಕಿದ್ದಾರೋ ಗೊತ್ತಿಲ್ಲ. ಒಕ್ಕಲಿಗರ ಮನೆಗಳಿಗೆ, ಹಳ್ಳಿಗಳಿಗೆ ಹೋಗಿಲ್ಲ. ಅದೇ ರೀತಿ ಲಿಂಗಾಯತರಿಗೂ ಆಗಿದೆ ಎಂದಿದ್ದಾರೆ.

ಸ್ವಾಮೀಜಿಗಳ ನೇತೃತ್ವದಲ್ಲಿ ಸಭೆ ಸೇರ್ತೇವೆ, ಸಭೆಯ ನಂತರ ಮುಂದಿನ ತಿರ್ಮಾನ ಮಾಡ್ತೇವೆ ಎಂದು ಶಾಸಕ ಗೋಪಾಲಯ್ಯ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಒಟ್ಟಾರೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಮೂರು ಪಕ್ಷಗಳ ಒಕ್ಕಲಿಗ ನಾಯಕರು ಜಾತಿ ಜನಗಣತಿ ವಿಚಾರದಲ್ಲಿ ಒಟ್ಟಾಗುವ ಮುನ್ಸೂಚನೆ ನೀಡಿದ್ದಾರೆ. ಏಪ್ರಿಲ್ 17ರ ಕ್ಯಾಬಿನೆಟ್ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಮ ಉಂದಿನ ಹೆಜ್ಜೆ ಹಿಡುವುದಕ್ಕೆ ನಿರ್ಧಾರ ಮಾಡಿದ್ದಾರೆ.
