ಕೇಂದ್ರದಲ್ಲಿ ಬಿಜೆಪಿ (8jp) ಆಗಲಿ, ಕಾಂಗ್ರೆಸ್ (congress) ಆಗಲಿ ಸರ್ಕಾರ ರಚನೆ ಮಾಡೋಕು ಅಂದ್ರೆ ಚಂದ್ರಬಾಬು ನಾಯ್ಡು (chandra babu naydu) ಮತ್ತು ನಿತೀಶ್ ಕುಮಾರ್ (Nitish kumar) ಅವರ ಬೆಂಬಲ ಬೇಕೇ ಬೇಕು.ಇದೀಗ ಇವರಿಬ್ಬರು ಕಿಂಗ್ ಮೇಕರ್ಗಳಾಗಿದ್ದಾರೆ. ದೇಶದ ಎರಡು ಕೂಟಗಳು ಈ ಇಬ್ಬರು ನಾಯಕರ ಹಿಂದೆ ಬಿದ್ದಿವೆ.
ಚಂದ್ರಬಾಬು ನಾಯ್ಡುಗೆ ಪ್ರಧಾನಿ ಮೋದಿ (modi), ಅಮಿತ್ ಶಾ (Amit sha) ಸೇರಿ ಪ್ರಮುಖ ನಾಯಕರು ಕರೆ ಮಾಡಿ ದೆಹಲಿಗೆ ಬರುವಂತೆ ಮನವಿ ಮಾಡಿದ್ದಾರೆ.ಎನ್ಡಿಎ (NDA) ಕೂಟದ ಸಂಚಾಲಕನ ಆಫರ್ ಸಹ ನೀಡಾಗಿದೆ. ಇನ್ನು ಇಂಡಿಯಾ (INDIA) ಕೂಟದಿಂದಲೂ ನಾಯ್ಡು ಹಾಗೂ ನಿತೀಶ್ ಸಂಪರ್ಕಕ್ಕೆ ಯತ್ನ ನಡೆದಿದೆ.ಶರದ್ ಪವಾರ್ ಕಡೆಯಿಂದ ಒಂದು ಪ್ರಯತ್ನ ನಡೀತಿದ್ರೆ, ಕೆ.ಸಿ. ವೇಣುಗೋಪಾಲ್ (Kc venugopal) ಸಹ ಸಂಪರ್ಕ ಕ್ರಾಂತಿಗಾಗಿ ಯತ್ನಿಸಿದ್ದಾರೆ.
ನಿತೀಶ್ಗೆ ಇಂಡಿಯಾ ಕೂಟ, ಉಪ ಪ್ರಧಾನಿ ಹುದ್ದೆ ಆಫರ್ನ್ನೇ ನೀಡಿಬಿಟ್ಟಿದೆ. ಇಲ್ಲಿ ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡುವ ಭರವಸೆಯನ್ನ ನಾಯ್ಡುಗೆ ಕೊಡ್ಡಾಗಿದೆ.ಆದ್ರೆ ಉಭಯ ಪಕ್ಷಗಳೂ ಎನ್ಡಿಎ ಜೊತೆಗಿರೋದಾಗಿ ಹೇಳ್ಕೊಂಡಿವೆ.