ಬೆಂಗಳೂರು:ಭಾರಿ ಮಳೆಯ ನಡುವೆ ಬೆಂಗಳೂರು ಕಟ್ಟಡ ಕುಸಿತದ ದೃಶ್ಯವಿರುವ ಮೈನಡುಕ ಹುಟ್ಟಿಸುವ ವಿಡಿಯೋ ವೈರಲ್ ಆಗಿದೆ. ಈ ದುರಂತದಲ್ಲಿ ಮೂವರು ಮೃತಪಟ್ಟಿದ್ದು, 14 ಜನರ ರಕ್ಷಣೆ ಮಾಡಲಾಗಿದೆ. ಇನ್ನೂ ಕೆಲವರು ಕುಸಿದ ಕಟ್ಟಡದ ಅಡಿಯಲ್ಲಿ ಸಿಲುಕಿದ್ದು ಅವರ ರಕ್ಷಣಾ ಕಾರ್ಯ ಮುಂದವರಿದಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
ಹೆಣ್ಣೂರು ಸಮೀಪದ ಬಾಬುಸಾಬ್ ಪಾಳ್ಯದ ವಡ್ಡರಪಾಳ್ಯದಲ್ಲಿ ಈ ದುರಂತ ನಡೆದಿದೆ. ಅಪಾರ್ಟ್‌ಮೆಂಟ್ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಬಿಹಾರ ಮೂಲದ 20 ಕಾರ್ಮಿಕರು ಟೈಲ್ಸ್ ಮತ್ತು ಪ್ಲಂಬಿಂಗ್, ಪೇಂಟಿಂಗ್ ಕೆಲಸದಲ್ಲಿದ್ದಾಗಿ ಈ ದುರಂತ ಸಂಭವಿಸಿದೆ. ಅವಶೇಷಗಳ ಅಡಿಯಲ್ಲಿ 20 ಕಾರ್ಮಿಕರಿದ್ದರು. ಈ ಪೈಕಿ ಇನ್ನು ಕೆಲವು ಕಾರ್ಮಿಕರು ಅಡಿಯಲ್ಲಿ ಸಿಲುಕಿರುವ ಶಂಕೆ ಇದೆ. ರಕ್ಷಣಾ ಕಾರ್ಯ ಮುಂದುವರಿದಿದೆ.
Chilling video shows under-construction building in Bengaluru collapse like a pack of cards
— Yamini Chincholi (@YaminiChincholi) October 22, 2024
One worker was killed in the building collapse that occurred in Babusapalya, #Bengaluru on Tuesday amid rains. 14 were rescued. Five are still missing. pic.twitter.com/T2n8s3b9jO