ಶಿಕ್ಷಣ ಪಡೆಯದ ಜನರು “ದೇಶಕ್ಕೆ ಹೊರೆ, ಅನಕ್ಷರಸ್ಥರು ಭಾರತದ ಉತ್ತಮ ಪ್ರಜೆಗಳಾಗಲು ಸಾಧ್ಯವಿಲ್ಲ” ಎಂದು ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ನರೇಂದ್ರ ಮೋದಿ ಗುಜರಾತ್ನ ಸಿಎಂ ಮತ್ತು ದೇಶದ ಪಿಎಂ ಅಧಿಕಾರದಲ್ಲಿ 20 ವರ್ಷಗಳ ಪೂರೈಸಿರುವ ಹಿನ್ನೆಲೆ ಸಂಸಾದ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾರನಾಡಿದ ಅಮಿತ್ ಶಾ, ಮೊದಲು ಗುಜರಾತ್ ಮುಖ್ಯಮಂತ್ರಿಯಾಗಿ ಮತ್ತು ನಂತರ ಭಾರತದ ಪ್ರಧಾನಿಯಾಗಿ, ಶಾಲೆಗಳಲ್ಲಿ ದಾಖಲಾತಿಯನ್ನು ಹೆಚ್ಚಿಸಲು ಪ್ರಸ್ತುತ ಸರ್ಕಾರವು ಹೇಗೆ ಕೊಡುಗೆ ನೀಡಿದೆ ಎಂಬುದರ ಕುರಿತು ಮಾತನಾಡಿದ್ದಾರೆ.
“ನೀವು ಇದನ್ನು ಮೌಲ್ಯಮಾಪನ ಮಾಡಿದಾಗ, ರಾಷ್ಟ್ರದ ಪ್ರಗತಿಗೆ ಅದರ ಕೊಡುಗೆ ಏನೆಂದು ನಿಮಗೆ ತಿಳಿಯುತ್ತದೆ. ಏಕ್ ಅನ್ಪಾದ್ ಆದ್ಮಿ ದೇಶ್ ಪಾರ್ ಕಿತ್ನಾ ಬಡಾ ಬೊಜ್ ಬಂತಾ ಹೈ. ನ ಜೋ ಅಪ್ನೆ ಸಂವಿಧಾನ ಕೇ ದಿಯೇ ಹ್ಯು ಅಧಿಕಾರೊ ಕೋ ಜಾಂತಾ ಹೈ, ನ ಸ್ಮ್ವಿಧನ್ ನೇ ಹಮ್ಸೆ ಜೋ ಅಪೇಕ್ಷ ಕರಿ ಹೈ ವೋ ದಯಿತ್ವಾ ಕೋ ಜಾಂತಾ ಹೈ. ವೋ ಕೈಸೆ ಏಕ್ ಅಚ್ಚಾ ನಗ್ರಿಕ್ ಬ್ಯಾನ್ ಸಕ್ತಾ ಹೈ? ಇಸ್ಕೆ ಅಂದರ್ ಅಮುಲ್ಚೂರ್ ಪರಿವರ್ತನ್ ಹೈ. (ಅನಕ್ಷರಸ್ಥ ವ್ಯಕ್ತಿಯು ದೇಶದ ಮೇಲೆ ಹೊರೆಯಾಗಿದ್ದಾನೆ. ಅವನಿಗೆ ಸಂವಿಧಾನ ನೀಡಿದ ಹಕ್ಕುಗಳು ಬಗ್ಗೆ ಅದರಿಂದ ಆತನಿಂದ ನಿರೀಕ್ಷಿತ ಕರ್ತವ್ಯಗಳ ಬಗ್ಗೆ ತಿಳಿದಿಲ್ಲ. ಅಂತಹ ವ್ಯಕ್ತಿಯು ಹೇಗೆ ಉತ್ತಮ ನಾಗರಿಕನಾಗುತ್ತಾನೆ?) ಎಂದು ಹೇಳಿದ್ದಾರೆ.
ನರೇಂದ್ರ ಮೋದಿ ಗುಜರಾತ್ ಸಿಎಂ ಆಗಿದ್ದಾಗ ಶಿಕ್ಷಣವನ್ನು ಅರ್ಧದಲ್ಲಿಯೇ ಕೈಬಿಡುವ ಸಮಸ್ಯೆ ದೊಡ್ಡದಾಗಿತ್ತು. ಅವರು ದಾಖಲಾತಿ ಅಭಿಯಾನವನ್ನು ಹಬ್ಬದಂತೆ ಮಾಡಿ ಅದನ್ನು ಶೇ100 ರಷ್ಟು ಸಾಧಿಸಿದರು” ಇದರ ಫಲಿತಾಂಶವೆಂದರೆ ಡ್ರಾಪ್ಔಟ್ ದರವು 37% ರಿಂದ 1% ಕ್ಕೆ ಇಳಿದಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯನ್ನು “ಒಬ್ಬ ಪ್ರಜಾಪ್ರಭುತ್ವವಾದಿ ನಾಯಕ” ಎಂದು ಬಣ್ಣಿಸಿ ಶಾ, ಪ್ರಸ್ತುತ ಆಡಳಿತದ ಅವಧಿಯಲ್ಲಿ ಕೇಂದ್ರ ಸಚಿವ ಸಂಪುಟವು ಎಂದಿಗೂ ಇಂತಹ ಪ್ರಜಾಪ್ರಭುತ್ವದ ರೀತಿಯಲ್ಲಿ ಕಾರ್ಯನಿರ್ವಹಿಸಿಲ್ಲ ಎಂದು ಅವರ ವಿಮರ್ಶಕರು ಸಹ ಒಪ್ಪಿಕೊಳ್ಳುತ್ತಾರೆ.
ಮೋದಿ ಒಬ್ಬ ಸರ್ವಾಧಿಕಾರ ನಾಯಕ ಎಂಬ ಆರೋಪಗಳನ್ನು ತಿರಸ್ಕರಿಸಿದ ಶಾ, ಪ್ರಧಾನಮಂತ್ರಿಯವರು ತಮ್ಮ ಹುದ್ದೆ ಅಥವಾ ಅವರ ಸ್ಥಾನವನ್ನು ಲೆಕ್ಕಿಸದೆ ಯಾರೇ ಯೋಗ್ಯ ಸಲಹೆಗಳನ್ನು ನೀಡಿದ್ದರು ಅದನ್ನು ಸ್ವೀಕರಿಸುತ್ತಾರೆ ಎಂದು ಹೇಳಿದ್ದಾರೆ. ಮತ್ತು ರಾಜಕೀಯ ಅಪಾಯಗಳನ್ನು ಲೆಕ್ಕಿಸದೇ ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳಲು ಮೋದಿ ಎಂದಿಗೂ ಹಿಂಜರಿಯಲಿಲ್ಲ ಎಂದು ಅವರು ಹೇಳಿದ್ದಾರೆ.

ಮೋದಿ ಅಧಿಕಾರದಲ್ಲಿರುವುದು ದೇಶದಲ್ಲಿ ಬದಲಾವಣೆ ತರಲು ಕೇವಲ ಸರ್ಕಾರವನ್ನು ನಡೆಸಲಿಕ್ಕಲ್ಲ ಎಂದು ಶಾ ಸಮರ್ಥಿಸಿಕೊಂಡಿದ್ದಾರೆ. “ಆದ್ದರಿಂದ, ಅವರು ಪಕ್ಷದ ಬೆಂಬಲಿಗರಿಗೆ ವಿರುದ್ಧವಾಗಿರಬಹುದು ಆದರೆ ರಾಷ್ಟ್ರ ಮತ್ತು ಜನರ ಹಿತಾಸಕ್ತಿಗಾಗಿ ಕಠಿಣ ಮತ್ತು ಅಪಾಯಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂದು ಹೇಳಿದ್ದಾರೆ.