ದಿನೇಶ್ ಗುಂಡೂರಾವ್ ಅವರು ಎಲುಬಿಲ್ಲದ ನಾಲಿಗೆ ಹರಿಯಬಿಟ್ಟಿದ್ದಾರೆ. ಹಿಂದು ಸಂಘಟನೆಯವರನ್ನು ರೌಡಿ ಶೀಟರ್ ಎಂದು ತೋರಿಸ್ತಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಕ್ರೋಶ ಹೊರ ಹಾಕಿದ್ದಾರೆ. RSS ಮತ್ತು ಬಿಜೆಪಿ ಕಾರ್ಯಕರ್ತರಿಗೆ ಕೇಸ್ ಹಾಕುವ ತಾಕತ್ ಇದೆಯಾ..? ಮಂಗಳೂರನ್ನು ರಕ್ಷಣೆ ಮಾಡೋಕೆ ನಿಮ್ಮಿಂದ ಆಗಿಲ್ಲ. ರೌಡಿಶೀಟರ್ ಅಂತೀರಲ್ಲ, ನಿಮ್ಮಲ್ಲೇ ಸಚಿವರು, ಶಾಸಕರು ಇದ್ದಾರಲ್ಲ ಅವರ ಮನೆಗೆ ಹೋಗೋದಿಲ್ಲವಾ..? ಬಜ್ಪೆ ಪೊಲೀಸ್ ಠಾಣೆಯಲ್ಲಿ ಒಬ್ಬ ಕಾನ್ಸಟೇಬಲ್ ಇದ್ದಾನೆ ರಶೀದ್ ಎಂಬುವನು. ಅವನನ್ನು ಬಂಧಿಸಿ, ಅವನನ್ನು ಮಂಪರು ಪರೀಕ್ಷೆಗೆ ಒಳಪಡಿಸಿ. ಮುಖ್ಯಮಂತ್ರಿಗಳೇ ಖಾದರ್ ಹಾಗೂ ಪರಮೇಶ್ವರ್ರಿಂದ ರಾಜೀನಾಮೆ ಪಡೆದುಕೊಳ್ಳಿ ಎಂದು ಒತ್ತಾಯ ಮಾಡಿದ್ದಾರೆ.

ಸುಹಾಸ್ ಶೆಟ್ಟಿಯ ಕೊಲೆಗೆ ವಿದೇಶದಿಂದಲೂ ಹಣ ಬಂದಿದೆ. ಅದಕ್ಕಾಗಿ ನಾನು ಇದನ್ನು ಎನ್ಐಎ ಮೂಲಕ ತನಿಖೆ ಮಾಡಿಸಿ ಎಂದು ಅಮಿತ್ ಶಾಗೂ ಮನವಿ ಮಾಡಿದ್ದೇವೆ. ಪರಮೇಶ್ವರ್ ಒಬ್ಬ ನಾಲಾಯಕ್ ಗೃಹ ಮಂತ್ರಿ, ಅವರಿಗೆ ಶಕ್ತಿನೇ ಇಲ್ಲ. ಮುಖ್ಯಮಂತ್ರಿಗಳಿಗೆ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಅಂದ್ರೆ ಪರಮೇಶ್ವರ್ ಅವರಿಂದ ರಾಜೀನಾಮೆ ಪಡೆದುಕೊಳ್ಳಬೇಕು. ನೀವು ಗೃಹ ಖಾತೆ ಪಡೆಯಿರಿ, ಆದರೆ ನಿಮ್ಮಿಂದ ನ್ಯಾಯ ಸಿಗುತ್ತದೆ ಎಂದುಕೊಂಡಿಲ್ಲ. ಆದರೆ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ತಗೊಂಡಿದ್ದೀರಿ. ಅದಕ್ಕಾದ್ರು ಪ್ರಕರಣವನ್ನು ಎನ್ಐಎಗೆ ವಹಿಸಬೇಕು. ಖಾದರ್ ಮತ್ತೆ ರಶೀದ್ ಇಬ್ಬರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದ್ರೆ, ಕರಾವಳಿ ಭಾಗದ ಸಮಸ್ಯೆ ಬಗೆಹರಿಯಲಿದೆ ಎಂದಿದ್ದಾರೆ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ.

ಉತ್ತರ ಭಾರತದಲ್ಲಿ ಪಪ್ಪು, ದಕ್ಷಿಣ ಭಾರತದಲ್ಲಿ ಟಿಪ್ಪು. ಈ ಇಬ್ಬರು ಸೇರಿಕೊಂಡು ಇಡೀ ದೇಶ ಮುಳುಗಿಸ್ತಿದ್ದಾರೆ ಎನ್ನುವ ಮೂಲಕ ಶೋಭಾ ಕರಂದ್ಲಾಜೆ ಸಿಎಂ ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ಮಾಡಿದ್ದಾರೆ. ಈ ಕೇಸ್‌ನ ಜಾಡು ಹಿಡಿದು ಹೋಗಬೇಕಾಗಿದ್ರಿಂದ ಎನ್ಐಎಗೆ ವಹಿಸಬೇಕು ಎಂದಿದ್ದಾರೆ. ಪರಮೇಶ್ವರ್ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲ ರಾಗಿದ್ದಾರೆ. ರಾಜ್ಯದಲ್ಲಿ ಕಾನೂನು ಅನ್ನೋದೇ ಇಲ್ಲ. ರಾಜ್ಯದಲ್ಲಿ ರಕ್ಷಣೆ ಕೊಡೋಕೆ ಸಾಧ್ಯವಾದರೆ ಗೃಹ ಮಂತ್ರಿಗಳಾಗಿ ಮುಂದುವರಿಯರಿ, ಇಲ್ಲವಾದಲ್ಲಿ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದಿದ್ದಾರೆ. ಗೃಹ ಸಚಿವರಾಗಿ ಪದೇ ಪದೇ ನಮಗೆ ಮಾಹಿತಿಯೇ ಇಲ್ಲ ಅಂತಾರೆ. ನಿಮಗೆ ಗೃಹ ಇಲಾಖೆ ನಿಭಾಯಿಸಲು ಆಗೋದಿಲ್ಲ ಅಂದರೆ ಬೇರೊಂದು ಖಾತೆ ತೆಗೆದುಕೊಳ್ಳಿ ಎಂದು ಕಿಡಿಕಾರಿದ್ದಾರೆ.

ಇದೇ ವೇಳೆ ನಮ್ಮ ಕಾರ್ಯಕರ್ತರು ಜಾಗೃತರಾಗರಾಗಿರಬೇಕು ಎಂದು ಬಿಜೆಪಿ ಕಾರ್ಯಕರ್ತರಿಗೆ ಶೋಭಾ ಕರಂದ್ಲಾಜೆ ಮನವಿ ಮಾಡಿದ್ದಾರೆ. ರಾತ್ರಿ ಯಾರು ಕೂಡ ಒಬ್ಬ ಒಬ್ಬರೇ ಓಡಾಡಬೇಡಿ ಎಂದಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮ್ಮ ಕಾರ್ಯಕರ್ತರು ಓಡಾಡೋದೇ ಕಷ್ಟವಾಗಿದೆ ಎಂದಿದ್ದಾರೆ. ರೌಡಿಶೀಟರ್ ಎಲ್ರೂ ಹಿಂದೂ ಸಂಘಟನೆ ಸೇರ್ತಿದ್ದಾರೆ ಅಂತ ದಿನೇಶ್ ಗುಂಡೂರಾವ್ ಹೇಳ್ತಾರೆ. ನಾನು ಹಿಂದೂ ಸಂಘಟನೆಯಿಂದ ಬಂದಿದ್ದೇನೆ, ಹಾಗಾದರೆ ನಿಮಗೆ ನಮ್ಮ ಮೇಲೆ ಕೇಸ್ ತಾಖತ್ ಇದೆಯಾ..? ನಾನು ಆರ್ಎಸ್ಎಸ್ ವಿಹೆಚ್ಪಿ ಹಿಂದೂ ಸಂಘಟನೆಯವಳು. ಆಮೇಲೆ ನಾನು ಬಿಜೆಪಿ. ಹಾಗಾದರೆ ಕೇಸ್ ಹಾಕಿ ನೋಡೋಣ. ನಿಮಗೆ ತಾಖತ್ ಇದ್ರೆ ನನ್ನ ಕೇಸ್ ಹಾಕಿ ಎಂದು ದಿನೇಶ್ ಗುಂಡೂರಾವ್ಗೆ ಸವಾಲ್ ಹಾಕಿದ್ದಾರೆ ಶೋಭಾ ಕರಂದ್ಲಾಜೆ.













