ಪ್ರಪಂಚದಲ್ಲಿ ಪ್ರತಿದಿನ ಒಂದಿಲ್ಲೊಂದು ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಅದಕ್ಕೆ ಪೂರಕವೆಂಬಂತೆ ಇಂಗ್ಲೆಂಡಿನಲ್ಲಿ ವ್ಯಕ್ತಿಯೊಬ್ಬ ತನ್ನ ಮೂತ್ರವನ್ನ ತಾನೇ ಕುಡಿಯುತ್ತಿದ್ದಾನೆ. ವಿಚಿತ್ರ ಅನ್ನಿಸಿದರು ಅದು ನಿಜ.
ಹ್ಯಾರಿ ಮೆಟಾಡೀಸ್ ಎಂಬ ವ್ಯಕ್ತಿಯು 2016ರಲ್ಲಿ ತನ್ನ ಮೂತ್ರವನ್ನ ತಾನೇ ಕುಡಿಯಲು ಶುರು ಮಾಡಿದ. ಈ ವಿಚಿತ್ರ ಅಭ್ಯಾಸದಿಂದಾಗಿ ತನ್ನ ಖಿನ್ನತೆ ದೂರವಾಗಿದೆ ಮತ್ತು ತಾನು 10 ವರ್ಷ ಚಿಕ್ಕವನಂತೆ ಕಾಣುತ್ತಿದ್ದೇನೆ ಎಂದು ಆ ವ್ಯಕ್ತಿ ಹೇಳಿಕೊಂಡಿದ್ದಾನೆ.
ಮೊದಮೊದಲು ಮೂತ್ರವನ್ನ ಸೇವಿಸಿದಾಗ ಅದು ನನ್ನ ಪರಿಕಲ್ಪನೆಗು ಸಹ ಬರಲಿಲ್ಲ. ನಾನು ನನ್ನ ಮೂತ್ರ ಕುಡಿದ ಮರುಕ್ಷಣವೇ ಅದು ನನ್ನ ಮೆದುಳನ್ನು ಕ್ರಿಯೆಗೊಳಪಡುವಂತೆ ಮಾಡಿತ್ತು ಮತ್ತು ನನ್ನನ್ನು ಖಿನ್ನತೆಯಿಂಧ ದೂರ ಮಾಡಿತ್ತು. ನನ್ನಲ್ಲಿ ಹೊಸ ಚೈತನ್ಯ ಮೂಡಲು ಶುರುವಾಯಿತ್ತು. ನಾನು ಪ್ರತಿ ಭಾರೀ ಮೂತ್ರ ಸೇವಿಸಿದಾಗಲು ಸಂತೋಷದಿಂದ ಸೇವಿಸುತ್ತೇನೆ ಎಂದು ಹೇಳಿದ್ದಾರೆ.

ಪ್ರತಿನಿತ್ಯ 200 ಮಿ.ಲೀ ಮೂತ್ರವನ್ನು ಸೇವಿಸುವಾಗ ತನ್ನ ತಾಜಾ ಮೂತ್ರದೊಂದಿಗೆ ಶೇಖರಿಸಿದ ಹಳೆಯ ಮೂತ್ರದೊಂದಿಗೆ ಕುಡಿಯುತ್ತಾರೆ ಮತ್ತು ಅದು ಸೂಪರ್ ಕ್ಲೀನ್ ಎಂದು ಸಹ ಹೇಳುತ್ತಾರೆ.
ಹ್ಯಾರಿ ತನ್ನ ಮೂತ್ರವನ್ನ ಸೇವಿಸುವುದರ ಹೊರತಾಗಿ ಅದನ್ನು ತಮ್ಮ ಮುಖದ ಮೇಲೆ ಮಸಾಜ್ ಮಾಡಿಕೊಳ್ಳುತ್ತಾರೆ. ತಮ್ಮ ಮುಖದ ಮೇಲೆ ತಮ್ಮ ಮೂತ್ರವನ್ನ ಫೇಸ್ ಕ್ರೀಮ್ ರೀತಿ ಬಳಸಲು ಶುರು ಮಾಡಿದ್ದಾಗಿನಿಂದಲು ತಮ್ಮ ಮುಖದ ಕಾಂತಿ ಜಾಸ್ತಿಯಾಗಿದ್ದು ತಾವು 10 ವರ್ಷ ಹಿಂದೆ ಇದ್ದ ಯೌವನ ವಾಪಸ್ ಬಂಧಿದೆ. ತ್ವಚೆ ಇನ್ನಷ್ಟು ಮೃದುವಾಗಿಸಿದೆ ಎಂದು ಹೇಳುತ್ತಾರೆ.
ಈ ರೀತಿಯ ಪ್ರಯೋಗಗಳು ಯಾವತ್ತು ಸಕಾರಾತ್ಮಕ ಪರಿಣಾಮ ಬೀರುವುದಿಲ್ಲ ಯಾಕೆಂದರೆ ನನ್ನ ಕುಟುಂಬ ಸದಸ್ಯರು ಮೊದಮೊದಲು ಈ ವಿಚಾರ ತಿಳಿದಾಗ ಇದಕ್ಕೆ ಸಮ್ಮತಿಸಲಿಲ್ಲ ಮತ್ತು ನನ್ನ ಸಹೋದರಿ ನನ್ನ ಜೊತೆ ಮಾತನಾಡುವುದನ್ನೇ ಬಿಟ್ಟಿದ್ದಾರೆ ಎಂದು ಹ್ಯಾರಿ ಹೇಳಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಯುಕೆ ವೈದ್ಯ ಜೆಫ್ ಪೋಸ್ಟರ್ ನಿಮ್ಮ ಸ್ವಂತ ಮೂತ್ರ ಕುಡಿಯುವುದರಿಂದ ಅಥವಾ ಅದನ್ನು ದೇಹಕ್ಕೆ ಹಚ್ಚಿಕೊಳ್ಳುವುದರಿಂದ ಏನು ಪ್ರಯೋಜನವಿಲ್ಲ. ವಾಸ್ತವವಾಗಿ ಹೇಳಬೆಕೆಂದರೆ ನಿಮ್ಮ ಮೂತ್ರವನ್ನು ನೀವು ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಹೊಸ ಹೊಸ ವೈರಾಣುಗಳು ಹುಟ್ಟಿಕೊಳ್ಳುತ್ತವೆ ಎಂದು ಹೇಳಿದ್ದಾರೆ.
