ಅಲೋವೆರದಲ್ಲಿ ವಿಶೇಷ ಗುಣಲಕ್ಷಣಗಳಿದ್ದು ಸಾಕಷ್ಟು ವರ್ಷಗಳಿಂದಲೂ ಇದನ್ನ ಬಳಸಲಾಗುತ್ತದೆ. ಇನ್ನು ನಮ್ಮ ಅಂದವನ್ನು ಹೆಚ್ಚಿಸುವಲ್ಲಿ ತ್ವಜಿಗೆ ಒಳ್ಳೆಯ ಔಷಧಿಯಾಗಿ ಕಾರ್ಯವನ್ನು ನಿರ್ವಹಿಸುತ್ತದೆ, ಮಾತ್ರವಲ್ಲದೆ ನಮ್ಮ ಕೇಶ ರಾಶಿ ಕೂಡ ಉತ್ತಮ. ಅಲೋವೆರವನ್ನು ಬಳಸಿ ಸಾಕಷ್ಟು ಸೋಪು ಹಾಗೂ ಶಾಂಪೂಗಳನ್ನು ಕೂಡ ತಯಾರಿಸಲಾಗುತ್ತದೆ. ನಮ್ಮ ಕೂದಲಿಗೆ ಬಳಸುವುದರಿಂದ ಯಾವ ರೀತಿ ಪ್ರಯೋಜನಗಳಾಗುತ್ತವೆ ಅನ್ನುವುದರ ಬಗ್ಗೆ ಇಲ್ಲಿದೆ ಡಿಟೇಲ್ಸ್..

- ಅಲೋವೆರವನ್ನು ಚೆನ್ನಾಗಿ ಪೀಲ್ ಮಾಡಿ ಇಡೀ ಕೂದಲಿಗೆ ಹಚ್ಚ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ಬೆಚ್ಚಗಿನ ನೀರಿಂದ ವಾಶ್ ಮಾಡಬೇಕು..ಇದರಿಂದ ನಮ್ಮ ಕೂದಲು ತುಂಬಾನೇ ಸಾಫ್ಟ್ ಆಗುತ್ತದೆ ಹಾಗೂ ಸಿಲ್ಕಿ ಹೇರ್ ನಮ್ಮದಾಗುತ್ತದೆ.
- ಕೊಬ್ಬರಿ ಎಣ್ಣೆಗೆ ಅಲೋವೆರವನ್ನು ಹಾಕಿ ಚೆನ್ನಾಗಿ ಕುದಿಸಿ ,ಬೆಚ್ಚಗಾದ ಮೇಲೆ ಅದನ್ನ ನಿಮ್ಮ ಸ್ಕಾಲ್ಪ್ ಹಾಗೂ ಕೂದಲಿಗೆ ಹಚ್ಚಿ ಎರಡು ಗಂಟೆ ಹಾಗೆ ಬಿಟ್ಟು ನಂತರ ತಲೆ ಸ್ನಾನ ಮಾಡುವುದರಿಂದ ಡ್ಯಾಂಡ್ರಫ್ ತಕ್ಷಣಕ್ಕೆ ಕಡಿಮೆಯಾಗುತ್ತದೆ ಹಾಗೂ ಕೂದಲು ಉದುರುವುದು ನಿವಾರಣೆಯಾಗುತ್ತದೆ.
- ಅಲೋವೆರದಲ್ಲಿ ವಿಟಮಿನ್ ಇ ಸಮೃದ್ಧವಾಗಿದ್ದು ಇದರ ಔಷಧಿ ಗುಣಗಳು ಕಬ್ಬಿಣ ಅಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಕೇಶವ ರಾಶಿಯನ್ನು ಮಾಯಿಶ್ಚರ್ ಮಾಡುವುದಕ್ಕೆ ತುಂಬಾನೇ ಸಹಾಯಕಾರಿ..
- ಅಲೋವೆರಾ ಮತ್ತು ನಿಂಬೆರಸವನ್ನು ಮಿಶ್ರಣ ಮಾಡಿ ತಲೆಯ ನೆತ್ತಿಗೆ ಹಚ್ಚಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ವಾಶ್ ಮಾಡುವುದರಿಂದ ನೆತ್ತಿ ತುರಿಕೆ ಇರಿಟೇಶನ್ ಕಡಿಮೆಯಾಗುತ್ತದೆ.
- ವಾರಕ್ಕೆ ಒಮ್ಮೆ ಅಲೋವೆರವನ್ನು ನಿಮ್ಮ ಕೂದಲಿಗೆ ಹಚ್ಚುವುದರಿಂದ ಕೂದಲು ಒಡೆಯುವುದು ,ಸ್ಪಿಲ್ಟ್ ಎಂಡ್ಸ್ ಹಾಗೂ ಡ್ಯಾಮೇಜಸ್ ಕಡಿಮೆಯಾಗುತ್ತದೆ.
- ನಿಮ್ಮ ಕೂದಲು ದಟ್ಟವಾಗಿ ಹಾಗೂ ವೇಗವಾಗಿ ಬೆಳೆಯಬೇಕು ಎಂದರೆ ಅಲವೇರವನ್ನ ತಪ್ಪದೇ ತಿಂಗಳಿಗೆ ಮೂರು ಬಾರಿ ಹಚ್ಚಿ.
- ಹಾಗೂ ಆಗಾಗ ಅಲೋವೆರವನ್ನು ಕೊಬ್ಬರಿ ಎಣ್ಣೆಗೆ ಮಿಕ್ಸ್ ಮಾಡಿ ಹಚ್ಚುವುದರಿಂದ ಬಿಳಿಯ ಕೂದಲು ಅತಿ ಬೇಗನೆ ಕಪ್ಪಾಗುತ್ತದೆ.