ಬಿ.ಎಸ್. ಯಡಿಯೂರಪ್ಪ ರವರ ಬಗ್ಗೆ ಮಾತನಾಡಿದ ಸಚಿವರು ಎಲ್ಲಿಯವರೆಗೆ ಯಡಿಯೂರಪ್ಪ ರವರು ನಾಯಕರಾಗಿರುತ್ತಾರೋ ಅವರೇ ನಮ್ಮ ನಾಯಕರು
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಮಾನ್ಯ ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೋವಿಂದರಾಜನಗರ ಕ್ಷೇತ್ರದ ಶಾಸಕರಾದ ಶ್ರೀ ವಿ.ಸೋಮಣ್ಣ ರವರ ನಿವಾಸಕ್ಕೆ ಸೌಹಾರ್ದಯುತ ಭೇಟಿಯನ್ನು ನೀಡಿದ್ದರು.
ಈ ವೇಳೆ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಸಚಿವರು ಬಿ.ಎಲ್.ಸಂತೋಷ್ ರವರು ಬೆಳಗ್ಗೆ ಕರೆ ಮಾಡಿ ಅಮಿತ್ ಶಾ ರವರು ಬರುತ್ತಿದ್ದಾರೆ ಅಂತಾ ತಿಳಿಸಿದ್ದರು. ರಾಜ್ಯದ ಜನರು ಕೆಲಸ ಮಾಡಲು ಮೊದಲು ಅವಕಾಶ ಮಾಡಿಕೊಟ್ಟಿದ್ದು ಬಿನ್ನಿಪೇಟೆ, ನಂತರ ವಿಜಯನಗರ ಹೀಗೆ ನಾನು 45 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಒಳ್ಳೆಯತನಕ್ಕೆ, ಕೆಲಸಗಾರನಿಗೆ ಭಗವಂತ ಒಂದೊಂದು ರೂಪದಲ್ಲಿ ಸಹಕಾರ ಕೊಡ್ತಾನೆ. ಒಬ್ಬ ಕಾರ್ಯಕರ್ತನ ಮನೆಗೆ ಅಮಿತ್ ಶಾ ಅವರು ಭೇಟಿ ನೀಡಿದ್ದು ಹೆಮ್ಮೆಯ ವಿಷಯ. ಪಕ್ಷದ ರಾಜ್ಯಮಟ್ಟದ ಮುಖಂಡನ ಮನೆಗೆ ಭೇಟಿ ಕೊಟ್ಟಿದ್ದು ಅವರ ದೊಡ್ಡತನ ಎಂದು ಸಂತಸ ವ್ಯಕ್ತಪಡಿಸಿದರು.
ಇದೇ ವೇಳೆ ಶ್ರೀ ಬಿ.ಎಸ್. ಯಡಿಯೂರಪ್ಪ ರವರ ಬಗ್ಗೆ ಮಾತನಾಡಿದ ಸಚಿವರು ಎಲ್ಲಿಯವರೆಗೆ ಯಡಿಯೂರಪ್ಪ ರವರು ನಾಯಕರಾಗಿರುತ್ತಾರೋ ಅವರೇ ನಮ್ಮ ನಾಯಕರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿ.ಜೆ.ಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಶ್ರೀ ಬಿ.ಎಲ್. ಸಂತೋಷ್, ರಾಜ್ಯ ಬಿ.ಜೆ.ಪಿ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ರಾಜೇಶ್ ಕುಂತೂರು, ರಾಜ್ಯ ಬಿಜೆಪಿ ಉಸ್ತುವಾರಿ ಶ್ರೀ ಅರುಣ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ನಳೀನ್ ಕುಮಾರ್ ಕಟೀಲ್, ಸಂಸದ ಶ್ರೀ ತೇಜಸ್ವಿ ಸೂರ್ಯ, ಸಚಿವರಾದ ಶ್ರೀ ಎಸ್.ಟಿ ಸೋಮಶೇಖರ್, ಶ್ರೀ ಮುನಿರತ್ನ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಿ.ಟಿ.ರವಿ, ರಾಜ್ಯ ಬಿಜೆಪಿ ನಾಯಕರಾದ ಶ್ರೀ ಮಹೇಶ್ ತೆಂಗಿನಕಾಯಿ, ಬಿಜೆಪಿ ಯುವ ಮುಖಂಡ ಶ್ರೀ ಅರುಣ್ ಸೋಮಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.