ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ಯತ್ನಾಳ್ ಜಗಳದ ಪರಿಣಾಮ ಸಾಬರ ಮೇಲೆ ಬೀಳ್ತಿದೆ ಎಂದು ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಅರೋಪಿಸಿದ್ದಾರೆ.ದಾವಣಗೆರೆಯಲ್ಲಿ ಯಾವ ಪುರುಷಾರ್ಥಕ್ಕೆ ಹಿಂದೂ ಸಮಾವೇಶ ಮಾಡ್ತಾರೆ..? ಸಿದ್ದರಾಮಯ್ಯ ಅವರನ್ನು ಭಯಪಡಿಸೋಕೆ ಮಾಡ್ತೀರಾ..? ಎಂದಿದ್ದಾರೆ.
ಯಡಿಯೂರಪ್ಪ ಮತ್ತು ಸಿದ್ಧರಾಮಯ್ಯ ಇಬ್ಬರೂ ಹಿಂದೂಗಳೇ, ಬಿಜೆಪಿ ಅಧ್ಯಕ್ಷರಿಗಾಗಿ ಬೇಕೆಂದರೂ ವಕ್ಫ್ ಬೋರ್ಡ್ ಬೇಕು, ಚುನಾವಣೆ ಬಂತೆಂದ್ರೆ ರಾಮಮಂದಿರ, ಹಿಜಾಬ್, ಗೋಹತ್ಯೆ. ಬಿಜೆಪಿ ರಾಜ್ಯ ಪ್ರವಾಸದ ವಿರುದ್ಧ ನಾವೂ ಪ್ರವಾಸ ಮಾಡ್ತಿದ್ದೇವೆ. ಜಾತಿ, ಧರ್ಮದ ಹೆಸರಲ್ಲಿ ಸಮಾಜ ಒಡೆಯಲು ಬಿಡಲ್ಲ ಎಂದಿದ್ದಾರೆ.
ಕಾಂಗ್ರೆಸ್‌ನಿಂದ ಬಿಜೆಪಿಗೆ ಸಮರ್ಪಕ ಉತ್ತರ ನೀಡಲಾಗ್ತಿಲ್ಲ. ಬಿಜೆಪಿ ಇದ್ದಾಗಲೇ ಮುಡಾ ಸೈಟ್ ಕೊಡಲಾಗಿದೆ. ವಕ್ಫ್ ವಿಚಾರವಾಗಿ ಸಚಿವರೊಬ್ಬರು ಅದಾಲತ್ ಮಾಡಲು ಹೋಗಿ ಕಸವನ್ನು ಮೈಮೇಲೆ ಸುರಿದುಕೊಂಡರು. 2700 ನೋಟಿಸ್ ಬೊಮ್ಮಾಯಿ ಅವಧಿಯಲ್ಲಿ ಕೊಟ್ಟಿದ್ದಾರೆ, ಸಿದ್ಧರಾಮಯ್ಯ ಅವಧಿಯಲ್ಲಿ ಬರೀ 1400 ಮಾತ್ರ ನೋಟಿಸ್ ಕೊಟ್ಟಿದ್ದಾರೆ ಎಂದು ಸಮರ್ಥಿಸಕೊಂಡಿದ್ದಾರೆ.
ವಕ್ಫ್ ಬೋರ್ಡ್ ಗೆ ಹೆಚ್ಚಿನ ದುಡ್ಡು ಕೊಟ್ಟವರು ಯಡಿಯೂರಪ್ಪ, ಯಡಿಯೂರಪ್ಪ ಸೌಮ್ಯವಾಗಿ ಇದ್ದಾರೆ. ಸೌಮ್ಯವಾಗಿದ್ದವರನ್ನು ಕಿತ್ತು ಹಾಕಿ ಉಗ್ರವಾದಿಗಳು ಬರಬೇಕೆನ್ನೋ ಪ್ರಯತ್ನ ನಡೆದಿದೆ. ಅದೇನಾದರೂ ಆದರೆ ಹಿಂದೆ ಆದಂತೆ ಬಿಜೆಪಿ 40 ಸ್ಥಾನಕ್ಕೆ ಇಳಿಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಜಗನ್ ಸರ್ಕಾರ ಮಾಡಿದ್ದ ವಕ್ಫ್ ಬೋರ್ಡ್ ಅನ್ನು ನಾಯ್ಡು ಸರ್ಕಾರ ರದ್ದು ಮಾಡಿದೆ. ಚಂದ್ರಬಾಬು ನಾಯ್ಡು ನಿಲುವು ಭಿನ್ನವಾಗಿದೆ. ಕೇಂದ್ರದಲ್ಲಿ ವಕ್ಫ್ ಬೋರ್ಡ್ ಬಿಲ್‌ಗೆ ಬೆಂಬಲ ಕೊಡ್ತಿಲ್ಲ. ಹಿಂದೂಗಳು ಕನಿಷ್ಟ ಮೂರು ಮೂರು ಮಕ್ಕಳನ್ನು ಮಾಡಿ ಅಂತ ಭಾಗವತ್ ಅವರೆ ಹೇಳಿದ್ದಾರೆ. ಇದಕ್ಕೆ ಯತ್ನಾಳ್ ಏನು ಹೇಳ್ತಾರೆ…? ಎಂದು ಪ್ರಶ್ನಿಸಿದ್ದಾರೆ.