
ಮಹಾರಾಜರು ಗಿಫ್ಟ್ ಕೊಟ್ಟಿರೋ ಭೂಮಿ ನಾವು ಕಿತ್ತುಕೊಳ್ಳಲ್ಲ. ಜನರಲ್ಲಿ ಯಾಕೆ ಆತಂಕ ಸೃಷ್ಟಿಯಾಯ್ತೋ ಗೊತ್ತಿಲ್ಲ ಎಂದು ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ನಮ್ಮ ಕಡೆಯಿಂದ ಎಲ್ಲಾ ದಾಖಲೆಗಳನ್ನು 2014ರಲ್ಲೇ ಕೊಟ್ಟಿದ್ದೇವೆ. ಡಿಸಿ ಏನು ಗೊತ್ತಿಲ್ಲ ದಾಖಲೆ ಇಲ್ಲ ಅನ್ನೋಕೆ ಆಗಲ್ಲ. ನಾವು ಮೊನ್ನೆಯ ಕೂಡ ಜಾಗದ ಸಂಭಂದಪಟ್ಟ ದಾಖಲೆ ಕೊಟ್ಟಿದ್ದೇವೆ ಎಂದಿದ್ದಾರೆ. ನಮಗೆ ಸೇರಿದ ಜಾಗಕ್ಕೆ ಎಲ್ಲಾ ದಾಖಲೆಗಳಿವೆ. ಅದನ್ನು ಕಂದಾಯ ಭೂಮಿ ಮಾಡಬೇಡಿ ಎಂದು ಮನವಿ ಮಾಡಿದ್ದೇವೆ. ಹೀಗಾಗಿ ಗ್ರಾಮಸ್ಥರು ಆತಂಕ ಪಡುವ ಅವಶ್ಯಕತೆಯಿಲ್ಲ ಎಂದಿದ್ದಾರೆ.

ಚಾಮರಾಜನಗರ 5 ಸಾವಿರ ಎಕರೆ ಜಾಗದ ವಿಚಾರದ ರಾಜಮಾತೆ ಪ್ರಮೋದೇವಿ ಒಡೆಯರ್ ಮಾತನಾಡಿ, ಗ್ರಾಮಸ್ಥರು ಯಾರು ಆತಂಕ ಪಡಬಾರದು. ಏನೇ ಸಮಸ್ಯೆ ಇದ್ರು ನಮ್ಮನ್ನು ಭೇಟಿ ಮಾಡಿ. ನಮ್ಮ ಕಚೇರಿಗೆ ಬನ್ನಿ ಎಂದಿದ್ದಾರೆ ಪ್ರಮೋದಾದೇವಿ ಒಡೆಯರ್. ಕಂದಾಯ ಗ್ರಾಮ ಮಾಡುತ್ತೆವೆ ಎಂದು ಸರ್ಕಾರ ಹೇಳಿದೆ. ಅದಕ್ಕಾಗಿ ತಕರಾರು ಅರ್ಜಿ ಹಾಕಿದ್ದೇವೆ. ರಾಜರು ಗಿಫ್ಟ್ ಕೊಟ್ಟಿದ್ರೆ ಅವರ ಬಳಿ ಪತ್ರ ಇರುತ್ತದೆ. ನಾವು ಯಾರಿಗೂ ತೊಂದರೆ ಕೊಡಲ್ಲ. ಅಂತವರ ಜಾಗಕ್ಕೆ ನಾವು ಹೋಗಲ್ಲ. ಜನರು ಯಾವುದಕ್ಕೂ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.
ನಮ್ಮ ಹೆಸರಿನ ಜಾಗದಲ್ಲಿ ಜನರು ಇದ್ದರೂ ಅವರಿಗೆ ಉಳಲು ಜಮೀನು ಕೊಡ್ತೀವಿ. ಯಥಾಸ್ಥಿತಿ ಇರುವ ಹಾಗೆ ನೋಡಿಕೊಳ್ಳುತ್ತೇವೆ. ನನ್ನ ಕಡೆಯಿಂದ ಗ್ರಾಮಸ್ಥರಿಗೆ ಯಾವುದೇ ತೊಂದರೆಯಿಲ್ಲ. ನಮ್ಮ ಭೂಮಿಯಲ್ಲಿ ಅವರಿದ್ದರು ನಾವು ಒಕ್ಕಲೆಬ್ಬಿಸುವ ಕೆಲಸ ಮಾಡಲ್ಲ. ರಾಜರಿಂದ ಗಿಫ್ಟ್ ಕೊಟ್ಟಿರೋ ದಾಖಲೆ ಇದ್ರೆ ತೊಂದರೆ ಇಲ್ಲ. ದಾಖಲೆ ಇಲ್ಲದಿದ್ದರೂ ಅಂತವರಿಗೆ ತೊಂದರೆ ಇಲ್ಲ. ಕಂದಾಯ ಗ್ರಾಮಕ್ಕೆ ನಮ್ಮ ವಿರೋಧವಿದೆ. ಅದರಲ್ಲಿ ನಮ್ಮ ಜಮೀನು ಇದೆ ಅಂತ ಅರ್ಜಿ ಹಾಕಿದ್ದೇವೆ. ನಮ್ಮ ಗಮನಕ್ಕೆ ಕಂದಾಯ ಗ್ರಾಮದ ಬಗ್ಗೆ ಯಾರೂ ಮಾಹಿತಿ ನೀಡಿಲ್ಲ. ಅದಕ್ಕಾಗಿ ತಕರಾರು ಅರ್ಜಿ ಹಾಕಿದ್ದೇವೆ ಎಂದಿದ್ದಾರೆ.
ಚಾಮರಾಜನಗರದಲ್ಲಿ ರಾಜಮಾತೆ ಪ್ರಮೋದ ದೇವಿ ಹೇಳಿಕೆ ಬೆನ್ನಲ್ಲೆ ಸಿದ್ದಯ್ಯನಪುರ ಗ್ರಾಮಸ್ಥರು ಪ್ರತಿಕ್ರಿಯೆ ನೀಡಿದ್ದು, ಕಂದಾಯ ಗ್ರಾಮ ಮಾಡದಂತೆ ರಾಜಮಾತೆ ಪ್ರಮೋದಾ ದೇವಿ, ಜಿಲ್ಲಾದಿಕಾರಿಗೆ ತಕರಾರು ಆರ್ಜಿ ಸಲ್ಲಿಸಿದ್ರು. ಯಾರಿದೂ ತೊಂದರೆ ಕೊಡಲ್ಲ ಎಂಬ ಹೇಳಿಕೆಯನ್ನು ಸ್ವಾಗತಿಸಿತ್ತೇವೆ. ಆದರೆ ಕಂದಾಯ ಗ್ರಾಮ ಮಾಡಬಾರದು ಎಂಬುದು ಸರಿಯಲ್ಲ. ರಾಜಮಾತೆ ಹೇಳಿಕೆ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಆಗಿದೆ. ಕಂದಾಯ ಗ್ರಾಮ ಮಾಡಲು ಅವಕಾಶ ಕೊಡಬೇಕು. ತಕರಾರು ಅರ್ಜಿ ವಾಪಸ್ ಪಡೆಯಬೇಕು ಎಂದು ಸಿದ್ದಯ್ಯನಪುರ ಗ್ರಾಮಸ್ಥರ ಮನವಿ ಮಾಡಿದ್ದಾರೆ.
ಕಂದಾಯ ಗ್ರಾಮ ಮಾಡದಿದ್ದರೆ ನಮಗೆ ಯಾವುದೇ ಸರ್ಕಾರಿ ಸೌಲಭ್ಯ ಸಿಗಲ್ಲ. ಕಂದಾಯ ಗ್ರಾಮ ಆಗದಿದ್ದರೆ ನಮ್ಮ ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಕೂಡ ಸೌಲಭ್ಯದಿಂದ ವಂಚಿತರಾಗುತ್ತೇವೆ. ವಿದ್ಯಾಭ್ಯಾಸ, ಕೃಷಿ ಸೇರಿದಂತೆ ಯಾವುದೇ ವಿಚಾರಕ್ಕೆ ಬ್ಯಾಂಕ್ಗಳಿಂದ ಸಾಲ ಸೌಲಭ್ಯ ಸಿಗಲ್ಲ. ಮೈಸೂರು ರಾಜ ಮನೆತನದ ಮೇಲೆ ಅಪಾರ ಗೌರವ ಇಟ್ಟಿದ್ದೇವೆ. ಯಾವುದೇ ಕಾರಣಕ್ಕೂ ಆ ಗೌರವ ಕಿಂಚಿತ್ತೂ ಕೂಡ ಕಡಿಮೆಯಾಗಲ್ಲ. ಅವಶ್ಯಕತೆ ಬಿದ್ದರೆ ಗ್ರಾಮಸ್ಥರು ಒಗ್ಗೂಡಿ ಮೈಸೂರಿಗೆ ನಿಯೋಗ ಹೋಗುತ್ತೇವೆ. ರಾಜಮಾತೆಯನ್ನು ಭೇಟಿ ಮಾಡಿ ವಾಸ್ತವ ಅರ್ಥ ಮಾಡಿಸ್ತೇವೆ ಎಂದಿದ್ದಾರೆ.
