
ರಾಜ್ಯ ಸರ್ಕಾರ ಕೈಗೊಂಡಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸುತ್ತಿರುವ ಸಿಬ್ಬಂದಿಗಳ ಮೇಲೆ ಕೇಂದ್ರ ಸಚಿವ ವಿ.ಸೋಮಣ್ಣ ಉದ್ಧಟತನದ ಪ್ರದರ್ಶನ ತೋರಿರುವ ಘಟನೆ ವಿಜಯನಗರದಲ್ಲಿರುವ ಕೇಂದ್ರ ಸಚಿವರ ಮನೆಯಲ್ಲಿ ನಡೆದಿದೆ.
ಸಮೀಕ್ಷೆ ನಡೆಸುತ್ತಿರುವ 9 ಸಿಬ್ಬಂದಿಗಳು ಅವರ ಮನೆಗೆ ಬಂದಿದ್ದಾರೆ, ಅವರು ಪ್ರಶ್ನೆಗಳನ್ನು ಕೇಳಿದ್ದಾರೆ. ಸೌಜನ್ಯದಿಂದಲೇ ಉತ್ತರ ನೀಡಬಹುದಾಗಿತ್ತಾದರೂ ಕೂಡ ಕೇಂದ್ರ ಸಚಿವ ಹಾರಿಕೆ ಉತ್ತರಗಳನ್ನು ನೀಡುವ ಬದಲು ಸಮೀಕ್ಷೆ ನಡೆಸಲು ಬಂದ ಸಿಬ್ಬಂದಿಯೊಂದಿಗೆ ಸೌಜನ್ಯದಿಂದ ಬಡೆದುಕೊಂಡು, ತಾಳ್ಮೆ ವಿಚೇನೆಯಿಂದ ನಡೆದುಕೊಂಡು ಸಹಕರಿಸಬಹುದಿತ್ತು. ಅವರು ಹಾಗೆ ಮಾಡದೆ ತಾನೊಬ್ಬ ಕೇಂದ್ರ ಸಚಿವ, ರಾಷ್ಟ್ರ ಮಟ್ಟದ ರಾಜಕಾರಣಿ ಎಂದು ಭಾವಸಿ ದರ್ಪವನ್ನು ತೋರಿ ವಿನಾಕರಾಣ ಟೀಕೆಗೆಗಳಿಗೆ ಗುರಿಯಾಗಿದ್ದಾರೆ.

ಇಡೀ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವ ಸರ್ಕಾರವು ಸಮೀಕ್ಷೆ ನಡೆಸುತ್ತಿದೆ. ಪ್ರತಿಯೊಬ್ಬರ ಮನೆಗೆ ಹೋಗಿ, ವಯಕ್ತಿಕ ಮಾಹಿತಿಗಳನ್ನು ಸಂಗ್ರಹ ಮಾಡುತ್ತಿರುವ ಸಿಬ್ಬಂದಿಗಳು. ಇಂದು ವಿಜಯನಗರದರಲ್ಲಿರುವ ಮಾಜಿ ಸಚಿವ ಹಾಗೂ ಹಾಲಿ ಸಂಸದ, ಕೇಂದ್ರ ಸಚಿವ ವಿ.ಸೋಮಣ್ಣ ನ ಮನೆಗೆ ಹೋಗಿ ಸಮೀಕ್ಷೆ ನಡೆಸು ಮುಂದಾಗಿದ್ದಾರೆ. ಅವರ ಬಳಿ ನಿಮ್ಮ ಉಪಜಾತಿ ಯಾವುದು ? ಯಾವ ವಯಸ್ಸನಿಲ್ಲಿ ನೀವು ಮದುವೆಯಾದ್ರಿ? ಎಂಬ ಪ್ರಶ್ನೆಗಳಿಗೆ ಕೇಳಿದ್ದಾರೆ. ಅದಕ್ಕೆ ಉಡಾಫೆ ಉತ್ತರಗಳನ್ನು ನೀಡಿದ್ದಾರೆ. ಉಪ ಜಾತಿ ಬಗ್ಗೆ ಕೇಳಿದಕ್ಕೆ ಸಿದ್ದರಾಮಯ್ಯ ಅವರ ಜಾತಿ, ಮದುಗೆ ಸಂಬಂಧಿಸಿದಿ ಪ್ರಶ್ನೆಗೆ ನಮ್ಮ ಅಪ್ಪನನ್ನು ಕೇಳಬೇಕು ಎಂದು ಪ್ರತಿಕ್ರಿಯೆಯಿಸಿದ್ದಾರೆ. ಸೋಮಣ್ಣ ಅನೇಕ ಪ್ರಶ್ನೆಗಳಿಗೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಹೆಸರನ್ನೇ ನಮೂದಿಸಿ ಎಂದಿದ್ದಾರೆ. ಈ ಮೂಲಕ ಅವರು ಜನಪ್ರತಿನಿಧಿ ಎಂಬುದನ್ನೇ ಮರೆತು ಸಣ್ಣತನವನ್ನು ತೋರಿರುವ ಹಿನ್ನಲೆಯಲ್ಲಿ ಮಾಧ್ಯಮಗಳಲ್ಲೂ ಹಾಗೂ ಸಾಮಾಜಿಕ ಜಾಲತಾಣಗಳಲ್ಲೂ ಅವರ ವಿರುದ್ಧ ಟೀಕೆಗಳು ಕೇಳಿಬರುತ್ತಿದ್ದು, ನೀವು ಯಾವ ಸೀಮೆ ಸಂಸದ ಹಾಗೂ ಕೇಂದ್ರ ಸಚಿವ ಎಂಬ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.
