ಕೇಂದ್ರ ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ (V somanna) ಮತ್ತು ಸಿಎಂ ಸಿದ್ದರಾಮಯ್ಯ (Cm siddaramaiah) ಕಾರ್ಯಕ್ರಮ ಒಂದರಲ್ಲಿ ಮುಖಾಮುಖಿಯಾಗಿದ್ದಾರೆ. ಇದೇ ವೇಳೆ ಮುಡಾ ಪ್ರಕರಣದ (Muda scam) ಬಗ್ಗೆ ಈ ಇಬ್ಬರು ನಾಯಕರು ಮಾತನಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಪ್ರಕರಣದ ಬಗ್ಗೆ ಸಿಎಂ ಗೆ ಸೋಮಣ್ಣ ಕಿವಿ ಮಾತು ಹೇಳಿದ್ದಾರೆ. ಈ ವಿಚಾರದಲ್ಲಿ ನೀವು ತಪ್ಪು ಮಾಡಿಬಿಟ್ರಿ. ನಾನು ಹೇಳಿದಾಗಲೇ ಆ ಸೈಟ್ ಗಳನ್ನು (Sites) ಅವತ್ತೆ ವಾಪಸ್ ಕೊಟ್ಟಿದ್ದರೆ ಇಷ್ಟೆಲ್ಲಾ ಆಗ್ತಿರಲಿಲ್ಲ ಎಂದು ಮುಡಾ ವಿವಾದದ ಕುರಿತು ಕೇಂದ್ರ ಸಚಿವ ವಿ.ಸೋಮಣ್ಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರೀತಿಯಿಂದ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಸಚಿವ ವಿ.ಸೋಮಣ್ಣ ಈ ಮಾತಿಗೆ ಸಿಎಂ ಕೂಡ ಅಷ್ಟೇ ಪ್ರೀತಿಯಿಂದ ಸೋಮಣ್ಣರನ್ನು ಅವರದ್ದೇ ಶೈಲಿಯಲ್ಲಿ ಗದರಿದ್ದು, ಏಯ್ ಗೊತ್ತಿಲ್ಲದೆ ಏನೇನೋ ಮಾತನಾಡಬೇಡಯ್ಯ. ನೀನು ಮೊದಲು ನನ್ನ ಮಾತು ಕೇಳು ಎಂದು ಪ್ರಕರಣದ ಬಗ್ಗೆ ಸಿಎಂ ಸಮಜಾಯಿಷಿ ನೀಡಿದ್ದಾರೆ.