ಬಾದ್ ಷಾ ಕಿಚ್ಚ ಸುದೀಪ ಅಭಿನಯದ ಬಹು ನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರದ ಟ್ರೈಲರ್ ಜೂನ್ 23ಕ್ಕೆ ಬಿಡುಯಾಗಲಿದೆ ಎಂದು ತಿಳಿದು ಬಂದಿದೆ.
ಫ್ಯಾಂಟಸಿ ಕಥಾ ಹಂದರ ಹೊಂದಿರುವ ವಿಕ್ರಾಂತ್ ರೋಣ ಜುಲೈ 28ಕ್ಕೆ ವಿಶ್ವದಾದ್ಯಂತ ತೆರೆ ಕಾಣಲಿದೆ. ಈ ಕುರಿತು ಸ್ವತಃ ನಟ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದು ಒಮ್ಮ ನೀವು ಒಮ್ಮೆ ನೀವು ಪ್ರವೇಶಿಸಿದ್ದರೆ ತಪ್ಪಿಸಿಕೊಳ್ಳುವುದು ನಿಮ್ಮ ಆಯ್ಕೆಯಾಗಿರಬಾರದು ಎಂದು ಟ್ವೀಟ್ ಮಾಡಿದ್ದಾರೆ.
ಚಿತ್ರವನ್ನು ಶಾಲಿನಿ ಹಾಗು ಜಾಕ್ ಮಂಜುನಾಥ್ ಜಂಟಿಯಾಗಿ ನಿರ್ಮಾಣ ಮಾಡಿದ್ದು ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶಿಸಿದ್ದು, ಕಿಚ್ಚನಿಗೆ ಜೊತೆಯಾಗಿ ನೀತಾ ಅಶೋಕ್ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಬಾಲಿವುಡ್ ನಟಿ ಜಾಕ್ವಲಿನ್ ಫರ್ನಾಂಡಿಸ್ ನಟಿಸಿದ್ದು ಅಜನೀಶ್.ಬಿ.ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.