ಮಂಡ್ಯ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿ.ವೈ. ವಿಜಯೇಂದ್ರ ಎಲ್ಲಿಂದ ಸ್ಪರ್ಧೆ ಮಾಡಬೇಕು ಎಂಬುದನ್ನ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಪಾಂಡವಪುರದಲ್ಲಿ ಸುದ್ದಿಗಾರರೊಂದಿಗೆ ಮಾತಮಾಡಿದ ಅವರು, ವಿಜಯೇಂದ್ರ ಎಲ್ಲಿ ಸ್ಪರ್ಧೆ ಮಾಡಬೇಕು ಎಂಬುದನ್ನ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದ ಅವರು, ವರುಣಾ ಕ್ಷೇತ್ರದಿಂದ ಸ್ಪರ್ಧೆಗೆ ಹೆಚ್ಚಿದ ಒತ್ತಾಡ ವಿಚಾರದ ಬಗ್ಗೆ ನೀವು ಹೇಳಬೇಕು ಎಂದು ಪತ್ರಕರ್ತರ ಪ್ರಶ್ನೆಗೆ ನಗುತ್ತಲೇ ಉತ್ತರ ನೀಡಿದರು.
ಮಂಡ್ಯ ಜಿಲ್ಲೆಗೆ ಬಂದಿರುವುದು ಸಂತೋಷವಾಗಿದೆ. ಈ ಭಾಗದ ಜನರ ಅಭಿವೃದ್ಧಿಗೆ ಶಕ್ತಿ ಮೀರಿ ಕೆಲಸ ಮಾಡುತ್ತೇವೆ. ಈ ಬಾರಿ ಮಂಡ್ಯ ಜಿಲ್ಲೆ ನಾಲ್ಕೈದು ಸ್ಥಾನವನ್ನ ಗೆಲ್ಲಬೇಕಿದ್ದು, ನಾಲ್ಕೈದು ಸೀಟ್ ಗೆಲ್ಲುವುದಕ್ಕೆ ನನ್ನ ಊರಿನ ಜನ ಆಶೀರ್ವಾದ ಮಾಡಬೇಕಿದೆ. ಇದು ಸಾಧ್ಯವಾದರೆ ಮಾತ್ರ ನಾನು ಇಲ್ಲಿ ಹುಟ್ಟಿದ್ದು ಸಾರ್ಥಕವಾಗುತ್ತೆ, ಇದಕ್ಕೆ ಜನರ ಆಶೀರ್ವಾದ ಮಾಡಬೇಕಿದೆ ಎಂದರು













