• Home
  • About Us
  • ಕರ್ನಾಟಕ
Friday, December 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಕಲ್ಕತ್ತಾ ಮೇಲ್ಸೇತುವೆಯನ್ನು ತನ್ನ ಜಾಹಿರಾತಿಗೆ ಬಳಸಿ ಟ್ರೋಲಿಗೊಳಗಾದ ಯೋಗಿ ಆದಿತ್ಯನಾಥ್.!

ಕರ್ಣ by ಕರ್ಣ
September 12, 2021
in ದೇಶ
0
ಕಲ್ಕತ್ತಾ ಮೇಲ್ಸೇತುವೆಯನ್ನು ತನ್ನ ಜಾಹಿರಾತಿಗೆ ಬಳಸಿ ಟ್ರೋಲಿಗೊಳಗಾದ ಯೋಗಿ ಆದಿತ್ಯನಾಥ್.!
Share on WhatsAppShare on FacebookShare on Telegram

ಸದಾ ವಿವಾದದ ಸುಳಿಯಲ್ಲೇ ಇರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಈದೀಗ ಮತ್ತೆ ಚರ್ಚೆಯ ಕೇಂದ್ರ ಬಿಂದುವಾಗಿದ್ದಾರೆ. ತನ್ನ ಆಡಳಿತ ವೈಖರಿ ಹಾಗೂ ಶ್ರೇಷ್ಟತೆಯನ್ನು ಬಿಂಬಿಸುವ ನಿಟ್ಟಿನಲ್ಲಿ ಪತ್ರಿಕೆಗಳಿಗೆ ಕೊಟ್ಟ ಜಾಹೀರಾತೊಂದು ಇದೀಗ ನೆಟ್ಟಿಗರ ಟ್ರೋಲಿಗೆ ಆಹಾರವಾಗಿದೆ. ದಿ ಸಂಡೇ ಎಕ್ಸ್‌ ಪ್ರೆಸ್‌ ಪತ್ರಿಕೆ ತನ್ನ ಮುಖಪುಟದಲ್ಲಿ ಯೋಗಿ ಆದಿತ್ಯನಾಥ್‌ ಸರ್ಕಾರದ ಜಾಹೀರಾತನ್ನು ಪಡೆದುಕೊಂಡು Transforming Uttar Pradesh Under Yogi Adityanath ಎಂಬ ಒಕ್ಕಣೆಯಲ್ಲಿ ಜಾಹೀರಾತು ಬಿತ್ತರಿಸಿದೆ. ಈ ವೇಳೆ ಉತ್ತರ ಪ್ರದೇಶಕ್ಕೆ ಸಂಬಂಧವೇ ಇಲ್ಲದ ಮೇಲ್ಸೇತುವೆ ಹಾಗೂ ಕಟ್ಟಡವೊಂದರ ಚಿತ್ರವನ್ನೂ ಮುದ್ರಿಸಿದೆ. ಇದು ಈಗ ಸಿಎಂ ಯೋಗಿ ಆದಿತ್ಯನಾಥ್‌ ಮುಖಭಂಗಕ್ಕೆ ಕಾರಣವಾಗಿದೆ.

ADVERTISEMENT

ಕೊಲ್ಕತಾದ ಎಂಎಎ ಮೇಲ್ಸೇತುವೆ, ಕೋಲ್ಕತಾದ ಜೆಡಬ್ಲ್ಯೂ ಮ್ಯಾರಿಯಟ್ ಹೋಟೆಲ್‌ ಹಾಗೂ ಕೊಲ್ಕತಾದ ಹಳದಿ ಬಣ್ಣದಲ್ಲಿರುವ ಟ್ಯಾಕ್ಸಿ ಕಾರ್‌ಗಳನ್ನೂ ಯೋಗಿ ಸರ್ಕಾರ ತನ್ನ ಜಾಹೀರಾತಿಗಾಗಿ ಬಳಸಿಕೊಂಡಿದ್ದಾರೆ. ಇದನ್ನು ಕ್ರಾಸ್‌ ಚೆಕ್‌ ಕೂಡ ಮಾಡದ ದಿ ಸಂಡೇ ಎಕ್ಸ್‌ಪ್ರೆಸ್‌ ಪತ್ರಿಕೆ ಅದನ್ನು ಮುದ್ರಿಸಿ ಬಿತ್ತರಿಸಿದೆ. ಇದು ಈಗ ಸೋಶೀಯಲ್‌ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಆದಿ ಹಾಡಿದೆ.

ಈ ಬಗ್ಗೆ ಕೂಡಲೇ ಟ್ವೀಟ್‌ ಮಾಡಿದ ತೃಣಮೂಲ ಕಾಂಗ್ರೆಸ್ ಲೋಕಸಭಾ ಸದಸ್ಯರಾದ ಮಹುವ ಮೊಯಿತ್ರ, ʻʻದಿ ಸಂಡೇ ಎಕ್ಸ್‌ಪ್ರೆಸ್‌ ಪತ್ರಿಕೆಯ ಮೊದಲ ಪುಟದಲ್ಲಿ ಪ್ರಕಟವಾಗಿರುವ ಜಾಹೀರಾತಿನ ಫೋಟೋವನ್ನು ಹಂಚಿಕೊಂಡು “ಪುಂಡ ಯೋಗಿ” (Thuggy Yogi) ಎಂದು ಕರೆದಿದ್ದಾರೆ. “ನಿಮ್ಮ ಮನಸ್ಥಿತಿಯನ್ನಾದರೂ ಬದಲಿಸಿಕೊಳ್ಳಿ, ಇಲ್ಲವೇ ಕನಿಷ್ಠ ಪಕ್ಷ ನಿಮ್ಮ ಜಾಹೀರಾತು ಏಜೆನ್ಸಿಯನ್ನಾದರೂ ಬದಲಿಸಿ” ಎಂದು ಕುಟುಕಿದ್ದಾರೆ. ಇದೇ ವೇಳೆ “ನನ್ನ ವಿರುದ್ಧ ನೋಯ್ಡಾದಲ್ಲಿ ಎಫ್‌ಐಆರ್‌ ದಾಖಲಾಗುವುದನ್ನು ಎದುರು ನೋಡುತ್ತಿದ್ದೇನೆ”ಎಂದೂ ಅವರು ಯೋಗಿ ಆದಿತ್ಯನಾಥ್‌ ಬಗ್ಗೆ ಲೇವಡಿ ಮಾಡಿದ್ದಾರೆ.

Thuggy Yogi in his UP ads with Kolkata’s MAA flyover, our JW Marriott & our iconic yellow taxis!

Change your soul or at least your ad agency Gudduji!

P.S. Looking forward to FIRs against me in Noida now 🙂 pic.twitter.com/I7TRUMvCjO

— Mahua Moitra (@MahuaMoitra) September 12, 2021

ಫ್ಯಾಕ್ಟ್ ಚೆಕ್ ಟ್ವಿಟರ್‌ ಖಾತೆಯು ಪ್ರತಿಕ್ರಿಯಿಸಿದ್ದು, “ಯೋಗಿ ಆದಿತ್ಯನಾಥ ಅವರೇ, ಪಶ್ಚಿಮ ಬಂಗಾಳ ಅಭಿವೃದ್ಧಿಯನ್ನು ನಿಮ್ಮ ಜಾಹೀರಾತಿನಲ್ಲಿ ಕಾಣಲು ಖುಷಿಯಾಗುತ್ತಿದೆ. ಐಟಿಸಿ ಕಡೆಗೆ ತೆರಳಲಿರುವ ಎಂಎಎ ಫ್ಲೈಓವರ್‌ನ ಸ್ಟಾಕ್ ಫೋಟೋವನ್ನು ಜಾಹೀರಾತಿನಲ್ಲಿ ಬಳಸಲಾಗಿದೆ” ಎಂದಿದೆ. ಸುಮಿತ್ರ ಮುಜುಂದಾರ್ ಎಂಬುವರು ಟ್ವೀಟ್ ಮಾಡಿದ್ದು, ಯೂಪಿ ಮಾದರಿಯನ್ನು ತೋರಿಸಲು ಕೊಲ್ಕತ್ತ ಫೋಟೋವನ್ನು ಬಳಸಲಾಗಿದೆ. ಪಾರದಾರ್ಶಕ ಯೂಪಿ ಎಂದರೆ ಇತರ ರಾಜ್ಯಗಳ ಅಭಿವೃದ್ಧಿಯ ಫೋಟೋಗಳನ್ನು ಕದ್ದು, ಪತ್ರಿಕೆಗೆ ಜಾಹೀರಾತು ನೀಡುವುದಾಗಿದೆ” ಎಂದು ವ್ಯಂಗವಾಡಿದ್ದಾರೆ.

ಜಾಹೀರಾತು ಕುರಿತು ಸ್ಪಷ್ಟನೆ ನೀಡಿರುವ ಇಂಡಿಯನ್ ಎಕ್ಸಪ್ರೆಸ್ ಸಂಸ್ಥೆಯು, “ಇದು ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದಿಂದಾಗಿರುವ ತಪ್ಪು. ಇದಕ್ಕಾಗಿ ತೀವ್ರ ವಿಷಾಧಿಸುತ್ತೇವೆ. ಪತ್ರಿಕೆಯ ಎಲ್ಲಾ ಡಿಜಿಟಲ್ ಆವೃತ್ತಿಗಳಿಂದ ಈ ಫೋಟೋವನ್ನು ಅಳಿಸಿಹಾಕುತ್ತೇವೆ” ಎಂದು ಟ್ವೀಟ್ ಮಾಡಿದೆ.

A wrong image was inadvertently included in the cover collage of the advertorial on Uttar Pradesh produced by the marketing department of the newspaper. The error is deeply regretted and the image has been removed in all digital editions of the paper.

— The Indian Express (@IndianExpress) September 12, 2021

ʻಎಂಎಎ ಫ್ಲೈಓವರ್‌ʼ (MAA flyover) ಎಂದು ಗೂಗಲ್ ಮಾಡಿದರೆ, ಕೊಲ್ಕತ್ತದಲ್ಲಿರುವ ಈ ಮೇಲ್ಸೇತುವೆಯ ಕುರಿತು ವರದಿಯಾಗಿರುವ ಸುದ್ದಿಗಳನ್ನು ನೋಡಬಹುದು. ಈ ಹಿಂದೆ ಗುಜರಾತ್‌ ಮಾದರಿ ಎಂಬ ಭೋಗಸ್‌ ಅಭಿವೃದ್ಧಿಯನ್ನು ಕೂಡ ಇದೇ ರೀತಿ ಸೃಷ್ಟಿಸಲಾಗಿತ್ತು. ಇತರೆ ರಾಜ್ಯ ಮತ್ತು ದೇಶದ ರಸ್ತೆ, ಕಟ್ಟಡಗಳನ್ನು ಬಳಸಿಕೊಂಡು ಇದು ಗುಜರಾತ್‌ ಕಾಣುತ್ತಿರುವ ಅಭಿವೃದ್ಧಿ ಎಂದು ಸುಳ್ಳು ಸುದ್ದಿಗಳನ್ನು ಹರಿಬಡಿಲಾಗುತ್ತಿತ್ತು. ಅದೇ ರೀತಿ ಇದೀಗ ಉತ್ತರ ಪ್ರದೇಶ ಸರ್ಕಾರ ಕೂಡ ತನಗೂ ಅದಕ್ಕೂ ಸಂಬಂಧವೇ ಇಲ್ಲದ ಸ್ಥಳಗಳ, ಕಟ್ಟಡಗಳ, ಅಭಿವೃದ್ಧಿಗಳ ಚಿತ್ರವನ್ನು ಬಳಸಿಕೊಂಡು ತನ್ನ ಮೈಲೇಜ್‌ ಹೆಚ್ಚಿಸಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡುತ್ತಿದೆ. ಇದಕ್ಕೆ ನೆಟ್ಟಿಗರು ಅಸಮಾಧಾನದ ಜೊತೆಗೆ ವ್ಯಂಗ್ಯವಾಡುತ್ತಿದ್ದಾರೆ.

Tags: BJPಉ.ಪ್ರ ಸರ್ಕಾರಉತ್ತರ ಪ್ರದೇಶಕಲ್ಕತ್ತಾಬಿಜೆಪಿಯೋಗಿ ಆದಿತ್ಯನಾಥ್
Previous Post

ಕೇರಳದ ಕಣ್ಣೂರು ವಿವಿಯಲ್ಲಿ ಸಾವರ್ಕರ್ & ಗೋಳ್ವಾಲ್ಕರ್ ಬಗ್ಗೆ ಪಠ್ಯ ಕ್ರಮ: ಕೇಸರೀಕರಣ ಆಗುತ್ತಿದೆಯೇ ದೇವರ ನಾಡು.!?

Next Post

ಕಲಬುರಗಿಯಲ್ಲಿ ಜೆಡಿಎಸ್ ಕಿಂಗ್ ಮೇಕರ್; ಬೆಳಗಾವಿ, ಧಾರವಾಡದಲ್ಲಿ ಬಿಜೆಪಿ ಗದ್ದುಗೆ ಹಿಡಿಯೋದು ಬಹುತೇಕ ಫಿಕ್ಸ್

Related Posts

ಶಾಲಾ ಮಕ್ಕಳಿಗೆ ಭಗವದ್ಗೀತೆ ಯಾಕೆ ಬೋಧಿಸಬೇಕು..?: ಕಾರಣ ನೀಡಿದ ಕುಮಾರಸ್ವಾಮಿ
Top Story

ಶಾಲಾ ಮಕ್ಕಳಿಗೆ ಭಗವದ್ಗೀತೆ ಯಾಕೆ ಬೋಧಿಸಬೇಕು..?: ಕಾರಣ ನೀಡಿದ ಕುಮಾರಸ್ವಾಮಿ

by ಪ್ರತಿಧ್ವನಿ
December 18, 2025
0

ನವದೆಹಲಿ: ಶಾಲಾ ಹಂತದಿಂದಲೇ ಭಗವದ್ಗೀತೆಯನ್ನು( Bhagavad Gita) ಮಕ್ಕಳಿಗೆ ಬೋಧಿಸಬೇಕು. ಇದು ಅತ್ಯಂತ ಉತ್ತಮ ಶೈಕ್ಷಣಿಕ ಸುಧಾರಣಾ ಕ್ರಮವಾಗುತ್ತದೆ ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು...

Read moreDetails
ದೇಶದಲ್ಲಿ ಹಣದುಬ್ಬರ ಪ್ರಮಾಣ ಇಳಿಕೆ..! ಕಾರಣವೇನು?

ದೇಶದಲ್ಲಿ ಹಣದುಬ್ಬರ ಪ್ರಮಾಣ ಇಳಿಕೆ..! ಕಾರಣವೇನು?

December 17, 2025

ರಸ್ತೆ ಅಪಘಾತ ಸಂತ್ರಸ್ತರಿಗೆ 1.5 ಲಕ್ಷದವರೆಗೆ ‘ಉಚಿತ ಚಿಕಿತ್ಸೆ’ ; ಕೇಂದ್ರದಿಂದ ಹೊಸ ಯೋಜನೆ

December 17, 2025

ಕುಂದಾಪುರ ಇಎಸ್‌ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಕ್ರಮ: ಸಚಿವ ಸಂತೋಷ್‌ ಲಾಡ್‌

December 17, 2025

ದ್ವೇಷ ರಾಜಕಾರಣ ಬಿಜೆಪಿ ಆಸ್ತಿ, ಅವರ ಸುಳ್ಳು ಕೇಸ್ ಗಳಿಗೆ ಆಯುಷ್ಯವಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್..

December 17, 2025
Next Post
ಕಲಬುರಗಿಯಲ್ಲಿ ಜೆಡಿಎಸ್ ಕಿಂಗ್ ಮೇಕರ್; ಬೆಳಗಾವಿ, ಧಾರವಾಡದಲ್ಲಿ ಬಿಜೆಪಿ ಗದ್ದುಗೆ ಹಿಡಿಯೋದು ಬಹುತೇಕ ಫಿಕ್ಸ್

ಕಲಬುರಗಿಯಲ್ಲಿ ಜೆಡಿಎಸ್ ಕಿಂಗ್ ಮೇಕರ್; ಬೆಳಗಾವಿ, ಧಾರವಾಡದಲ್ಲಿ ಬಿಜೆಪಿ ಗದ್ದುಗೆ ಹಿಡಿಯೋದು ಬಹುತೇಕ ಫಿಕ್ಸ್

Please login to join discussion

Recent News

Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!
Top Story

Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!

by ಪ್ರತಿಧ್ವನಿ
December 19, 2025
Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌
Top Story

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

by ಪ್ರತಿಧ್ವನಿ
December 18, 2025
ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ
Top Story

ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ

by ಪ್ರತಿಧ್ವನಿ
December 18, 2025
ಪೊಲೀಸ್ ಸಿಬ್ಬಂದಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ ನೀಡಿ: ಡಿಜಿಪಿಗೆ ಪತ್ರ!
Top Story

ಪೊಲೀಸ್ ಸಿಬ್ಬಂದಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ ನೀಡಿ: ಡಿಜಿಪಿಗೆ ಪತ್ರ!

by ಪ್ರತಿಧ್ವನಿ
December 18, 2025
Winter Session 2025: ತೀವ್ರ ವಿರೋಧದ ನಡುವೆಯೂ ದ್ವೇಷ ಭಾಷಣ ತಡೆ ವಿಧೇಯಕ ಅಂಗೀಕಾರ
Top Story

Winter Session 2025: ತೀವ್ರ ವಿರೋಧದ ನಡುವೆಯೂ ದ್ವೇಷ ಭಾಷಣ ತಡೆ ವಿಧೇಯಕ ಅಂಗೀಕಾರ

by ಪ್ರತಿಧ್ವನಿ
December 18, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!

Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!

December 19, 2025
Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

December 18, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada