ಸದ್ಯ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆ ಪತ್ತೆಯಾಗುತ್ತಿರಬಹುದು. ಆದರೆ ರಾಜ್ಯದಲ್ಲಿ ಕೊರೋನಾ ಬ್ರೇಕ್ ಥ್ರೂ ಸೋಂಕಿನ ಪ್ರಮಾಣ 15 ಸಾವಿರಕ್ಕೆ ತಲುಪಿದೆ. ಹೀಗಾಗಿ ಆತಂಕ ಇಮ್ಮಡಿ ಮಾಡಿದೆ. ಸದ್ಯದ ಪರಿಸ್ಥಿತಿ ನೋಡಿದರೆ ಮೂರನೇ ಅಲೆ ಬರುವುದು ಕಷ್ಟ ಸಾಧ್ಯ. ಆದರೂ ಮೈಮರೆಯುವಂತಿಲ್ಲ. ಯಾಕೆಂದರೆ ರಾಜ್ಯದಲ್ಲಿ ಬ್ರೇಕ್ ಥ್ರೂ ಇನ್ಫೆಕ್ಷನ್ ಹಾವಳಿ ಜಾಸ್ತಿಯಾಗುತ್ತಿದೆ.
ಲಸಿಕೆ ಪಡೆದವರಲ್ಲೂ ಸೋಂಕು.. ಬ್ರೇಕ್ ಥ್ರೂ ಸೋಂಕಿನ ಸುಳಿಯಲ್ಲಿ ಜನರು.!!
ಕೊರೋನಾ ಪ್ರಕರಣ ಇಳಿಕೆಯಾದರೂ, ನಿಟ್ಟುಸಿರು ಬಿಡುವ ಹಾಗಿಲ್ಲ. ಯಾಕೆಂದರೆ ರಾಜ್ಯದಲ್ಲಿ ಬ್ರೇಕ್ ಥ್ರೂ ಇನ್ಫೆಕ್ಷನ್ ಸಂಖ್ಯೆ ಏರಿಕೆಯಾಗಿದೆ. ಲಸಿಕೆ ಪಡೆವರಲ್ಲಿ ಸೋಂಕು ತಗುಲುವುದಕ್ಕೆ ಬ್ರೇಕ್ ಥ್ರೂ ಇನ್ಫೆಕ್ಷನ್ ಎನ್ನಲಾಗುತ್ತೆ. ಹೀಗಾಗಿ ಕೊರೋನಾ ಕಡಿಮೆ ಆಯ್ತು ಅಂತ ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ. ಆಚ್ಚರಿಯೆಂದರೆ ಎರಡು ಡೋಸ್ ಲಸಿಕೆ ಪಡೆದವರಲ್ಲೂ ಈ ಕೊರೋನಾ ಕಾಣಿಸಿಕೊಂಡಿದೆ. ಅದೂ ಕೂಡ ಸಾವಿರದ ಗಡಿ ದಾಟಿ.
ಇಡೀ ರಾಜ್ಯದಲ್ಲಿ ಲಸಿಕೆ ಪಡೆದುಕೊಂಡ ಎಷ್ಟು ಮಂದಿಯಲ್ಲಿ ಸೋಂಕು ಗೊತ್ತಾ.!?
ಇಡೀ ರಾಜ್ಯದ 15 ಸಾವಿರ ಮಂದಿಯಲ್ಲಿ ಅವರು ಲಸಿಕೆ ಪಡೆದುಕೊಂಡ ಮೇಲೂ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಈ ಪೈಕಿ ಮೊದಲ ಡೋಸ್ ತೆಗೆದುಕೊಂಡ 13 ಸಾವಿರ ಜನರಿಗೆ ಹಾಗೂ ಎರಡನೇ ಡೋಸ್ ಹಾಕಿಸಿಕೊಂಡ 2 ಸಾವಿರ ಜನರಿಗೆ ಬ್ರೇಕ್ ಥ್ರೂ ಸೋಂಕು ಕಾಣಿಸಿಕೊಂಡಿದೆ. ಒಟ್ಟು 15 ಸಾವಿರ ಜನರನ್ನು ಲಸಿಕೆ ಹಾಕಿಸಿಕೊಂಡ್ರು ಬಿಟ್ಟಿಲ್ಲ ಕೊರೋನಾ ಹೆಮ್ಮಾರಿ ಬಿಟ್ಟಿಲ್ಲ. ಆದರೆ ಐಸಿಯೂ ಪ್ರಕರಣಗಳು ಈ ಪೈಕಿ ಕಡಿಮೆ ಇದೆ ಲಸಿಕೆ ಹಾಕಿಸಿಕೊಂಡರೆ ಸೋಂಕಿನ ತೀವ್ರತೆ ಕಡಿಮೆ ಇರಲಿದೆ. ಬ್ರೇಕ್ ಥ್ರೂ ಸೋಂಕಿಗೆ ಒಳಗಾದ ಬಹುತೇಕರು ಹೋಮ್ ಕ್ಯಾರೈಂಟೈನಿನಲ್ಲೇ ಗುಣಮುಖರಾಗಿದ್ದಾರೆ. ಆಸ್ಪತ್ರೆಗೆ ದಾಖಲಾದವರ ಸಂಖ್ಯೆ ತುಂಬಾನೇ ವಿರಳ. ಹೀಗಾಗಿ ಕೊರೋನಾ ವಿರುದ್ದ ಹೋರಾಡಲು ಲಿಸಿಕೆ ಅತ್ಯಗತ್ಯ ಹಾಗೂ ಕೊರೋನಾ ಬಂದರೂ ಸೇಫ್ ಆಗಲು ವ್ಯಾಕ್ಸಿನ್ ಒಂದೇ ದಾರಿ.
ಎರಡನೇ ಡೋಸ್ ಅವಧಿ ಕಡಿಮೆ ಮಾಡಲು ಚಿಂತಿಸುತ್ತಿರುವ ರಾಜ್ಯ ಆರೋಗ್ಯ ಇಲಾಖೆ.!!
ಅತ್ತ ಲಸಿಕೆ ಪಡೆದವರಲ್ಲೂ ಬ್ರೇಕ್ ಥ್ರೂ ಸೋಂಕು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಇತ್ತ ಲಸಿಕೆ ಅವಧಿ ಕಡಿತಗೊಳಿಸಲು ರಾಜ್ಯ ಆರೋಗ್ಯ ಇಲಾಖೆ ಚಿಂತಿಸುತ್ತಿದೆ. ಸದ್ಯ ಕೋವಿಶೀಲ್ಡ್ ಎರಡನೇ ಡೋಸ್ ಅವಧಿ ಸದ್ಯ 84 ದಿನಗಳು ಇವೆ. ಇದರ ಅವಧಿ 4 ವಾರಗಳಿಗೆ ಅಂದರೆ ಒಂದು ತಿಂಗಳಿಗೆ ಇಳಿಸಲು ಅರೋಗ್ಯ ಇಲಾಖೆ ಚಿಂತನೆ ನಡೆಸುತ್ತಿದೆ. ಕೋವ್ಯಾಕ್ಸಿನ್ ಮೊದಲ ಡೋಸ್ ಪಡೆದು 4 ವಾರದ ಬಳಿಕ ಎರಡನೇ ಡೋಸ್ ಪಡೆದುಕೊಳ್ಳಬಹುದು. ಆದರೆ ಕೋವಿಶೀಲ್ಡ್ ಮೊದಲ ಡೋಸ್ ಪಡೆದು ಎರಡನೇ ಡೋಸ್ ಗೆ 3 ತಿಂಗಳು ಕಾಯಬೇಕಿದೆ. ಬ್ರೇಕ್ ಥ್ರೂ ಸೋಂಕು ಹೆಚ್ಚು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆ ಅವಧಿ ಕಡಿತಗೊಳಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಆದರೆ ಈ ಬಗ್ಗೆ ತಾಂತ್ರಿಕ ಸಲಹಾ ಸಮಿತಿಯ ಸಲಹೆಯನ್ನು ಕೇಳಲಾಗಿದೆ. TAC ಸಲಹೆ ಬಂದ ಬಳಿಕ ಸರ್ಕಾರದ ಜೊತೆ ಚರ್ಚಿಸಿ ಈ ಬಗ್ಗೆ ನಿರ್ಧಾರ ಮಾಡಲಿದೆ ಆರೋಗ್ಯ ಇಲಾಖೆ.