ಉತ್ತರ ಪ್ರದೇಶದಲ್ಲಿ ಐದು ಸುತ್ತಿನ ಮತದಾನ ಪ್ರಕ್ರಿಯೆ ಮುಗಿದಿದ್ದು, ಇನ್ನೂ ಎರಡು ಸುತ್ತಿನ ಮತದಾನ ಬಾಕಿ ಉಳಿದಿದೆ. ಇದೇ ವೇಳೆ ಮತದಾರರನ್ನು ಉದ್ದೇಶಿಸಿ ಬಲ್ಲಿಯಾ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ಜಾತಿ ರಾಜಕಾರಣ ಮಾಡುವವರು ಒಂದು ನೆನಪಿಟ್ಟುಕೊಳ್ಳಬೇಕು. ಇನ್ಮುಂದೆ ಉತ್ತರ ಪ್ರದೇಶದಲ್ಲಿ ಇಂತಹ ಆಟಗಳು ನಡೆಯುವುದಿಲ್ಲ ಎಂದು ಗುಡುಗಿದ್ದಾರೆ.
ಐದು ಹಂತಗಳ ಮತದಾನದಲ್ಲಿ ಜನರು ರಾಜವಂಶದ ರಾಜಕೀಯವನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಉತ್ತರ ಪ್ರದೇಶದ ರಾಜಕರಣವು ಜಾತಿಯ ಬೀದಿಗಳಲ್ಲಿ ಸಿಲುಕಿಕೊಳ್ಳುವುದಿಲ್ಲ. ಅಭಿವೃದ್ಧಿ ಪಥವು ವೇಗ ಪಡೆದುಕೊಂಡಿರುವ ಕಾರಣ ಜಾತಿಯ ಆಟ ಇನ್ನು ನಡೆಯುವುದಿಲ್ಲ ಎಂದಿದ್ದಾರೆ.
ಮಹತ್ವದ ಉಜ್ವಲ ಯೋಜನೆ ಹಾಗೂ ಉಚಿತ ಗ್ಯಾಸ್ ಸಿಲಿಂಡರ್ ಯೋಜನೆಯನ್ನು ನಾವು ಇಲ್ಲಿಂದಲ್ಲೇ ಪ್ರಾರಂಭಿಸಿದ್ದೇವು. ಬಲ್ಲಿಯಾದ ಜನತೆ ಜೊತೆಗೆ ಭಾವನಾತ್ಮಕ ಸಂಬಂಧವಿದೆ. ಉತ್ತರ ಪ್ರದೇಶ ಅಭಿವೃದ್ದಿ ನನ್ನ ಜವಾಬ್ದಾರಿ ಮತ್ತು ಆದತ್ಯೆಯಾಗಿದೆ. ಯೋಗಿರವರ ಆಡಳಿತದಲ್ಲಿ ಯಾರು ಹೆದರಿಕೊಳ್ಳುವ ಅವಶ್ಯಕತೆಯಿಲ್ಲ ಎಂದು ಹೇಳಿದ್ದಾರೆ.
ಐದನೇ ಹಂತದ ಮತದಾನವು ಭಾನುವಾರ ಮುಗಿದಿದ್ದು, ಆರನೇ ಹಂತ ಮಾರ್ಚ್ 3ರಂದು ಹಾಗೂ ಏಳನೇ ಹಂತವು ಮಾರ್ಚ್ 7ರಂದು ನಡೆಯಲಿದೆ. ಮಾರ್ಚ್ 10 ರಂದು ಪಲಿತಾಂಶ ಪ್ರಕಟವಾಗಲಿದೆ.