
ಟೊರೋಂಟೊ ; ಕೆನಡಾದ ನ್ಯೂ ಬ್ರನ್ಸ್ವಿಕ್ ಪ್ರಾಂತ್ಯದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಮಾಂಕ್ಟನ್ ನಗರದ ವಾಟರ್ ಪಾರ್ಕ್ನಲ್ಲಿ ಸಾರ್ವಜನಿಕರೊಂದಿಗೆ ಅಸ್ವಾಭಾವಿಕ ಲೈಂಗಿಕ ವರ್ತನೆ (groping) ಮಾಡಲು ಹೋದ ನಂತರ ಬಂಧಿಸಲಾಯಿತು.
25 ವರ್ಷದ ವ್ಯಕ್ತಿ ನೋವಾ ಸ್ಕಾಟಿಯಾದ ಹ್ಯಾಲಿಫ್ಯಾಕ್ಸ್ನಲ್ಲಿ ವಾಸಿಸುತ್ತಿದ್ದು. ರಾಯಲ್ ಕೆನಡಿಯನ್ ಮೌಂಟೆಡ್ ಪೋಲೀಸ್ ಪ್ರಕಾರ ಜುಲೈ 7 ರಂದು ಮಾಂಕ್ಟನ್ನಲ್ಲಿರುವ ಸಾರ್ವಜನಿಕ ವಾಟರ್ ಪಾರ್ಕ್ನಲ್ಲಿ ಲೈಂಗಿಕ ಹಸ್ತಕ್ಷೇಪ ಮತ್ತು ಲೈಂಗಿಕ ದೌರ್ಜನ್ಯದ ವರದಿಯ ಕುರಿತು ಕ್ರಮ ಕೈಗೊಂಡಿದೆ ಎಂದು ಅಧಿಕಾರಿ ಹೇಳಿದರು. ಪೊಲೀಸರ ಪ್ರಕಾರ, ವ್ಯಕ್ತಿ ವಾಟರ್ ಪಾರ್ಕ್ ಸುತ್ತಲೂ ನಡೆದುಕೊಂಡು ಜನರನ್ನು ತಬ್ಬಿಕೊಳ್ಳುತ್ತಿದ್ದನು. ಕನಿಷ್ಠ ಹನ್ನೆರಡು ಜನರು ಅತನ ವಿರುದ್ದ ಆರೋಪಿಸಿ ದೂರು ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ, ಅವರಲ್ಲಿ ಕೆಲವರು 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರು.
ಸ್ಥಳದಲ್ಲಿದ್ದ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ. ನಂತರ ಅವರನ್ನು ಬಂಧನದಿಂದ ಬಿಡುಗಡೆ ಮಾಡಲಾಯಿತು ಮತ್ತು ಅಕ್ಟೋಬರ್ 24 ರಂದು ಮಾಂಕ್ಟನ್ ಪ್ರಾಂತೀಯ ನ್ಯಾಯಾಲಯಕ್ಕೆ ಹಾಜರಾಗಲು ಸೂಚಿಸಲಾಗಿದೆ.
ಈ ಮಧ್ಯೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಏನಾದರೂ ತಿಳಿದಿದ್ದರೆ ಜನರು ಮುಂದೆ ಬಂದು ದೂರು ನೀಡುವಂತೆ ಪೊಲೀಸರು ಕೇಳುತ್ತಿದ್ದಾರೆ.
“ಜುಲೈ 7 ರಂದು ಸಾರ್ವಜನಿಕರು ಸದರಿ ಪಾರ್ಕ್ ಗೆ ತೆರಳಿದ್ದರೆ , ಅಥವಾ ಮಕ್ಕಳು ತೆರಳಿದ್ದರೆ ಪೋಷಕರು ಮಕ್ಕಳೊಂದಿಗೆ ಮಾತನಾಡಿ ಏನಾದರೂ ದೌರ್ಜನ್ಯ ನಡೆದಿದ್ದರೆ ನಮಗೆ ತಿಳಿಸಿ. ಲೈಂಗಿಕ ದೌರ್ಜನ್ಯದ ದೂರು ಯಾವುದೇ ಸಮಯದಲ್ಲಿ ಮಾಡಬಹುದು ಎಂದು ಜನರು ತಿಳಿದುಕೊಳ್ಳಬೇಕೆಂದು ನಾವು ಬಯಸುತ್ತೇವೆ. ನೀವು ಲೈಂಗಿಕ ದುಷ್ಕೃತ್ಯಕ್ಕೆ ಬಲಿಯಾಗಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ. ”ಎಂದು ಪೋಲೀಸ್ ಬಿಡುಗಡೆ ಮಾಡಿದ ಅಧಿಕೃತ ಪ್ರಕಟಣೆ ತಿಳಿಸಿದೆ.
ಆರೋಪಿಯ ಗುರುತನ್ನು ಪೊಲೀಸರು ಬಹಿರಂಗಪಡಿಸದಿದ್ದರೂ, ವಾಟರ್ ಪಾರ್ಕ್ನಲ್ಲಿ ಆತನನ್ನು ಬಂಧಿಸಿರುವ ಚಿತ್ರಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹರಡುತ್ತಿವೆ.
ವ್ಯಕ್ತಿಯಿಂದ ಕಿರುಕುಳಕ್ಕೊಳಗಾದ ಅಪ್ರಾಪ್ತ ಬಾಲಕಿಯರ ತಾಯಿ ತನ್ನ ಚಿತ್ರಗಳನ್ನು ಫೇಸ್ಬುಕ್ ಸಮುದಾಯದಲ್ಲಿ ಪೋಸ್ಟ್ ಮಾಡಿ, ಅವನ ಬಗ್ಗೆ ಇತರ ಪೋಷಕರಿಗೆ ಎಚ್ಚರಿಕೆ ನೀಡಿದರು. ಶಂಕಿತ ಇತರ ಭಾರತೀಯ ಪುರುಷರ ಗುಂಪಿನೊಂದಿಗೆ ಇದ್ದ ಎಂದು ಮಹಿಳೆ ಹೇಳಿಕೊಂಡಿದ್ದಾಳೆ.