ಸೋಮವಾರದಂದು ರಾಜ್ಯಾದ್ಯಂತ ಕೋವಿಡ್-19 ಲಸಿಕಾ ಮೇಳ: 5-7 ಲಕ್ಷ ಜನರಿಗೆ ಲಸಿಕೆ ನೀಡುವ ಗುರು
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜೂನ್ 21ರಂದು ಕರೋನ ಲಸಿಕಾ ಮೇಳವನ್ನು ಆಯೋಜನೆ ಮಾಡಲಾಗಿದೆ. ಒಂದೇ ದಿನದಲ್ಲಿ 5-7 ಲಕ್ಷ ಜನರಿಗೆ ಕರೋನ ಲಸಿಕೆ ನೀಡುವ ಗುರಿಯನ್ನು ಹೊಂದಿದೆ.
ಸೋಮವಾರ ಕರೋನ ಲಸಿಕಾ ಮೇಳ ಹಮ್ಮಿಕೊಳ್ಳುವ ಕುರಿತು ಈಗಾಗಲೇ ಅಧಿಕೃತ ಸೂಚನೆಗಳನ್ನು ಕಳುಹಿಸಲಾಗಿದ್ದು ಸರ್ಕಾರ ಗುರುತಿಸಿರುವ ಗುಂಪಿನವರಿಗೆ ಆದ್ಯತೆ ನೀಡುವ ಮೂಲಕ ಮೇಳ ಯಶಸ್ವಿಗೊಳಿಸಲು ರಾಷ್ಟ್ರೀಯ ಆರೋಗ್ಯ ಅಭಿಯಾನದ ಆದೇಶದ ಪತ್ರದಲ್ಲಿ ತಿಳಿಸಿದ್ದಾರೆ.
ಮೇಳವನ್ನು ಯಶಸ್ವಿಗೊಳಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಿಬ್ಬಂದಿಯು ಸಹ ಆರೋಗ್ಯ ಇಲಾಖೆಯೊಂದಿಗೆ ಸಹಕಾರ ನೀಡಲಿದ್ದು ಲಸಿಕಾ ಕೇಂದ್ರದಲ್ಲಿ ಫಲಾನುಭಿಗಳನ್ನು ಸಜ್ಜುಗೊಳಿಸಲು ಮತ್ತು ಲಸಿಕೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಿದ್ದಾರೆ ಎಂದು ಅದೇಶ ಪತ್ರದಲ್ಲಿ ತಿಳಿಸಿದ್ದಾರೆ.
ಲಸಿಕೆ ಮೇಳದ ಮಾರ್ಗಸೂಚಿ: ಯಾರಿಗೆಲ್ಲ ಲಸಿಕೆ?
45 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ಮೊದಲ ಆದ್ಯತೆ.
2ನೇ ಲಸಿಕೆ ಬಾಕಿ ಇರುವ ಫಲಾನುಭವಿಗಳಿಗೆ ಲಸಿಕಾಕರಣ.
ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರಿಗೆ ಲಸಿಕಾಕರಣ.
18-44 ವಯೋಮಿತಿ ದುರ್ಬಲ ಗುಂಪಿನ ಫಲಾನುಭವಿ, ಮುಂಚೂಣಿ ಕಾರ್ಯಕರ್ತರಿಗೆ ಲಸಿಕಾಕರಣ.
ಕೋವ್ಯಾಕ್ಸಿನ್ ಲಸಿಕೆಯ ಮೊದಲನೇ ಡೋಸ್ ಲಸಿಕಾಕರಣ.
ನೆನ್ನೆ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಸಚಿವ ಸುಧಾರಕ್, ಜೂನ್ 21ರಂದು ವ್ಯಾಕ್ಸಿನೇಶನ್ ಮೇಳ ಆರಂಭಿಸುತ್ತೇವೆ. 18ರಿಂದ 45ವರ್ಷದವರಿಗೆ ವ್ಯಾಕ್ಸಿನ್ ಹಾಕುವ ಗುರಿಯಿದೆ. ಸೋಮವಾರ ಅಂದಾಜು 5-7 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಹೊಂದಿದ್ದೇವೆ. ಲಸಿಕೆ ಎರಡು ಡೋಸ್ ಪಡೆದವರಿಗೆ ಯಾವುದೇ ಸಮಸ್ಯೆ ಇರೋದಿಲ್ಲ. ಕೊರೊನಾದ ಯಾವುದೇ ರೂಪಾಂತರಿ ವೈರಾಣುಯೂ ಲಸಿಕೆ ಪಡೆದವರಿಗೆ ಹೆಚ್ಚು ಸಮಸ್ಯೆ ಮಾಡಿಲ್ಲ ಎಂದು ಅವರು ಹೇಳಿದರು.
ಲಸಿಕೆ ಹಾಕಿಸಿಕೊಳ್ಳಲು ಅರ್ಹವಾಗಿರುವ ಎಲ್ಲರೂ ಲಸಿಕೆಯನ್ನು ಪಡೆದು ಸುರಕ್ಷಿತವಾಗಿ ಇದ್ದರೆ ಕರೋನ ವೈರಸ್ ವಿರುದ್ಧ ಸಮರ್ಪಕವಾಗಿ ಹೋರಾಡಬಹುದು.