ಕಾಲೇಜು ದಿನಗಳಿಂದಲೂ ಹೋರಾಟದ ಹಾದಿಯಲ್ಲೇ ಮಿಂದೆದ್ದ ಇಬ್ಬರು ನಾಯಕರಲ್ಲಿ ಉಮರ್ ಖಾಲಿದ್ ದೆಹಲಿ ಗಲಭೆ ಆರೋಪದ ಮೇಲೆ ಜೈಲಿನಲ್ಲಿದ್ದಾರೆ. ಕಳೆದ ಒಂದುವರೆ ವರ್ಷಗಳಿಂದ ಜೈಲಿನಲ್ಲಿರುವ ಉಮರ್ ಖಾಲಿದ್ ನನ್ನ ಸ್ನೇಹಿತ ಎಂದು ಯಾರು ಹೇಳಿದ್ದು ಎಂದು ಮಾತಾನಾಡುವ ಮೂಲಕ ಕನ್ಹಯ್ಯ ಕುಮಾರ್ ನೆಟ್ಟಿಗರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಈ ವಿಡಿಯೋ ಡಿಸೆಂಬರ್ 11 ರಂದು ಸಿವಾನ್ನಲ್ಲಿ ನಡೆದ ಕಾರ್ಯಕ್ರಮದ ತುಣುಕು ಎಂದು ಹೇಳಲಾಗುತ್ತಿದೆ.
ಜೆಎನ್‌ಯು ವಿದ್ಯಾರ್ಥಿಗಳ ಹೋರಾಟದ ಮೂಲಕ ಚಿರಪರಿಚಿತರಾದ ಕನ್ಹಯ್ಯ ಕುಮಾರ್ ತನ್ನ ಹೋರಾಟದಲ್ಲಿ ಸಂಗಾತಿಯಾಗಿರುವ ಉಮರ್ ಖಾಲಿದ್ ಅವರೊಂದಿಗಿನ ಸ್ನೇಹದ ಬಗ್ಗೆ ಪ್ರಶ್ನೆಯನ್ನೆತ್ತಿದ್ದಾರೆ. ವಿಡಿಯೋದಲ್ಲಿ, ಉಮರ್ ಖಾಲಿದ್ ನನ್ನ ಸ್ನೇಹಿತ ಎಂದು ಯಾರು ಹೇಳಿದರು? ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಸೇರಿದ ನಂತರ ಕನ್ನಯ್ಯ ಕುಮಾರ್ ಉಮರ್ ಖಾಲಿದ್ ನೊಂದಿಗಿನ ಚಿತ್ರಗಳನ್ನು ಮರೆತು ಹೋಗಿದ್ದಾರೆ ಎಂದು ಟೀಕಿಸಿದ್ದಾರೆ.
ಉಮರ್ ಖಾಲಿದ್ ಬಂಧನದ ನಂತರ ಅವರ ಬೆಂಬಲಕ್ಕೆ ಹಲವು ಧ್ವನಿಗಳು ಎದ್ದಿದ್ದವು. ಜೊತೆಗೆ ಕನ್ಹಯ್ಯಾ ಕುಮಾರ್ ಮೌನದ ಬಗ್ಗೆ ಕೂಡ ಪ್ರಶ್ನೆಗಳು ಎದ್ದಿದ್ದವು. ಉಮರ್ ಖಾಲಿದ್ ಒಂದಲ್ಲ ಹಲವು ಸಂದರ್ಭಗಳಲ್ಲಿ ಕನ್ಹಯ್ಯಾ ಕುಮಾರ್ ಜೊತೆಗಿದ್ದಾರೆ. ಈ ಚಿತ್ರಗಳನ್ನು ನೋಡಿದರೆ ಇದನ್ನು ಸುಲಭವಾಗಿ ಊಹಿಸಬಹುದು. ಇದೀಗ ರಾಜಕೀಯದ ಕಾರಣದಿಂದ ಕನ್ಹಯ್ಯಾ ಉಮರ್ ಖಾಲಿದ್ ನಿಂದ ಸಂಪೂರ್ಣ ದೂರ ಸರಿದಿದ್ದಾರೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಕಾಲೇಜು ದಿನಗಳ ಫೋಟೋ ಪೋಸ್ಟ್ ಮಾಡಿ ಕಾಲೆಳೆದ ನೆಟ್ಟಿಗರು

ಜೆಎನ್‌ಯು ಒಟಿಗ್ಗೆ ಒಡನಾಟದಲ್ಲಿದ್ದ ಕನ್ಹಯ್ಯ ಕುಮಾರ್ ಮತ್ತು ಉಮರ್ ಖಾಲಿದ್ ಇಬ್ಬರ ಭಾವಚಿತ್ರ ವನ್ನು ಪೋಸ್ಟ್ ಮಾಡಿರುವ ನೆಟ್ಟಿಗರು 2016 ರಲ್ಲಿ ಕನ್ಹಯ್ಯಾ ಕುಮಾರ್ ಅವರನ್ನು ಬಂಧಿಸಿದಾಗ ಉಮರ್ ಖಾಲಿದ್ ಅವರ ಪರವಾಗಿ ಪ್ರತಿಭಟನೆ ನಡೆಸಿದ್ದರು. ಕನ್ಹಯ್ಯ ಚುನಾವಣೆಗೆ ಸ್ಪರ್ಧಿಸಿದಾಗ ಉಮರ್ ಖಾಲಿದ್ ಅವರಿಗೆ ಮತ ಯಾಚಿಸಿದರು. ಆದರೆ ಉಮರ್ ಖಾಲಿದ್ ಜೈಲಿಗೆ ಹೋದಾಗ ಕನ್ಹಯ್ಯಾ ಪ್ರತಿಭಟನೆ ಇರಲಿ ಒಂದೇ ಒಂದು ಟ್ವೀಟ್ ಕೂಡ ಮಾಡಿಲ್ಲ ಎಂದು @ShaanIrfan05 ಎಂಬುವವರು ಬರೆದುಕೊಂಡಿದ್ದಾರೆ.
ಕನ್ಹಯ್ಯಾ ಉಮರ್ ಮತ್ತು ಖಾಲಿದ್ ಅವರ ಉತ್ತಮ ಸ್ನೇಹಿತ ಎಂದು ನಾನು ಭಾವಿಸುತ್ತಿದ್ದೆ ಆದರೆ ಈ ಹೇಳಿಕೆ ಯಿಂದಾಗಿ ಅವನನ್ನು ದ್ವೇಷಿಸುತ್ತೇನೆ. ಕನ್ನಯ್ಯ ಇತರರಂತೆ ಸ್ವಾರ್ಥಿ ನಾಯಕ. ಕನ್ಹಯ್ಯಾ ನಿನಗೆ ನಾಚಿಕೆಯಾಗಬೇಕು, ಇನ್ನೂ ಮುಂದೆ ಬಿಹಾರ ನಿಮ್ಮ ಬಗ್ಗೆ ಹೆಮ್ಮೆ ಪಡುವುದಿಲ್ಲ ಎಂದು @zarrin_zubin ಎಂಬುವವರು ಕಿಡಿಕಾರಿದ್ದಾರೆ.
ಇದೇ ವೇಳೆ ಉಮರ್ ಖಾಲಿದ್ ಅವರ ಬೆಂಬಲಕ್ಕೆ ಹಲವರು ಬಂದಿದ್ದು, AISA ಉಪಾಧ್ಯಕ್ಷ @kawalpreetdu ಅವರು, ಉಮರ್ ಖಾಲಿದ್ ಅವರನ್ನು ತಮ್ಮ ಸ್ನೇಹಿತ ಎಂದು ಕರೆಯಲು ಹೆಮ್ಮೆಪಡಬೇಕು. ಏಕೆಂದರೆ ಅವರು ಮಾಡಿದಂತಹ ನ್ಯಾಯ ಮತ್ತು ಗೌರವಯುತ ಹೋರಾಟ ಅಂಥದ್ದು. ಸದ್ಯ ಸುಳ್ಳು ಆರೋಪ ಹೊರಿಸಿ ಜೈಲಿನಲ್ಲಿರಿಸಿದ್ದಾರೆ. ಉಮರ್ ಖಾಲಿದ್ ನಮ್ಮ ನಾಯಕ ಮತ್ತು ನಾವು ಅವರ ಬಗ್ಗೆ ಹೆಮ್ಮೆಪಡುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.


