ಕೋಲಾರ: ಮಾ.20: ಮಾಜಿ ಸಿಎಂ ಸಿದ್ದರಾಮಯ್ಯ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಬೇಕು ಎನ್ನುವುದು ಕ್ಷೇತ್ರದ ಮತದಾರರ ಒತ್ತಾಯವಾಗಿದ್ದು ಮಂಗಳವಾರ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಲು ಬೆಂಗಳೂರಿಗೆ ತೆರಳಲು ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಒಕ್ಕಲಿಗ ಮುಖಂಡರು ನಿರ್ಧರಿಸಿದರು.
ನಗರದ ಹೊರವಲಯದ ಆರಾಧ್ಯ ಹೋಟಲ್ ನಲ್ಲಿ ಸಭೆ ನಡೆಸಿದ ಅವರು ಮಂಗಳವಾರ ಬೆಳಗ್ಗೆ 11 ಗಂಟೆಗೆ ಸಿದ್ದರಾಮಯ್ಯ ಅವರ ಮನೆಯ ಮುಂದೆ ಸೇರಬೇಕು ಕೋಲಾರ ಕ್ಷೇತ್ರದ ಪ್ರತಿಯೊಂದು ಬೂಟ್ ಮಟ್ಟದಿಂದ ಕನಿಷ್ಠ 25 ಜನರಂತೆ ಐದು ಸಾವಿರಕ್ಕೂ ಹೆಚ್ಚು ಜನ ಸೇರಬೇಕು ಎಂದು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ನಂದಿನಿ ಪ್ರವೀಣ್ ಮಾತನಾಡಿ ಸಿದ್ದರಾಮಯ್ಯ ನಾಲ್ಕು ಬಾರಿ ಕೋಲಾರಕ್ಕೆ ಆಗಮಿಸಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿ ಹೋಗಿದ್ದರು ಆದರೆ ವಿರೋಧ ಪಕ್ಷದವರ ತಾಳಕ್ಕೆ ತಕ್ಕಂತೆ ಕೆಲವು ವರದಿಯನ್ನು ತಯಾರಿಸಿ ಸುಳ್ಳು ಮಾಹಿತಿ ನೀಡಲು ಹೊರಟಿದ್ದಾರೆ. ಈ ವರದಿಯು ಸುಮಾರು ಎರಡು ತಿಂಗಳ ಹಿಂದೆಯೇ ತಯಾರಿಸಲಾಗಿದೆ ಪ್ರಸ್ತುತ ಇವತ್ತಿನ ವರದಿಯನ್ನು ಗಮನಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಸಿದ್ದರಾಮಯ್ಯ ಅವರನ್ನು ಕೋಲಾರದಲ್ಲಿ ಸ್ಪರ್ಧೆ ಮಾಡಲೇಬೇಕು ಎಂಬುದು ನಮ್ಮೆಲ್ಲರ ಉದ್ದೇಶವಾಗಿದೆ ಒಕ್ಕಲಿಗ ಸಮುದಾಯವು ಸಿದ್ದರಾಮಯ್ಯ ಅವರನ್ನು ಬೆಂಬಲಿಸಲಿದೆ ಎಂಬುದನ್ನು ಸೂಚಿಸಲು ನಮ್ಮ ಶಕ್ತಿ ಪ್ರದರ್ಶನ ಮಾಡಬೇಕು ಎಂದರು.
ಒಕ್ಕಲಿಗ ಸಮುದಾಯ ಸಿದ್ದರಾಮಯ್ಯ ಪರವಾಗಿದೆ..!
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಗದ್ದೆಕಣ್ಣೂರು ದಯಾನಂದ್ ಮಾತನಾಡಿ ಎಐಸಿಸಿ ಮುಖಂಡ ರಾಹುಲ್ ಗಾಂಧಿ ಅವರಿಗೆ ನೀಡಿರುವ ವರದಿಯು ಸುಳ್ಳು ಎಂದು ಸಾಬೀತು ಪಡಿಸಬೇಕು ಸಿದ್ದರಾಮಯ್ಯ ನವರ ಪರ ಒಕ್ಕಲಿಗ ಸಮುದಾಯ ಇದೆ ಎಂಬುದನ್ನು ತೋರಿಸಬೇಕು. ಜಿಲ್ಲೆಯಲ್ಲಿ ಕೆ.ಸಿ.ವ್ಯಾಲಿ ಮೂಲಕ ನೀರು ನೀಡಿ ಒಕ್ಕಲಿಗ ಸಮುದಾಯ ನೆಮ್ಮದಿಯ ಜೀವನ ನಡೆಸಲು ಕಾರಣಕರ್ತರಾದ ಸಿದ್ದರಾಮಯ್ಯ ಅವರಿಗೆ ಬೆಂಬಲಿಸಬೇಕು ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳಿಂದ ಒಕ್ಕಲಿಗ ಜನಾಂಗಕ್ಕೆ ಪ್ರಯೋಜನ ಆಗಿಲ್ಲ. ಐದರಿಂದ ಹತ್ತು ಸಾವಿರ ಜನ ಜಿಲ್ಲೆಯಿಂದ ಬೆಂಗಳೂರಿಗೆ ಹೋಗುವ ತೀರ್ಮಾನವನ್ನು ಒಬ್ಬರಿಗೊಬ್ಬರು ಮಾಹಿತಿ ತಿಳಿಸಬೇಕು ಎಂದರು.
ಸಿದ್ದರಾಮಯ್ಯ ಅವರ ಬಗ್ಗೆ ವಿರೋಧ ಪಕ್ಷಗಳಿಂದ ಒಳಸಂಚು..!
ನಗರಸಭೆ ಸದಸ್ಯ ಮುರಳಿಗೌಡ ಮಾತನಾಡಿ ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯ ಗೆಲ್ಲುತ್ತಾರೆ ಎಂಬುದನ್ನೂ ಗಮನಿಸಿ ವಿರೋಧ ಪಕ್ಷಗಳು ಸುಳ್ಳಿನ ಒಳಸಂಚು ಮಾಡಲು ಹೊರಟಿದ್ದಾರೆ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡದಿದ್ದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಸೋಲುವುದು ಗ್ಯಾರೆಂಟಿಯಾಗುತ್ತದೆ ಇದನ್ನು ಅರ್ಥಮಾಡಿಕೊಂಡು ಹೈಕಮಾಂಡ್ ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡಲು ಒಪ್ಪಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೈಲಾಂಡಹಳ್ಳಿ ಮುರಳಿ ಮಾತನಾಡಿ ಒಕ್ಕಲಿಗ ಸಮುದಾಯವು ಒಂದೇ ಪಕ್ಷದ ಪರವಾಗಿ ಇಲ್ಲ ಎಲ್ಲಾ ಪಕ್ಷಗಳೊಂದಿಗೆ ನಮ್ಮ ಸಮುದಾಯವು ಇದ್ದು ಹೆಚ್ಚಾಗಿ ಸಿದ್ದರಾಮಯ್ಯ ಬೆಂಬಲವಾಗಿ ನಿಂತಿದ್ದಾರೆ ಅದಂತೆ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು, ದಲಿತರು, ಒಕ್ಕಲಿಗ ಸಮುದಾಯ ಒಟ್ಟಾಗಿ ಸಿದ್ದರಾಮಯ್ಯ ನವರ ಪರ ಇದೆ ಎಂಬುದನ್ನು ಸಾಬೀತು ಪಡಿಸಬೇಕು ಅನಿಟ್ಟಿನಲ್ಲಿ ಒತ್ತಾಯಿಸಲು ಸಮುದಾಯದ ಮುಖಂಡರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ಅಗಮಿಸಬೇಕು ಎಂದು ಮನವಿ ಮಾಡಿದರು
ಈ ಸಂದರ್ಭದಲ್ಲಿ ಕೋಚಿಮುಲ್ ಮಾಜಿ ನಿರ್ದೇಶಕ ರಾಮಕೃಷ್ಣೇಗೌಡ, ಪರ್ಜೇನಹಳ್ಳಿ ನಾಗೇಶ್, ಪೆಮ್ಮಶೆಟ್ಟಿಹಳ್ಳಿ ಸುರೇಶ್, ತಿಪ್ಪೇನಹಳ್ಳಿ ನಾಗೇಶ್, ವಕ್ಕಲೇರಿ ಲೋಕೇಶ್, ಸತೀಶ್, ಶ್ರೀನಿವಾಸ್, ಅರಹಳ್ಳಿ ಗೋಪಾಲಕೃಷ್ಣ, ರಘು, ಶ್ರೀಧರ್, ಅಂಬರೀಶ್, ಪ್ರಕಾಶ್, ಚಂದ್ರಶೇಖರ್, ಮುಂತಾದವರ ಇದ್ದರು.