ಸ್ಯಾಂಡಲ್ವುಡ್(Sandalwood)ನಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ರಿಯಲ್ ಸ್ಟಾರ್(Real Star) ಉಪೇಂದ್ರ(Upendra) ಅವರ “ಯು-ಐ”(UITheMovie) ಚಿತ್ರದ ಚೀಪ್ ಸಾಂಗ್(CheapSong) ತುಣುಕು ಬಿಡುಗಡೆಗೊಂಡಿದೆ.
ಟೈಟಲ್ನಿಂದಲೇ ದೊಡ್ಡಮಟ್ಟದಲ್ಲಿ ಸದ್ದು ಮಾಡಿರುವ ಈ ಚಿತ್ರ ಕನ್ನಡಚಿತ್ರ ಪ್ರೇಮಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ಕಳೆದ ಕೆಲವು ದಿನಗಳ ಹಿಂದಷ್ಟೇ ಬಿಡುಗಡೆಗೊಂಡಿದ್ದ ಚಿತ್ರದ ಟೀಸರ್ ಎಲ್ಲರ ಕುತೂಹಲವನ್ನು ಹೆಚ್ಚಿಸಿತ್ತು. ಇದೀಗ ಚಿತ್ರದ ಚೀಪ್ ಸಾಂಗ್ ತುಣುಕು ಬಿಡುಗಡೆಗೊಂಡಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ.
![](https://pratidhvani.com/wp-content/uploads/2024/02/UI.png)
ಈ ಬಗ್ಗೆ ಟ್ವೀಟ್ ಮಾಡಿರುವ ರಿಯಲ್ ಸ್ಟಾರ್ ಉಪೇಂದ್ರ ʻಯು ಐ ಚಿತ್ರದ ~ದುಬಾರಿ~ #ಚೀಪ್ ಸಾಂಗ್ ನ ತುಣುಕು ನಿಮ್ಮ ಮುಂದೆ…… ಸಾಹಿತ್ಯದ ಒಳ ಅರ್ಥ ಡಿಕೋಡ್ ಮಾಡಿ, ಕಾಮೆಂಟ್ ಬಾಕ್ಸ್ ನಿಮ್ಮದೇ..!ʼ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಉಪೇಂದ್ರ ನಿರ್ದೇಶದನ ʻಯು-ಐʼ ಚಿತ್ರ ಲಹರಿ ಮತ್ತು ವಿನಸ್ ಎಂಟ್ರಟೈನರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದ್ದು, ಜಿ. ಮನೋಹರ್ ನಿರ್ಮಾಣದಲ್ಲಿ ಮೂಡಿ ಬರುತ್ತಿದೆ. ಸದ್ಯ ಬಿಡುಗಡೆಗೊಂಡಿರುವ ಚೀಪ್ ಸಾಂಗ್ಗೆ ಉಪೇಂದ್ರ ಅವರ ಸಾಹಿತ್ಯ, ವಿಜಯ್ ಪ್ರಕಾಶ್, ನಕ್ಷಾ ನಜೀಜ್ ಮತ್ತು ದೀಪಕ್ ಬ್ಲೂ ಅವರ ಗಾಯನವಿದ್ದು, ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿದೆ.
#UITheMovie #Upendra #RealStar #LahariFilms #CheapSongPromo