ಅತ್ಯಂತ ಕಿರಿಯ ವಯಸ್ಸಿನ ಅಭ್ಯರ್ಥಿ ಕಣದಲ್ಲಿ!
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಖಾಡದಲ್ಲಿ ಈ ಬಾರಿ ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅಭ್ಯರ್ಥಿಯಾಗಲಿದ್ದು, ಇಡೀ ದೇಶದ ಗಮನ ಸೆಳೆಯಲಿದ್ದಾರೆ. ಪ್ರಿಯಾಂಕಾ ಜಾರಕಿಹೊಳಿಗೆ ಈಗ ವಯಸ್ಸು 25 ವರ್ಷ 7 ತಿಂಗಳು. 25 ವರ್ಷದ ಮೇಲ್ಪಟ್ಟವರು ಚುನಾವಣೆಗೆ ಸ್ಫರ್ಧೆ ಮಾಡಬಹುದಾಗಿದ್ದು, ಅತ್ಯಂತ ಕಿರಿಯ ವಯಸ್ಸಿನ ಅಭ್ಯರ್ಥಿ ಅಂದರೆ ಅದು ಪ್ರಿಯಾಂಕಾ ಜಾರಕಿಹೊಳಿ ಎನ್ನಲಾಗುತ್ತಿದೆ.

