
ಸಾರ್ವಜನಿಕ ಗಣೇಶೋತ್ಸವ ಆಚರಿಸುವ ಸಂಸ್ಥೆಗಳು ಪ್ರಸಾದ ವಿತರಣೆ ನಿರ್ಬಂಧ ವಿಧಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರಕ್ಕೆ ಪರಿಷತ್ ವಿಪಕ್ಷ ನಾಯಕ ಪತ್ರ ಬರೆದಿದ್ದಾರೆ. ಪ್ರಸಾದ ವಿತರಣೆ ನಿರ್ಬಂಧಿಸೋ ನಿಯಮವನ್ನು ಕಡ್ಡಾಯವಾಗಿ ಜಾರಿಗೊಳಿಸದಂತೆ ಸಿಎಂಗೆ ಪತ್ರ ಬರೆದು ಒತ್ತಾಯ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ಟಿ ನಾರಾಯಣಸ್ವಾಮಿ, ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಪೆಂಡಾಲ್‌ಗಳಲ್ಲಿ ವಿತರಿಸುವ ಪ್ರಸಾದಕ್ಕೆ ಪರವಾನಗಿ ಪಡೆಯೋದು ಕಡ್ಡಾಯ. ಪರವಾನಗಿ ಪಡೆದಿರುವ ವ್ಯಕ್ತಿಗಳು ಅಥವಾ ಸಂಸ್ಥೆಗಳಿಂದ ಮಾತ್ರವೇ ಸಿದ್ಧಪಡಿಸಿ ಸಾರ್ವಜನಿಕರಿಗೆ ವಿತರಿಸಬೇಕು ಎಂದು ಸರ್ಕಾರ ಹೊರಡಿಸಿರುವ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸರ್ಕಾರದಿಂದ ಪರವಾನಗಿ ಪಡೆದವರು ಮಾತ್ರ ಪ್ರಸಾದ ವಿತರಣೆ ಮಾಡಬೇಕು ಎಂದು ಆದೇಶಿಸಿರುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆದೇಶಕ್ಕೆ ಛಲವಾದಿ ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ಆಹಾರ ಇಲಾಖೆ ನಿಯಮಗಳನ್ನು ಬಲವಂತವಾಗಿ ಹೇರಿರುವುದು ಗಣೇಶನ ಭಕ್ತರಿಗೆ ಮಾಡಿದ ಅವಮಾನ. ಗೌರಿ ಗಣೇಶೋತ್ಸವ ಹಬ್ಬವನ್ನು ದೇಶಾದ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗ್ತಿದೆ. ಭಕ್ತರು ಮನೆಯಿಂದ ಪ್ರಸಾದ ತಂದು ಪೆಂಡಾಲ್‌ಗಳಲ್ಲಿ ವಿತರಣೆ ಮಾಡ್ತಾರೆ ಎಂದು ಸರ್ಕಾರಕ್ಕೆ ಪರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಆದ್ರೆ ಗಣೇಶನ ಭಕ್ತರು ಇಲಾಖೆ ಪರವಾನಗಿ ಪರವಾನಗಿ ಪಡೆಯಬೇಕೆನ್ನುವ ಆದೇಶ ವಿಪರ್ಯಾಸ. ಸಂಭ್ರಮದ ಹಬ್ಬಕ್ಕೆ ಅನಾವಶ್ಯಕ ನಿಯಮ ಜಾರಿ ಮಾಡಿ ಹಬ್ಬದ ಸಂಭ್ರಮವನ್ನು ಕುಗ್ಗಿಸುವ ಪ್ರಯತ್ನ ಮಾಡ್ತಿರೋದು ಖಂಡನೀಯ. ನಿಯಮಗಳು ಸಾಮರಸ್ಯ ಸಹಬಾಳ್ವೆಗೆ ಧಕ್ಕೆ ತರುವಂತಿದೆ. ಅಲ್ಲದೆ ರಾಜ್ಯದ ಕಾನೂನು ಸುವ್ಯವಸ್ಥೆಗೂ ಸಮಸ್ಯೆ ಸೃಷ್ಟಿ ಮಾಡಿದಂತಿದೆ. ಹೀಗಾಗಿ ಕೂಡಲೆ ನಿಯಮವನ್ನು ವಾಪಾಸ್ ಪಡೆಯುವಂತೆ ಸಿಎಂಗೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
