ಬೇಜವಾಬ್ದಾರಿತನದಿಂದ ಕಾರು ಚಲಾಯಿಸಿ ಖಾಸಗಿ ಆಸ್ತಿಗೆ ಹಾನಿ ಮಾಡಿರುವ ಆರೋಪದ ಮೇಲೆ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರನ್ನು ಮುಂಬೈ ಪೊಲೀಸರು ರವಿವಾರ ಸಂಜೆ ಬಂಧಿಸಿದ್ದಾರೆ. ಬಳಿಕ, ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.
ಕಾಂಬ್ಲಿ ವಾಸಿಸುತ್ತಿರುವ ಮುಂಬೈನ ಬಾಂದ್ರಾದ ಮನೆಯೊಂದರ ಗೇಟ್‌ಗೆ ಕಾರ್ ಗುದ್ದಿ ನಷ್ಟ ಮಾಡಿದ್ದಾರೆ ಎಂದು ಅವರ ಮೇಲೆ ಆರೋಪ ಹೊರಿಸಲಾಗಿತ್ತು. ಸದ್ಯ ಅವರನ್ನೀಗ ಜಾಮೀನಿನ ಮಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಸತಿ ಸಮುಚ್ಚಯದವರು ನೀಡಿದ ದೂರಿನ ಆಧಾರದಲ್ಲಿ ಕಾಂಬ್ಳಿ ಅವರ ಮೇಲೆ ಐಪಿಸಿ ಕಲಂ 279, 336 ಹಾಗೂ 427 ಅಡಿ ಬಾಂದ್ರಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.