• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, February 9, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಜೈಲಿನ ವಿಡಿಯೋ ವೈರಲ್ ಕೇಸ್.. ಐವರ ವಿಚಾರಣೆ.. ಹೇಳಿದ್ದೇನು..?

ಪ್ರತಿಧ್ವನಿ by ಪ್ರತಿಧ್ವನಿ
November 13, 2025
in Top Story, ಕರ್ನಾಟಕ, ರಾಜಕೀಯ, ಶೋಧ
0
ಜೈಲಿನ ವಿಡಿಯೋ ವೈರಲ್ ಕೇಸ್.. ಐವರ ವಿಚಾರಣೆ.. ಹೇಳಿದ್ದೇನು..?
Share on WhatsAppShare on FacebookShare on Telegram

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಮೊಬೈಲ್ ಬಳಸಿದ್ದ ವಿಡಿಯೋ ಸಂಬಂಧ ಜೈಲಾಧಿಕಾರಿಗಳು ಆಂತರಿಕ ತನಿಖೆ ನಡೆಸಿದ್ದು, ಐವರ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ADVERTISEMENT

Parappana Agrahara Jail: ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರ, ಪಾತಕಿ ಕೈಯಲ್ಲಿ ಸ್ಮಾರ್ಟ್‌ ಫೋನ್‌!

ಜೈಲು ಅಧಿಕಾರಿಗಳು ಇತ್ತೀಚೆಗೆ ವೈರಲ್ ಆದ ವಿಡಿಯೋದಲ್ಲಿದ್ದ ಸರಣಿ ಕೊಲೆಗಾರ, ಅತ್ಯಾಚಾರಿ ಉಮೇಶ್ ರೆಡ್ಡಿ, ಶಂಕಿತ ಉಗ್ರ ಜುಹಾದ್ ಹಮೀದ್ ಶಕೀಲ್, ತರುಣ್ ಕೊಂಡೊರು, ಚೋರ್ ಷಾಹೀದ್ ಹಾಗೂ ಕಾರ್ತಿಕ್ @ ಚಿಟ್ಟೆಯನ್ನ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವಿಚಾರಣೆ ವೇಳೆ ವಿಡಿಯೋ ಸಂಬಂದ ಐವರು ಕೂಡ ವಿಡಿಯೋ ಸಂಬಂಧ ತಮ್ಮ ಹೇಳಿಕೆ ನೀಡಿದ್ದಾರೆ.

1.ಸಜಾ ಬಂಧಿ ಉಮೇಶ್ ರೆಡ್ಡಿ ವಿಚಾರಣೆ ನಡೆಸಿದಾಗ ಆತ ತಾನು ಜೈಲಿನಲ್ಲಿ ಪೋನ್ ನಲ್ಲಿ ಮಾತಾಡಿದ್ದ ಬಗ್ಗೆ ಬಾಯ್ಬಿಟ್ಟಿದ್ದಾನೆ. ಆದರೆ ತಾನು 2023ರಲ್ಲಿ ಬೆಳಗಾವಿ ಜೈಲಿನಿಂದ ಬೆಂಗಳೂರು ಜೈಲಿಗೆ ವರ್ಗಾವಣೆಯಾಗಿ ಬಂದಿದ್ದು, 2023 ಜೂನ್/ಜುಲೈನಲ್ಲಿ ಸಜಾಬಂದಿ ಖೈದಿ ವಡ್ಡನಾಗ ತನಗೆ ಪೋನ್ ನೀಡಿದ್ದ. ತಾಯಿಯ ಜೊತೆ ಮಾತನಾಡಲು ಬಲವಂತ ಮಾಡಿದ್ದಕ್ಕೆ ಮಾತಾಡಿದ್ದಾಗಿ, ಈ ವೇಳೆ ಯಾರೋ ಗೊತ್ತಿಲ್ಲದೆ ವಿಡಿಯೋ ಚಿತ್ರೀಕರಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾನೆ.

2.ಜೈಲಿನಲ್ಲಿ ಕೈಯಲ್ಲಿ ಮೊಬೈಲ್ ಹಿಡಿದು ಕುಳಿತಿದ್ದ ಐಸಿಸ್ ಉಗ್ರ ಜುಹಾದ್ ಹಮೀದ್ ಶಕೀಲ್ ವಿಚಾರಣೆ ಮಾಡಿದಾಗ, ಆತ ಎರಡು ವರ್ಷಗಳ ಹಿಂದೆ ಬಂಧಿಯೊಬ್ಬ ಮೊಬೈಲ್ ನೀಡಿದ್ದ. ಮೊಬೈಲ್ ಕೈಯಲ್ಲಿ ಹಿಡಿದಿದ್ದೆ ವಿನಾಃ, ಪೋನ್ ನಲ್ಲಿ ಮಾತನಾಡಿಲ್ಲ. ಪುನಃ ಮೊಬೈಲ್ ವಾಪಸ್ ಕೊಟ್ಟಿದ್ದೆ, ಮೊಬೈಲ್ ಕೊಟ್ಟವನು ಯಾರು ಅಂತಾ ನೆನಪಿಲ್ಲ ಎಂದು ಹೇಳಿಕೆ ನೀಡಿದ್ದಾನೆ.

KN Rajanna on Congress: ಕೈ ನಾಯಕರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ ಆಪ್ತ #pratidhvani

3. ಸ್ಮಗ್ಲಿಂಗ್ ಆರೋಪಿ ತರುಣ್ ಕೊಂಡೂರು ರಾಜು ವಿಚಾರಣೆ ವೇಳೆ ಮೊಹಮ್ಮದ್ ಪಾಜೀಲ್ ಖಾನ್ ಎಂಬಾತ 6 ತಿಂಗಳ ಹಿಂದೆ ಮೊಬೈಲ್ ನೀಡಿ ನೆಟ್ವರ್ಕ್ ಬರ್ತಿಲ್ಲ ನೋಡಿಕೊಡು ಎಂದಿದ್ದ. ಅದನ್ನ ನೋಡಿ ಪುನಃ ವಾಪಸ್ ನೀಡಿದ್ದೆ. ಮೊಬೈಲ್ ಕೈಯಲ್ಲಿ ಹಿಡಿದಿದ್ದನ್ನ ಯಾರೋ ವಿಡಿಯೋ ಮಾಡಿದ್ದರು. ಬಳಿಕ ಆತ ನನಗೆ ಆಗಾಗ ಹಣ ನೀಡುವಂತೆ ಪೀಡಿಸುತ್ತಿದ್ದ. ನಾನು ಹಣ ನೀಡಲು ನಿರಾಕರಿಸಿದ್ದೆ, ಈ ವಿಚಾರ ಅಧಿಕಾರಿಗಳಿಗೂ ಹೇಳಿರುವುದಿಲ್ಲ ಎಂದಿದ್ದಾನೆ.

4. ವೈರಲ್ ವಿಡಿಯೋದಲ್ಲಿ ವರಂಡಾದಲ್ಲಿ ಕುಳಿತಿದ್ದ ಷಾಹೀದ್ ಖಾನ್ ಅಲಿಯಾಸ್ ಚೋರ್ ಷಾಹೀದ್ ವಿಚಾರಣೆ ವೇಳೆ, ನಾನು 3-4 ಬಾರಿ ಜೈಲಿಗೆ ಬಂದಿದ್ದೇನೆ. ಮಾದಕ ವಸ್ತು ಕೇಸಿನಲ್ಲಿ 2024 ರಲ್ಲಿ ಜೈಲಿಗೆ ಬಂದಿದ್ದು, ಯಾವುದೇ ಮೊಬೈಲ್ ಫೋನ್ ಬಳಸಿಲ್ಲ, ವರಾಂಡದಲ್ಲಿ ಕುಳಿತಿರುವ ವಿಡಿಯೋ ಚಿತ್ರೀಕರಿಸಿ ಹರಿಬಿಟ್ಟಿದ್ದಾರೆ ಎಂದು ಹೇಳಿಕೆ ನೀಡಿದ್ದಾನೆ.

Parappana Agrahara Jail Scandal: ಪರಪ್ಪನ ಅಗ್ರಹಾರ | ಮದ್ಯ ಕುಡಿದು ಕೈದಿಗಳ ನೃತ್ಯ: ಮತ್ತೊಂದು ವಿಡಿಯೊbahಿರಂಗ

5.‌ಜೈಲಿನ ಬ್ಯಾರಕ್ ನಲ್ಲಿ ಡ್ರಮ್ ಬಾರಿಸಿ ಡ್ಯಾನ್ ಮಾಡಿದ್ದು ವಿಚಾರಣಾ ಕೈದಿಗಳಾದ ಮಂಜುನಾಥ್ @ ಕೋಳಿ ಮಂಜ, ಚರಣ್ ರಾವ್, ಧನಂಜಯ್, ಕಾರ್ತಿಕ್ @ ಚಿಟ್ಟೆ ಅನ್ನೋದು ಗೊತ್ತಾಗಿದೆ. ಆದರೆ ಕೋಳಿ ಮಂಜ 2022ರಲ್ಲೇ ಬಿಡುಗಡೆ ಆಗಿದ್ದು, ಚರಣ್ ರಾವ್ 2025 ರ ಮಾರ್ಚ್ ನಲ್ಲಿ ಬಿಡುಗಡೆಯಾಗಿದ್ದಾನೆ. ಧನಂಜಯ ವಿಡಿಯೋ ವೈರಲ್ ಆದ ಎರಡು ದಿನದ ಮುಂಚೆ ಅಂದ್ರೆ ನ. 7 ರಂದು ಬಿಡುಗಡೆಯಾಗಿದ್ದ. ಇನ್ನು ಕಾರ್ತಿಕ್ @ ಚಿಟ್ಟೆ ಇನ್ನು ಜೈಲಿನಲ್ಲಿದ್ದು, ಆತನ ವಿಚಾರಣೆ ವೇಳೆ ವೈರಲ್ ವಿಡಿಯೋ 3-4. ವರ್ಷಗಳ ಹಿಂದೆ ಮಾಡಿರಬಹುದು ಎಂದು ಹೇಳಿಕೆ ನೀಡಿದ್ದಾನೆ.

ಸದ್ಯ ಜೈಲು ಅಧಿಕಾರಿಗಳು ಈ ಐವರ ಹೇಳಿಕೆ ದಾಖಲಿಸಿದ್ದು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

Tags: actor darshan casebangalore policeJail video viralKarnatakaParappana agrahara
Previous Post

ಮೇಕೆದಾಟು ಯೋಜನೆ ವಿರುದ್ಧದ ಅರ್ಜಿ ವಜಾ: ಇದು ಬೆಂಗಳೂರಿಗರ ಗೆಲುವು ಎಂದ ಡಿ.ಕೆ ಶಿವಕುಮಾರ್

Next Post

ಪೋಕ್ಸೋ ಕೇಸ್‌: ಬಿ.ಎಸ್‌ ಯಡಿಯೂರಪ್ಪಗೆ ಬಿಗ್‌ ಶಾಕ್‌ ನೀಡಿದ ಹೈಕೋರ್ಟ್‌

Related Posts

ಕರ್ನಾಟಕದ ವಿಜಯಪುರದ ಮೈದಾನದಲ್ಲಿ ಖಾಸಗಿ ವಿಮಾನ ಪತನ
ಕರ್ನಾಟಕ

ಕರ್ನಾಟಕದ ವಿಜಯಪುರದ ಮೈದಾನದಲ್ಲಿ ಖಾಸಗಿ ವಿಮಾನ ಪತನ

by ಪ್ರತಿಧ್ವನಿ
February 8, 2026
0

ಭಾನುವಾರ ಮಧ್ಯಾಹ್ನ ಜಿಲ್ಲೆಯ  ಮೈದಾನದಲ್ಲಿ ಖಾಸಗಿ ಮಿನಿ ವಿಮಾನವೊಂದು ಪತನಗೊಂಡಿದ್ದು, ಪೈಲಟ್ ಸೇರಿದಂತೆ ಇಬ್ಬರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. https://youtu.be/D88eNb34sAE?si=0kEZhKe-NIR-lYAl ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಮಂಗಳೂರು...

Read moreDetails
ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಹೊಡೆತ..? ಇಲ್ಲಿದೆ ಮಹತ್ವದ ಮಾಹಿತಿ

ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಹೊಡೆತ..? ಇಲ್ಲಿದೆ ಮಹತ್ವದ ಮಾಹಿತಿ

February 8, 2026
Priyank Kharge: ಮೆಟ್ರೋ ಲೈನ್ ಹೆಚ್ಚಾದ್ರೆ ಮೋದಿ..ಟಿಕೆಟ್ ದರ ಹೆಚ್ಚಾದ್ರೆ ರಾಜ್ಯ ಸರ್ಕಾರ ಕಾರಣನಾ..?

Priyank Kharge: ಮೆಟ್ರೋ ಲೈನ್ ಹೆಚ್ಚಾದ್ರೆ ಮೋದಿ..ಟಿಕೆಟ್ ದರ ಹೆಚ್ಚಾದ್ರೆ ರಾಜ್ಯ ಸರ್ಕಾರ ಕಾರಣನಾ..?

February 8, 2026
RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

February 8, 2026
ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

February 8, 2026
Next Post
ಪೋಕ್ಸೋ ಕೇಸ್‌: ಬಿ.ಎಸ್‌ ಯಡಿಯೂರಪ್ಪಗೆ ಬಿಗ್‌ ಶಾಕ್‌ ನೀಡಿದ ಹೈಕೋರ್ಟ್‌

ಪೋಕ್ಸೋ ಕೇಸ್‌: ಬಿ.ಎಸ್‌ ಯಡಿಯೂರಪ್ಪಗೆ ಬಿಗ್‌ ಶಾಕ್‌ ನೀಡಿದ ಹೈಕೋರ್ಟ್‌

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada