ಹಳ್ಳಿ ಮಕ್ಕಳಿಗಾಗಿ ಹೊಸ ಎಜುಕೇಶನ್ ಆ್ಯಪ್ ಲಾಂಚ್ ಮಾಡಿದ ಜೆ.ಹೆಚ್ ಪಟೇಲ್ ಪುತ್ರ ಮಹೀಮ ಪಟೇಲ್
ಹಳ್ಳಿ ಮಕ್ಕಳಿಗಾಗಿಯೇ ಹೊಸ ಎಜುಕೇಶನ್ ಆಪ್ ಲಾಂಚ್ ಅನ್ನು ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಜೆ ಹೆಚ್ ಪಟೇಲ್ ಅವರ ಪುತ್ರ ಮಹಿಮಾ ಪಟೇಲ್ ಮತ್ತು ಝರೋದ ಫೌಂಡರ್ ರೇವತಿ ಕಾಮತ್ ಹಾಗೂ ಖ್ಯಾತ ವೈದ್ಯ ದೀಪಕ್ ಆರಾಧ್ಯ ಅವರು ರಿಯೋ ಎನ್ನುವ ಹೊಸ ಆಪ್ ಲಾಂಚ್ ಮಾಡಿದ್ದಾರೆ.
ರಿಯೋ ಆನ್ಲೈನ್ ಎಜುಕೇಶನ್ ಪ್ಲಾಟ್ಫಾರ್ಮ್ ಆಗಿದ್ದು ವಿಶೇಷವಾಗಿ ಹಳ್ಳಿ ಮಕ್ಕಳಿಗಾಗಿಯೇ ತಯಾರಿಸಲಾಗಿದೆ. ಕಡಿಮೆ ಬೆಲೆಯಲ್ಲಿ ರಿಯೋ ಆಪ್ ಸಬ್ ಸ್ಕ್ರಿಪ್ಷನ್ ಸಿಗಲಿದ್ದು ಪೋಷಕರು ಕಡಿಮೆ ಖರ್ಚಿನಲ್ಲಿ ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡಬಹುದಾಗಿದೆ. ಸುಮಾರು ನಾಲ್ಕು ವರ್ಷಗಳ ಕಾಲ ರಿಸರ್ಚ್ ಮಾಡಿ ರಿಯೊ ಆಪ್ ಡೆವಲಪ್ ಮಾಡಿದ್ದಾರೆ ರಘು ಎಂ ಗೌಡ ಹಾಗೂ ತಂಡದವರು. ಈ ಆನ್ ಲೈನ್ ಆಪ್ ಮೂಲಕ ಮಕ್ಕಳು ಉತ್ತಮ ಗುಣಮಟ್ಟದ ಎಜುಕೇಶನ್ ಅನ್ನು ಪಡೆಯಬಹುದಾಗಿದೆ. ಝರೋದ ಫೌಂಡರ್ ರೇವತಿ ಕಾಮತ್ ಮಾತನಾಡಿ, ‘ಕೇವಲ ಬುಸಿನೆಸ್ ದೃಷ್ಟಿಯಿಂದ ಅಲ್ಲದೇ ಹಳ್ಳಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಕಡೆ ಹೆಚ್ಚು ಗಮನ ಹರಿಸಬೇಕು’ ಎಂದು ಹೇಳಿದರು. ಅನೇಕ ದಿನಗಳ ಬಳಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಮಹೀಮ ಪಟೇಲ್ ಮಾತನಾಡಿ, ‘ಅನೇಕ ಹಳ್ಳಿಯ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣದ ಕೊರತೆ ಇದೆ, ಅಂತಹ ಶಾಲೆಗಳಲ್ಲಿ ಈ ಆಪ್ ಅನ್ನ ಅಳವಡಿಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು’ ಎಂದು ಹೇಳಿದರು.