
ರಾಜ್ಯ ಬಿಜೆಪಿ ನಾಯಕರ ವಕ್ಫ್ ವಿರುದ್ದದ ಹೋರಾಟ ಶನಿವಾರದಿಂದ ಮತ್ತೆ ಆರಂಭ ಆಗಿದೆ. ಎ ಟೀಮ್ ಒಂದು ಪ್ರಿಯಾಂಕ್ ಖರ್ಗೆ ವಿರುದ್ಧ ಹೋರಾಟ ಮಾಡ್ತಿದ್ರೆ, ಬಿ ಟೀಮ್ ವಕ್ಫ್ ವಿರುದ್ಧ ಹೋರಾಟ ಮಾಡುತ್ತಿದೆ ಎನ್ನುವುದು ರಾಜ್ಯದ ಜನರ ಕಣ್ಣಿಗೆ ನೇರವಾಗಿ ಕಾಣುವಂತಾಗಿದೆ. ಬಿಜೆಪಿ ಹೈಕಮಾಂಡ್ ಮಧ್ಯಪ್ರವೇಶದ ಬಳಿಕವೂ ಬಿಜೆಪಿ ಒಳಗಿನ ಬಣ ರಾಜಕೀಯ ನಿಲ್ಲುವ ಯಾವುದೇ ಲಕ್ಷಣ ಕಾಣಿಸ್ತಿಲ್ಲ..
ವಕ್ಫ್ ಆಸ್ತಿ ಎಂದು ನಮೂದು ಆಗುವುದು ಶುರುವಾದಾಗ ವಿಜಯಪುರದಲ್ಲಿ ಅಹೋರಾತ್ರಿ ಹೋರಾಟ ಮಾಡಿ ಯತ್ನಾಳ್, ಆ ಬಳಿಕ ಮೊದಲ ಹಂತದಲ್ಲಿ ಬೀದರ್, ಕಲಬುರಗಿಯಲ್ಲಿ ವಕ್ಫ್ ಪ್ರವಾಸ ಮಾಡಿ ರೈತರನ್ನ ಭೇಟಿಯಾಗಿದ್ದ ಯತ್ನಾಳ್ ಅಂಡ್ ಟೀಂ, ಇಂದಿನಿಂದ 2ನೇ ಹಂತದ ಹೋರಾಟ ಆರಂಭಿಸಿದೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದಲ್ಲಿ ಯತ್ನಾಳ್ ಟೀಂ ವಕ್ಪ್ ಆಸ್ತಿ ಸಂಕಷ್ಟ ಆಲಿಸುತ್ತಿದೆ.
ಕಂಪ್ಲಿ ಪಟ್ಟಣದ ಉದ್ಬವ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಶಾರದಾ ಶಾಲಾ ಆವರಣದವರೆಗೆ ವಕ್ಫ್ ಜನಜಾಗೃತಿ ಮೆರವಣಿಗೆ ನಡೆಸಲಾಯ್ತು. ಬಸನಗೌಡ ಪಾಟೀಲ್ ಯತ್ನಾಳ್, ಜಿಎಂ ಸಿದ್ದೇಶ್ವರ್, ರಮೇಶ್ ಜಾರಕಿಹೊಳಿ, ಅರವಿಂದ್ ಲಿಂಬಾವಳಿ, ಪ್ರತಾಪ್ ಸಿಂಹ, ಕುಮಾರ್ ಬಂಗಾರಪ್ಪ ಸೇರಿ ಹಲವು ಮಠಾಧೀಶರು ಭಾಗವಹಿಸಿದ್ರು. ಕಂಪ್ಲಿ ಭಾಗದ ಬಿಜೆಪಿ ಜನಪ್ರತಿನಿಧಿಗಳು ಮಾತ್ರ ಗೈರಾಗಿದ್ರು..

ವಕ್ಫ್ ಆಸ್ತಿ ವಿವಾದದ ಬಗ್ಗೆ ಸದನದಲ್ಲಿ ಸರ್ಕಾರ ನೀಡಿದ ಉತ್ತರ ಸಮರ್ಪಕವಾಗಿ ಇರಲಿಲ್ಲ. ರೈತರ ಪಹಣಿಗಳಲ್ಲಿ ಇನ್ನೂ ವಕ್ಫ್ ಅಂತಾನೇ ಇದೆ. ಜನರ ಸಮಸ್ಯೆ ಬಗೆಹರಿಯುವವರೆಗೂ ನಮ್ಮ ಹೋರಾಟ ನಿರಂತರ ಅಂತ ಸರ್ಕಾರ ಹಾಗೂ ಸಚಿವ ಜಮೀರ್ ವಿರುದ್ದ ಯತ್ನಾಳ್ ಕಿಡಿಕಾರಿದ್ದಾರೆ. ಇನ್ನು ವಕ್ಫ್ ಮಂಡಳಿ ದೇಶಕ್ಕೆ ಅಂಟಿಕೊಂಡಿರೋ ಕ್ಯಾನ್ಸರ್. ಮೊದಲ ಹಂತದ ಯಶಸ್ಸಿ ಹೋರಾಟದ ಬಳಿಕ ಕಂಪ್ಲಿಯಲ್ಲಿ ಎರಡನೇ ಹಂತದ ಹೋರಾಟ ಮಾಡ್ತಿದ್ದೇವೆ. ವಕ್ಫ್ ದೇಶಕ್ಕೆ ಮುಂದೊಂದು ದಿನ ಶಾಪವಾಗ್ತದೆ ಎಂದು ಹೇಳಿದ್ದೇನೆ. ಇಂಡಿಯನ್ ಅರ್ಮಿ ಆಸ್ತಿ, ರೈಲ್ವೇ ಆಸ್ತಿ, ವಕ್ಪ್ ಅಸ್ತಿ ದೇಶದ ಮೂರು ದೊಡ್ಡ ಆಸ್ತಿ. ನೆಹರು ಮಾಡಿದ ದೊಡ್ಡ ದ್ರೋಹ. ಅಂಬೇಡ್ಕರ್ ಸಂವಿಧಾನದಲ್ಲಿ ಜಾತ್ಯಾತೀತ ಪದ ಬಳಸಿರಲಿಲ್ಲ. ಭಾರತ ಜಾತಿ ಆಧಾರದಲ್ಲಿ ಒಡೆಯಲಾಯ್ತು. ನೆಹರು ಪ್ರಧಾನಿ ಮಾಡಲು ಗಾಂಧಿ ಪ್ಲಾನ್ ಮಾಡಿದ್ರು. ಗಾಂಧಿಯವರಿಗೆ ಮಕ್ಕಳಿರಲಿಲ್ಲ, ಜಿನ್ನಗಾಗಿ ಪಾಕಿಸ್ತಾನ ಹಾಗು ಭಾರತದಲ್ಲಿ ನೆಹರು ಅವರನ್ನು ಪ್ರದಾನಿ ಮಾಡಿದ್ರು
ಆದರೆ ಬಿಜೆಪಿ ಹೈಕಮಾಂಡ್ ಯತ್ನಾಳ್ ಅವರನ್ನು ಕರೆದು ಮಾತನಾಡಿತ್ತು. ಆ ಬಳಿಕ ವಿಜಯೇಂದ್ರ ಕೂಡ ದೆಹಲಿಗೆ ಭೇಟಿ ನೀಡಿ ನಾಯಕರನ್ನು ಭೇಟಿ ಮಾಡಿದ್ರು. ಆದರೆ ಯಾವುದೂ ವರ್ಕ್ ಆಗಿರುವಂತೆ ಕಾಣ್ತಿಲ್ಲ. ಮತ್ತೆ ಯತ್ನಾಳ್ 2ನೇ ಹಂತದ ಹೋರಾಟ ಶುರು ಮಾಡಿದ್ದಾರೆ. ಅದೇ ಬಂಡಾಯ ಮುಂದುವರಿದಿದೆ. ಯತ್ನಾಳ್ ಮೂಲಕ ಬಂಡಾಯ ಮಾಡಿಸುತ್ತಿರುವುದೇ ಬಿಜೆಪಿ ಹೈಕಮಾಂಡ್ ನಾಯಕರು ಎನಿಸುತ್ತದೆ. ಒಂದು ವೇಳೆ ಬಿಜೆಪಿ ಹೈಕಮಾಂಡ್ ನಾಯಕರು ಈ ಬಂಡಾಯದ ಹಿಂದೆ ಇಲ್ಲ ಎನ್ನುವುದಾದರೆ, ಯತ್ನಾಳ್ ಹಾಗು ವಿಜಯೇಂದ್ರ ಜೊತೆಗೆ ಮಾತನಾಡಿದ ಬಳಿಕ ಬಂಡಾಯ ತಣಿಯುವ ಕೆಲಸ ಆಗಬೇಕಿತ್ತು. ಅದು ಆಗಿಲ್ಲ ಎಂದಾಗ ಯತ್ನಾಳ್ ಬೆನ್ನಿಗೆ ನಿಂತು ಯಾರೋ ಆಟವಾಡಿಸುತ್ತಿದ್ದಾರೆ ಎನಿಸುವಂತಾಗಿದೆ.