ಇಂದು ಹರಿಪ್ರಿಯಾ , ವಸಿಷ್ಠ ಪ್ರತಾಪ್ ಸಿಂಹ ಹಾಗೂ ಇನ್ನಿತರರು ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ತೆರಳಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಈ ಫೋಟೋಗಳನ್ನು ಪ್ರತಾಪ್ ಸಿಂಹ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ
ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿರುವುದು ಸಿನಿಪ್ರಿಯರಿಗೆ ತಿಳಿದ ವಿಚಾರ. ಈ ಜೋಡಿ ಪ್ರೀತಿಯಲ್ಲಿದ್ದಾರೆ ಎಂದು ಮೊದಲ ಬಾರಿ ತಿಳಿದಾಗ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸಿದ್ದರು. ಆದಷ್ಟು ಬೇಗ ಗುಡ್ ನ್ಯೂಸ್ ಕೊಡಿ ಎಂದು ಸೋಷಿಯಲ್ ಮೀಡಿಯಾ ಮೂಲಕ ಬೇಡಿಕೆ ಇಡುತ್ತಿದ್ದರು. ಈ ಜೋಡಿ ಇದೇ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ಸ್ಯಾಂಡಲ್‌ವುಡ್ ನಟಿ ಹರಿಪ್ರಿಯಾ, ಮೂಗು ಚುಚ್ಚಿಸಿಕೊಳ್ಳುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಅವರು ಸೀರೆ ಧರಿಸಿ , ಮದುವೆಗೆ ರೆಡಿ ಆಗ್ತಿರೋ ಮದು ಮಗಳಂತೆ ಬಹಳ ಸುಂದರವಾಗಿ ಕಾಣುತ್ತಿದ್ದರು. ಈ ವಿಡಿಯೋ ನೋಡಿದ ಅಭಿಮಾನಿಗಳು ಮದುವೆ ಫಿಕ್ಸ್ ಆಗಿರಬೇಕು, ಅದಕ್ಕೆ ಇದು ಮೊದಲ ತಯಾರಿ, ಹುಡುಗ ಯಾರು ಹೇಳಿ ಎಂದು ಕೇಳಿದ್ದರು. ಈ ವಿಡಿಯೋ ವೈರಲ್ ಆದ ಕೆಲವು ದಿನಗಳ ನಂತರ, ಸ್ವತ: ವಸಿಷ್ಠಸಿಂಹ, ಹರಿಪ್ರಿಯಾ ಬಳಿ ನಿಂತು, ಮೂಗು ಚುಚ್ಚಿಸಿರುವ ವಿಚಾರ ಬಹಿರಂಗವಾಯ್ತು.
ಇದಾದ ನಂತರ ಈ ಜೋಡಿ ದುಬೈ ಹಾಗೂ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಜೊತೆಯಾಗಿ ಕೈ ಹಿಡಿದು ಬರುತ್ತಿರುವ ಫೋಟೋಗಳು ರಿವೀಲ್ ಆಗಿತ್ತು. ಕೊನೆಗೂ ಡಿಸೆಂಬರ್ 2 ರಂದು ಇಬ್ಬರೂ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡು ನಂತರ ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾಗೆ ಅಭಿಮಾನಿಗಳು ಶುಭ ಕೋರಿದ್ದರು, ಆದರೆ ಕೆಲವು ಅಭಿಮಾನಿಗಳು ಮಾತ್ರ ಇಷ್ಟು ದಿನಗಳ ಕಾಲ ವಿಷಯ ಸೀಕ್ರೇಟ್ ಆಗಿ ಇಟ್ಟಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದರು. ಹೋಗಲಿ ಮದುವೆಯ ದಿನಾಂಕವಾದ್ರೂ ಮೊದಲೇ ಹೇಳಿ ಎಂದಿದ್ದರು. ಇದೀಗ ಈ ಜೋಡಿ ಮದುವೆ ದಿನಾಂಕ ಫಿಕ್ಸ್ ಆಗಿದೆ.
