ಸಾಮಾಜಿಕ ಜಾಲತಾಣ ( Social Media ) ಅನ್ನೋದೇ ಹಾಗೆ ಅಲ್ಲಿ ಯಾವಾಗ ಯಾವ ವಿಡಿಯೋ ಯಾವ ಸಂದರ್ಭದಲ್ಲಿ ವೈರಲ್ ( Viral ) ಆಗುತ್ತೆ ಅಂತ ಹೇಳುವುದಕ್ಕೆ ಸಾಧ್ಯವಿಲ್ಲ ಇದೀಗ ಇಂತಹದ್ದೇ ಒಂದು ವಿಡಿಯೋ ( Video ) ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ. ಈ ವಿಡಿಯೋ ನೋಡಿದ ನೆಟ್ಟಿಗರು ( netizen ) ಅಚ್ಚರಿಯನ್ನ ವ್ಯಕ್ತಪಡಿಸುತ್ತಿದ್ದಾರೆ.
ಹೌದು ಜಿಂಕೆಯನ್ನ ಮಾಯಾಮೃಗ ಅಂತಲೂ ಸಾಕಷ್ಟು ಮಂದಿ ಕರಿತಾರೆ, ನೀವು ಯಾವತ್ತಾದ್ರೂ ವಾಕಿಂಗ್ ಹೋದಾಗ ಏಕಾಏಕಿ ಜಿಂಕೆಗಳ ಹಿಂಡು ನಿಮ್ಮ ಮುಂದೆ ರಸ್ತೆ ದಾಟಲು ಮುಂದಾದರೆ ನಿಮಗೆ ಹೇಗಿರುತ್ತೆ ಅಲ್ವಾ? ಇಂತದ್ದೇ ಅನುಭವವನ್ನ ಮುಂಬೈನ ಕೆಲ ನಾಗರಿಕರು ಪಡೆದುಕೊಂಡಿದ್ದಾರೆ
ಇಂದು ಮುಂಜಾನೆ ಮುಂಬೈನ ಬೋರಿವಲಿ ರಾಷ್ಟ್ರೀಯ ಉದ್ಯಾನವನದಲ್ಲಿ ಬೆಳಗಿನ ಸಮಯದಲ್ಲಿ ವಾಕಿಂಗ್ಗೆ ಹೋಗುತ್ತಿದ್ದವರು, ಜಿಂಕೆಗಳ ಹಿಂಡನ್ನ ಕಂಡು ಗಾಬರಿಯಾಗಿದ್ದಾರೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದ ಬಳಕೆದಾರರೊಬ್ಬರು ಹಂಚಿಕೊಂಡಿದ್ದು ಈಗ ಈ ವಿಡಿಯೋ ವೈರಲ್ ಆಗಿದೆ