ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸೋ ನಿಟ್ಟಿನಲ್ಲಿ ಬಿಜೆಪಿ (BJP) ಹೈಕಮ್ಯಾಂಡ್ ಆಕ್ಟಿವ್ (Active)ಆಗಿದ್ರೆ ಇತ್ತ ರಾಜ್ಯದಲ್ಲಿ ಮಾತ್ರ ಬಿಜೆಪಿ ಆಂತರಿಕ ಜಗಳ ಇನ್ನೂ ಶಮನವಾಗಿಲ್ಲ. ಚುನಾವಣೆ (Election) ಇಷ್ಟು ಸನಿಹದಲ್ಲಿರುವಾಗ ಯತ್ನಾಳ್ (yatmak)ಮತ್ತೊಮ್ಮೆ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರತಾಪ್ ಸಿಂಹಗೆ (prathap simha) ಟಿಕೆಟ್ ಕೈ ತಪ್ಪುವ ವದಂತಿ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್, ಪೂಜ್ಯ ತಂದೆ ಮಕ್ಕಳು ಸೇರಿ ಬಿಜೆಪಿ (BJP) ಪಕ್ಷವನ್ನು ಮುಗಿಸಲು ಹೊರಟಿದ್ದಾರೆ ಎಂದು ಕಿಡಿ ಕಾರಿದರು. ಹಿರಿಯ ಮಗನನ್ನು ಕೇಂದ್ರದಲ್ಲಿ ಮಂತ್ರಿ (Central minister) ಮಾಡೋದು, ಕಿರಿಯ ಮಗನನ್ನ ರಾಜ್ಯದಲ್ಲಿ ಮುಖ್ಯಮಂತ್ರಿ(Chief minister) ಮಾಡೋದು ಮಾತ್ರ ಅವರ ಗುರಿ ಅಂತ ಜರಿದಿದ್ದಾರೆ.

ನನ್ನನೂ ಚುನಾವಣೆಗೆ ಸ್ಪರ್ಧೆ ಮಾಡಿ , ಕೇಂದ್ರ ಮಂತ್ರಿ ಮಾಡ್ತೀವಿ ಅಂತ ಹೈಕಮಾಂಡ್ (High command) ನಾಯಕರು ಹೇಳಿದ್ರೂ, ನಾನು ಬೇಡವೆಂದು ಹೇಳಿದೆ. ನಾನು ಕೇಂದ್ರಕ್ಕೆ ಹೋಗಿಬಿಟ್ರೆ ರಾಜ್ಯದಲ್ಲಿ ಅಪ್ಪ ಮಕ್ಕಳ ಆಟ ಇನ್ನು ಜಾಸ್ತಿಯಾಗುತ್ತೆ. ನಾನು ಯಾರಿಗೂ ಹೆದರಿ ರಾಜಕಾರಣ (politics) ಮಾಡಲ್ಲ. ಸದ್ಯ ರಾಜ್ಯದಲ್ಲಿ ಯಾವ ರೀತಿ ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ (Adjustment politics) ನಡೆಯುತ್ತಿದೆ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ ಅಂತ ಹೇಳಿದ ಅವರು , ಇದು ಮೋದಿ ಚುನಾವಣೆಯಲ್ಲ (Modi election) – ಯಡಿಯೂರಪ್ಪ (Yediyurappa) ಚುನಾವಣೆ ಅಂತ ಪರೋಕ್ಷವಾಗಿ BSY ಗೆ ತಿವಿದ್ರು.