ಮಳೆರಾಯ ಕಾಫಿ ನಾಡಲ್ಲಿ ಅಬ್ಬರಿಸ್ತಾ ಇದ್ದಾನೆ. ಬರದಿಂದ ಕಂಗೆಟ್ಟಿದ್ದ ಜನ ಪುಲ್ ಖುಷ್ ಆಗಿದ್ದಾರೆ. ಮಲೆನಾಡು ಬಯಲುಸೀಮೆಯಲ್ಲಿಯೂ ವರ್ಷಧಾರೆಯಂತೂ ಖುಷಿ ನೀಡ್ತಾ ಇರುವಾಗ್ಲೆ ಮತ್ತೊಂಡೆ ಭಯ ಅವರಿಸಿರೋದು ಡೆಂಘ ಕಾರಣ. ಒಂದೇ ತಿಂಗಳಲ್ಲಿ 75 ಪ್ರಕರಣ ಪತ್ತೆಯಾಗಿರೋದು ಮತ್ತಷ್ಟು ಆತಂಕ ಸೃಷ್ಟಿಸಿದೆ. ಆರೋಗ್ಯ ಇಲಾಖೆಯಂತೂ (Health department) ಪುಲ್ ಆಲಾರ್ಟ್ (Full alert) ಆಗಿದೆ.
![](https://pratidhvani.com/wp-content/uploads/2024/05/IMG_7771.jpeg)
ಇನ್ನೂ ಈ ಆತಂಕ ಅವರಿಸೋಕೆ ಕಾರಣವೇ ಒಂದೇ ಒಂದು ತಿಂಗಳಲ್ಲಿ 75 ಪ್ರಕರಣ ಪಾಸಿಟಿವ್ ಪತ್ತೆಯಾಗಿರೋದು. ಅದು 150 ಮಂದಿಯ ಸ್ಯಾಂಪಲ್ ಕಳುಹಿಸಿದ್ರೆ ಅದ್ರಲ್ಲಿ ಶೇಕಡ 50 ರಷ್ಟು ಮಂದಿಯಲ್ಲಿ ಡೆಂಘ (Dengue) ಇರೋದು ಕನ್ನರ್ಮ್ ಆಗಿರೋದು. ಸದ್ಯಕ್ಕಂತೂ ಎಲ್ಲರೂ ಆರೋಗ್ಯದಲ್ಲಿಯೂ ಚೇತರಿಕೆ ಕಂಡಿದೆ.
ಡೆಂಗ್ಯೂ ಪೀವರ್. (Dengue fever) ಕಂಡ್ರು ಭಯ ಬೇಡ ವೈಧ್ಯಕೀಯ ಸಲಹೆ ಪಡೆಯಿರಿ ಅಂತಿದ್ದಾರೆ. ಲಕ್ಷಣ ಪತ್ತೆಯಾದವರೆಲ್ಲರೂ ಅಡ್ಡಿಟ್ ಅಗಬೇಕಾಗಿಲ್ಲ. ಅದ್ರೆ ಅವ್ಯಶಕತೆ ಇದ್ರೆ ಮಾತ್ರ ಅಡ್ಡಿಟ್ ಮಾಡಿಕೊಳ್ತಿದ್ದೇವೆ ಎನ್ನುತ್ತಿದ್ದಾರೆ ಅರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು.
![](https://pratidhvani.com/wp-content/uploads/2024/05/IMG_7772.jpeg)
ಒಂದೇಡೆ ಮಳೆ ಬರ್ತಿದ್ದಂತೆ ನೀರು ನಿಲ್ತಿದೆ. ಮನೆಯಲ್ಲಿಯೂ ನೀರನ್ನ ಶೇಖರಿಸಿಡೋವಾಗ್ಲು ಎಚ್ಚರಿಕೆಯಿಂದ ಇರಿ ಅಂತಿದ್ದಾರೆ.ಮೂರ್ನಾಕ್ಕು ದಿನ ಜ್ವರ ಬಿಡ್ಲಿಲ್ಲ ಅಂದ್ರೆ ಅಸ್ಪತ್ರೆಗೆ ಬನ್ನಿ ತಪಾಸಣೆ ನಡೆಸಿ ಅನ್ನೋ ಮನವಿಯನ್ನ ಮಾಡ್ತಿದ್ದೇ ಆರೋಗ್ಯ ಇಲಾಖೆ.