ಬಾಗಲಕೋಟೆಯಲ್ಲಿ ಅಕ್ರಮವಾಗಿ ಬಟ್ಟೆ ಸಾಗಿಸುತ್ತಿದ್ದ ವಾಹನವನ್ನು ಸೀಜ್ ಮಾಡಲಾಗಿದೆ. ಗದ್ದನಕೇರಿ ಕ್ರಾಸ್‌ನ ಕಲಾದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸುಮಾರು 4 ಲಕ್ಷ, 24 ಸಾವಿರ ರೂಪಾಯಿ ಮೌಲ್ಯದ 106 ಬಂಡಲ್ ಬಟ್ಟೆಯನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಯಾವುದೇ ಬಿಲ್ ಹಾಗೂ ದಾಖಲಾತಿಗಳು ಇಲ್ಲದೇ ಬಟ್ಟೆಗಳನ್ನ ಸಾಗಿಸುತ್ತಿದ್ದ ಹಿನ್ನೆಲೆ, ವಾಹನವನ್ನ ಜಪ್ತಿ ಮಾಡಲಾಗಿದೆ. ಮಹಾರಾಷ್ಟ್ರದಿಂದ ಬಂದಿದ್ದ ಈ ವಾಹನ ಲೋಕಾಪುರದ ಕಡೆಗೆ ಹೊರಟಿತ್ತು ಎಂಬ ಮಾಹಿತಿ ಲಭ್ಯವಾಗಿದ್ದು, ಕಲಾದಗಿ ಪೊಲೀಸರು ವಾಹನವನ್ನು ಸೀಜ್ ಮಾಡಿದ್ದಾರೆ. ಸದ್ಯ ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ
