ಆಸ್ಕರ್ ಪ್ರಶಸ್ತಿ ವಿಜೇತ ಆರ್ಆರ್ಆರ್ ಸಿನಿಮಾದ ನಾಟು ನಾಟು ಗೀತೆ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ವಿಡಿಯೋ ವೈರಲ್ ಆಗಿದ್ದು ನಾಟು ನಾಟು ಕ್ರೇಜ್ ಎಂತದ್ದು ಎಂಬುದಕ್ಕೆ ಹಿಡಿದ ಕನ್ನಡಿಯಂತಿದೆ. ಉಕ್ರೇನ್ ಸೈನಿಕರು ನಾಟು ನಾಟು ಗೀತೆಗೆ ನರ್ತಿಸುವ ಮೂಲಕ ರಷ್ಯಾದ ಸೇನೆಗೆ ಖಡಕ್ ಉತ್ತರ ನೀಡಿದ್ದಾರೆ.

ಟ್ವಿಟರ್ನಲ್ಲಿ ಜೇನ್ ಫೆಡೋಟೋವಾ ಈ ವಿಡಿಯೋವನ್ನು ಶೇರ್ ಮಾಡದ್ದಾರೆ. ಎರಡು ನಿಮಿಷಗಳ ಅವಧಿಯ ಈ ನಾಟು ನಾಟು ಗೀತೆಗೆ ಹೆಜ್ಜೆ ಹಾಕಿದ ಉಕ್ರೇನ್ ಸೈನಿಕರು ಹಾಡಿಗೆ ಟ್ವಿಸ್ಟ್ ನೀಡಿದ್ದಾರೆ. ಮೂಲ ಸಿನಿಮಾದಲ್ಲಿ ಇಬ್ಬರು ಭಾರತೀಯರು ಬ್ರಿಟೀಷರಿಗೆ ಠಕ್ಕರ್ ನೀಡಿದ ಕತೆಯನ್ನು ಹೊಂದಿದೆ. ಅದೇ ರೀತಿ ಈ ಗೀತೆಯನ್ನು ಬಳಕೆ ಮಾಡಿಕೊಳ್ಳುವುದರ ಮೂಲಕ ಉಕ್ರೇನ್ ಸೈನಿಕರು ರಷ್ಯಾದ ಆಕ್ರಮಣವನ್ನು ಹೇಗೆ ತಡೆದಿದ್ದಾರೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ .
Сила твітеру: вже вийшла стаття у @timesofindia про 🇺🇦 версію ‘Naatu Naatu’
— Jane_fedotova🇺🇦 (@jane_fedotova) May 30, 2023
‘The clever adaptation of the lyrics to reflect the military context’ – такими словами вкотре звернеться увага на те, що війна не закінчилася.
Стаття тут: https://t.co/1tGoCLd8lN https://t.co/NEKOz6eG7L
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಈಗಾಗಲೇ ಆರು ಲಕ್ಷಕ್ಕೂ ಅಧಿಕ ವೀವ್ಸ್ ಸಂಪಾದಿಸಿದೆ.