ರಾಜ್ಯದಲ್ಲಿ ಇಂದಿನಿಂದ ವೀಕೆಂಡ್ ಕರ್ಫೂ ಜಾರಿಯಾದ ಹಿನ್ನೆಲೆಯಲ್ಲಿ ವಿಜಯಪುರ ನಗರದಲ್ಲಿ ಏಕಮುಖ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ.
ಪೊಲೀಸರು ಒಂದು ಬದಿಯ ರಸ್ತೆ ಬಂದ್ ಮಾಡಿದ್ದು, ಇನ್ನೊಂದು ಮಾರ್ಗದಲ್ಲಿ ತಪಾಸಣೆಗೆ ಅನುಕೂಲವಾಗಲಿ ಅನ್ನೋ ಕಾರಣಕ್ಕೆ ಏಕಮುಖ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ.
ಅಥಣಿ-ಸಿಂದಗಿ ರಾಜ್ಯ ಹೆದ್ದಾರಿಯ ಒಂದು ರಸ್ತೆ ಬಂದಾಗಿದ್ದು, ಬೆಳ್ಳಂ ಬೆಳಗ್ಗೆ ಕೆಲ ಆಟೋ ಸಂಚಾರ ಕಂಡು ಬಂತು. ಇತ್ತ ಪೊಲೀಸರು ಲಾಠಿ ಹಿಡಿದು ಪೀಲ್ಡಿಗಿಳಿದ್ದಾರೆ.

ಅಲ್ಲಲ್ಲಿ ಗುಂಪಾಗಿ ನಿಂತವರಿಗೆ ಪೊಲೀಸರು ಲಾಠಿ ತೋರಿಸಿ ಚದುರಿಸಿ, ಗುಂಪು ಗುಂಪಾಗಿ ನಿಲ್ಲದಂತೆ ತಾಕೀತು ಮಾಡಿದ್ದಾರೆ. ಜೊತೆಗೆ ರಸ್ತೆ ಮೇಲೆ ಪತ್ರಿಕೆ ಮಾರಲು ಕೂತವರಿಗೂ ಪೊಲೀಸರು ಕ್ಲಾಸ್ ತೆಗೆದುಕೊಂಡಿದ್ದು ಕಂಡುಬಂತು.