ನಿನ್ನೆ ವಿಜಯೇಂದ್ರ (Vijayendra) ವಿರುದ್ಧ ಚಿಕ್ಕಬಳ್ಳಾಪುರ ಸಂಸದ ಸುಧಾಕರ್ (Sudhakar) ವಾಗ್ದಾಳಿ ನಡೆಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ವಿಜಯೇಂದ್ರ ಪ್ರತಿಕ್ರಿಯಿಸಿದ್ದು,ಸುಧಾಕರ್ ಅವರ ಹೇಳಿಕೆ ನನಗೆ ಅಚ್ಚರಿ ತಂದಿದೆ. ಅವರು ಭೇಟಿ ಮಾಡಬೇಕು ಅಂತ ಮೆಸೇಜ್ ಹಾಕಿದ್ರು,ದೆಹಲಿಯ ಕಾರ್ಯಕ್ರಮ ಫಿಕ್ಸ್ ಆಗಿತ್ತು.ಅಲ್ಲಿಂದ ಬಂದು ಭೇಟಿ ಮಾಡ್ತೀನಿ ಅಂತ ಹೇಳಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನು ಜಿಲ್ಲಾಧ್ಯಕ್ಷರ ಆಯ್ಕೆ ನಾನು ಮಾಡಿಲ್ಲ.ಇಲ್ಲಿಂದ ಅಳೆದುತೂಗಿ ಪಟ್ಟಿ ಕಳುಹಿಸಿದ್ದಾರೆ. ಇದ್ರಲ್ಲಿ ನನ್ನ ಪಾತ್ರ ಏನೇನು ಇಲ್ಲ ಎಂದಿದ್ದು, ಸುಧಾಕರ್ ಅವರನ್ನು ಮುಂದೆ ಭೇಟಿ ಮಾಡಿ ಮಾತನಾಡುತ್ತೇನೆ, ನನಗೆ ಅವ್ರು ಕರೆ ಮಾಡಿಲ್ಲ ಎಂದಿದ್ದಾರೆ.
ಇನ್ನು ಪಕ್ಷದಲ್ಲಿ ವಿಜಯೇಂದ್ರ ಟಾರ್ಗೆಟ್ ಆಗಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಪಕ್ಷದ ಹಿತದೃಷ್ಟಿಯಿಂದ ಯಾರೇ ಏನೇ ಮಾತನಾಡಿದ್ರು ಸಹಿಸಿಕೊಳ್ಳುತ್ತೇನೆ. ನಾನು ಯಡಿಯೂರಪ್ಪ ಮಗ ಇದ್ದೇನೆ. ಪಕ್ಷದಲ್ಲಿ ಜವಾಬ್ದಾರಿ ಕೊಟ್ಟಿದ್ದಾರೆ,ದೇವ್ರು ತಾಳ್ಮೆ ಕೊಟ್ಟಿದ್ದಾನೆ. ಸುಧಾಕರ್ ಅವರನ್ನು ಭೇಟಿಯಾಗಿ ಮಾತನಾಡುತ್ತೇನೆ ಎಂದಿದ್ದಾರೆ.