2023 ರ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಗ ಯತಿಂದ್ರ ಶಾಸಕರಾದ ವರುಣಾ ಕ್ಷೇತ್ರದಿಂದ ಮುಖ್ಯಮಂತ್ರಿ ಯಡಿಯೂರಪ್ಪನವರ ಮಗ ಬಿ,ವೈ ವಿಜಯೇಂದ್ರ ಸ್ಪರ್ಧಿಸಲಿದ್ದಾರೆಂದು ಸ್ವತಃ ಯಡಿಯೂರಪ್ಪನವರೇ ಮಾಹಿತಿ ಹಂಚಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ.
ವರುಣಾ ಕ್ಷೇತ್ರದೊಂದಿಗೆ ವಿಜಯೇಂದ್ರ ಅವರು ಉತ್ತಮ ಒಡನಾಟ ಹೊಂದಿದ್ದಾರೆ. ಕ್ಷೇತ್ರದಲ್ಲಿ ವಿಜಯೇಂದ್ರ ತಮ್ಮ ಪ್ರತಿಷ್ಟೆಯನ್ನು ಹೆಚ್ಚಿಸಿಕೊಳ್ಳಲು, ಹಲವು ಸಮಸ್ಯೆಗಳಿಗೆ ಪರಿಹಾರವನ್ನು ಒದಿಗಿಸಲು ಈಗಾಗಲೇ ಮುಂದಾಗಿದ್ದಾರೆ. ವರುಣಾ ಕ್ಷೇತ್ರದ ಇಮ್ಮಾವುಗೆ ಫಿಲ್ಮ್ ಸಿಟಿ ಪ್ರಾಜೆಕ್ಟ್ ತರುವಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯ ಸಹಾಯ ಪಡೆದು ಕಾರ್ಯ ಯಶಸ್ವಿಗೊಳಿಸಿದ್ದಾರೆ. ಇದು ಸ್ಥಳೀಯರಿಗೆ ಹೆಚ್ಚು ಉದ್ಯೋಗ ಸೃಷ್ಟಿಸುವಲ್ಲಿ ಸಹಕಾರಿಯಾಗಲಿದೆ ಎನ್ನಲಾಗಿದೆ. ಕ್ಷೇತ್ರದಲ್ಲಿ ಭೂ ಸಮಸ್ಯೆ ಹಾಗು ಮಷ್ಕರದಲಿ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸುವಲ್ಲಿಯೂ ವಿಜಯೇಂದ್ರ ಸಹಕರಿಸಿದ್ದರು.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ವಿಜಯೇಂದ್ರ ಅವರು ವರುಣಾ ಕ್ಷೇತ್ರದಲ್ಲಿ ಪಕ್ಷದ ನಾಯಕತ್ವ ವಹಿಸಿಕೊಳ್ಳುವುದರಿಂದ ಬಿಜೆಪಿಯ ನೆಲೆಯನ್ನು ಗಟ್ಟಿಗೊಳ್ಳಿಸುತ್ತದೆ, ಇದು ಪಕ್ಕದ ಕ್ಷೇತ್ರದ ಮೇಲೂ ಪ್ರಭಾವ ಬೀರಲಿದೆ. ಹಾಗು ಮೈಸೂರಿನಲ್ಲಿ ಕಾಂಗ್ರೆಸ್ ಭದ್ರಕೋಟೆಯಿಂದ ಬಿಜೆಪಿ ಭದ್ರಕೋಟೆಯಾಗಿ ಮಾರ್ಪಾಡು ಮಾಡಲು ಸಹ ಇದು ಸಹಕಾರಿಯಾಗುತ್ತದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೀವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರದಲ್ಲಿ ವಿಜಯೇಂದ್ರ ಅವರ ಭಾಗವಹಿಸುವಿಕೆ ಮತ್ತು ಹೊಸ ಕೌಶಲ್ಯಗಳು ಕಾರ್ಯಕರ್ತರ ಮನೋಸ್ಥರ್ಯವನ್ನು ಗಟ್ಟಿಗೊಳಿಸುವುದರ ಜೊತೆಗೆ ಬದಲಾವಣೆಗೆ ಸಹಕಾರಿಯಾಗಲಿದೆ ಎಂದು ಸ್ಥಳೀಯ ನಾಯಕರಾದ ಗೋಕುಲ್ ಗೋವರ್ಧನ್ ಮತ್ತು ಮಾದೇಶ್ ಅವರು ಹೇಳಿದ್ದಾರೆ.

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ಭೇಟಿ ನೀಡಿದ ವೇಳೆ ದಲಿತರ, ಬಡವರ ವಸತಿಗಳಿಗೆ ಭೇಟಿ ನೀಡಿ ಸಮಸ್ಯೆಯನ್ನು ಆಲಿಸುವುದು, ಸ್ಥಳೀಯ ನಾಯಕರೊಂದಿಗೆ ಸಂವಹನ ನಡೆಸುವುದು. ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಹೆಣೆದ ತಂತ್ರವಾಗಿ ಗೋಚರಿಸುತ್ತದೆ.
ಮೂಲ -ಇಂಡಿಯನ್ ಎಕ್ಸ್‌ಪ್ರೆಸ್