ಕಾಂಗ್ರೆಸ್ ನಾಯಕರು ಬಾಯಿಗೆ ಬಂದಂತೆ ಮಾತಾಡುವುದನ್ನು ಬಿಡಬೇಕು ಎಂದು ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಕಿಡಿಕಾರಿದ್ರು.
ಈ ಬಗ್ಗೆ ಮೈಸೂರಿನಲ್ಲಿ ಮಾತ್ನಾಡಿದ ಅವರು, ಯದುವೀರ್ ಯಾವ ಅಲೆಯಿಂದ ಆಯ್ಕೆಯಾಗಿಲ್ಲ. ಜನರ ಪ್ರೀತಿಯಿಂದ ಆಯ್ಕೆಯಾಗಿದ್ದಾರೆ. ಮೈಸೂರು ಮಹಾರಾಜರು ನೀಡಿರುವ ಕೊಡುಗೆಗಳನ್ನು ನಾವು ಸ್ಮರಿಸಬೇಕು. 28ಕ್ಕೆ 28 ಕ್ಷೇತ್ರಗಳ ಗೆಲ್ತೀವಿ ಎನ್ನುತ್ತಿದ್ದ ಕಾಂಗ್ರೆಸ್ ನಾಯಕರು ಯಾಕೆ ಗೆಲ್ಲಲಿಲ್ಲ. ಮೈಸೂರಿನಲ್ಲಿ ಕಾಂಗ್ರೆಸ್ ಸೋತಿರುವುದು ಸರ್ಕಾರದ ಮೇಲೆ ಜನರಿಗೆ ವಿಶ್ವಾಸವಿಲ್ಲ ಎಂಬುದರ ದ್ಯೋತಕ. ಕಾಂಗ್ರೆಸ್ ನಾಯಕರು ಏಕವಚನ, ದುರಹಂಕಾರ, ದ್ವೇಷದಿಂದ ಮಾತನಾಡುವುದನ್ನು ಬಿಡಿ. ಯದುವೀರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ನಿಲ್ಲಿಸದಂತೆ ನಾವು ಮಾಡಿದ
ಮನವಿಗೆ ಸಿಎಂ, ಡಿಸಿಎಂ ಸ್ಪಂದಿಸಲಿಲ್ಲ. ಜಾತಿ ಇಟ್ಟುಕೊಂಡು ಮತ ಕೇಳಿದವರಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ. ಸಾರ್ವಜನಿಕರು ಅಭಿವೃದ್ಧಿ ಕಾರ್ಯಗಳಿಗಿಂತ, ಸರ್ಕಾರ ನಡೆಸುವ ನಾಯಕರ ನಡವಳಿಕೆ ಗಮನಿಸುತ್ತಾರೆ. ಹಾಗಾಗಿ ಕಾಂಗ್ರೆಸ್ ನಾಯಕರು ಜನರ ನಡುವೆ ಒಡಕು ಸೃಷ್ಟಿಸುವ ಮಾತುಗಳನ್ನು ಆಡಬಾರದು ಎಂದು ಹೆಚ್.ವಿಶ್ವನಾಥ್ ತಿಳಿಸಿದ್ರು