ಲೋಕ ಸಮರ ಹತ್ತಿರವಾಗ್ತಿದ್ದಂತೆ ನಾಯಕರ ನಡುವಿನ ವಾಕ್ಸಮರ ಜೋರಿದೆ.ಪ್ರಮುಖ ನಾಯಕರ ವಾಗ್ಯುದ್ಧ ಹೆಚ್ಚಾಗಿದೆ.ಮೈಸೂರಿನಲ್ಲಿ(Mysore) ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (vijayendra)
ಕೈ ನಾಯಕರಿಗೆ ಟಾಂಗ್ ನೀಡಿದ್ದಾರೆ.ಗ್ಯಾರೆಂಟಿ ನಿಲ್ಲಿಸಿದರೆ ಜನರೇ ಬಡಿಗೆ ತೆಗೆದುಕೊಂಡು ಸರ್ಕಾರವನ್ನ (Congress) ಬಡೆಯುತ್ತಾರೆ ಎಚ್ಚರವಿರಲಿ.ಗ್ಯಾರೆಂಟಿ (guarantee)ಹೆಸರು ಹೇಳಿಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ.ನಾನು ಕೇಳುತ್ತಿರುವುದು ಈ ಸರ್ಕಾರದಲ್ಲಿ ಯಾವ ಅಭಿವೃದ್ಧಿ ಕೆಲಸಗಳು ಆಗುತ್ತಿವೆ ಹೇಳಿ.ಒಂದೇ ಒಂದು ನಯಾ ಪೈಸೆ ಬಿಡುಗಡೆಯಾಗಿದ್ಯಾ?
ನನ್ನ ಪ್ರಶ್ನೆ ಅದು ಅಂತ ಕಿಡಿಕಾರಿದ್ದಾರೆ.
ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣಕ್ಕೆ ಪ್ರತಿಕ್ರಿಯೆ ಕೊಟ್ಟ ವಿಜಯೇಂದ್ರ,ದುರಂಹಕಾರದ ಹೇಳಿಕೆಗಳನ್ನ ಯಾರು ಕೂಡ ಸಹಿಸಲ್ಲ.ಗಂಭೀರವಾದ ಘಟನೆ ನಡೆದಿದೆ.ವೈಯಕ್ತಿಕ ವಿಚಾರಕ್ಕೆ ಕೊಲೆಯಾಗಿದೆ ಎಂದು ಸಚಿವರು ಹೇಳುತ್ತಾರೆ.ಇದು ಅಕ್ಷಮ್ಯ ಅಪರಾಧ.ಕಾಂಗ್ರೆಸ್ ಸಚಿವರು ಒಂದು ಕೋಮನ್ನ ಓಲೈಸಲು ಮುಂದಾಗಿದ್ದಾರೆ.ಪೋಷಕರು ಮಗಳನ್ನ ಕಳೆದುಕೊಂಡು ದುಖದಲ್ಲಿದ್ದಾರೆ.ಅವರಿಗೆ ಸಾಂತ್ವಾನ ಹೇಳಬೇಕು.
ರಾಜ್ಯದ ಹೆಣ್ಣು ಮಕ್ಕಳಿಗೆ ರಕ್ಷಣೆ ಕೊಡಬೇಕು.ಬಿಜೆಪಿ ಚುನಾವಣೆಯನ್ನ ಬದಿಗುಟ್ಟು ಹೋರಾಟ ಮಾಡುತ್ತಿದ್ದೇವೆ.
ನೇಹಾ ಪೋಷಕರೇ ಈ ಘಟನೆ ಹಿಂದೆ ಲವ್ ಜಿಹಾದ್ ಇದೇ ಅಂಥ ಹೇಳಿದ್ದಾರೆ.ರಾಜ್ಯದಲ್ಲಿ ತಾಲಿಬಾನ್ ಸರ್ಕಾರ ಅಂಥ ಜನರು ಮಾತನಾಡುತ್ತಿದ್ದಾರೆ.
ಇದಕ್ಕೆಲ್ಲಾ ರಾಜ್ಯದ ಜನರು ಉತ್ತರ ಕೊಡುತ್ತಾರೆ ಎಂದರು.ನೇಹಾ ಹಾಗೂ ಆರೋಪಿ ಪೋಟೋ ವೈರಲ್ ಆಗ್ತಿದೆ.ಇಂತಹ ನೀಚ ಕೆಲಸ ಮಾಡುವುದರಲ್ಲಿ ಕಾಂಗ್ರೆಸ್‌ನವರು ನಿಸ್ಸೀಮರು.
ಪೋಟೋ ವೈರಲ್ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಎಂದು ಗಂಭೀರ ಆರೋಪ ಮಾಡಿದ್ರು.
ಸಿದ್ದರಾಮಯ್ಯ ಹಿಂದುಳಿದ ವರ್ಗದ ನಾಯಕರು ಅಂತಾ ಹೇಳಿ.
ಹಿಂದುಳಿದವರನ್ನು ಕೈ ಬಿಟ್ಟು ಅಲ್ಪಸಂಖ್ಯಾತರನ್ನು ಮಾತ್ರ ಕೈ ಹಿಡಿದಿದ್ದಾರೆ.ಇದಕ್ಕೆ ಜನರು ಚುನಾವಣೆಯಲ್ಲಿ ಉತ್ತರ ನೀಡುತ್ತಾರೆ.ಲೋಕಸಭೆ ಮಾತ್ರವಲ್ಲ ಮುಂದಿನ ದಿನಗಳಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಅಂತ ಹೇಳಿದ್ರು.ಚುನಾವಣೆ ಮುಗಿದ ಮೇಲೆ ನಲಪಾಡ್ ಹಾಗೂ ಕಾಂಗ್ರೆಸ್ ನಾಯಕರಿಗೆ ಚೊಂಬು ಹಿಡಿದು ಓಡುವ ಪರಿಸ್ಥಿತಿ ಬರಲಿದೆ.
ಕಾಂಗ್ರೆಸ್ ಜಾಹೀರಾತು, ಹೇಳಿಕೆಗಳಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ.ಅವರು ಏನಾದರೂ ಜಾಹೀರಾತು ಕೊಟ್ಟಿಕೊಳ್ಳಲಿ.
ಈ ಬಾರಿ ಜನ ಮತ್ತೆ ಮೋದಿ ಅವರನ್ನು ಪ್ರಧಾನಿ ಮಾಡುತ್ತಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ.
ದೇಶದಲ್ಲಿ ಕಾಂಗ್ರೆಸ್ 50 ಸೀಟ್ ಸಹ ದಾಟಲ್ಲ.ಆದ್ದರಿಂದ ಪ್ರಣಾಳಿಕೆ ಗ್ಯಾರಂಟಿ ಯಾವುದು ಜಾರಿಯಾಗಲ್ಲ ಅಂತ ಮೈಸೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿಕೆ ನೀಡಿದ್ರು.