ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಅವರ ತೆರಿಗೆ ವ್ಯವಹಾರಗಳನ್ನು ಪತ್ರಿಕೆಯೊಂದಕ್ಕೆ ಹೇಗೆ ಸೋರಿಕೆ ಮಾಡಲಾಗಿದೆ ಎಂಬುದರ ಕುರಿತು ಆಂತರಿಕ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಯುಕೆ ಮಾಧ್ಯಮ ವರದಿಗಳು ಭಾನುವಾರ ವರದಿ ಮಾಡಿವೆ.
ಯುಕೆ ಸರ್ಕಾರಿ ಕ್ವಾರ್ಟರ್ಸ್ನೊಳಗಿನ ವೈಟ್ಹಾಲ್ ತನಿಖೆಯು ಚಾನ್ಸೆಲರ್ ರಿಷಿ ಸುನಕ್ ಅವರ ಪತ್ನಿಯ ವಾಸಸ್ಥಳವಲ್ಲದ ಸ್ಥಿತಿಯ ಮಾಹಿತಿಯನ್ನು ದಿ ಇಂಡಿಪೆಂಡೆಂಟ್ ಪತ್ರಿಕೆಗೆ ಹೇಗೆ ರವಾನಿಸಲಾಗಿದೆ ಎಂಬುದನ್ನು ಪರಿಶೀಲಿಸುತ್ತದೆ. ದಿ ಇಂಡಿಪೆಂಡೆಂಟ್ ಪತ್ರಿಕೆ ಈ ವಾರದ ಆರಂಭದಲ್ಲಿ ಸುದ್ದಿಯನ್ನು ಬ್ರೆಕ್ ಮಾಡಿ ಪ್ರಕಟಿಸಿತು.
ಸಂಡೇ ಟೈಮ್ಸ್ ಪ್ರಕಾರ, ವಿರೋಧ ಪಕ್ಷದ ಲೇಬರ್ ಪಾರ್ಟಿಯನ್ನು ಬೆಂಬಲಿಸುವ ಸರ್ಕಾರಿ ಅಧಿಕಾರಿಯೊಬ್ಬರು ಈ ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಾರೆ ಎಂದು ಸುನಕ್ ಅವರ ತಂಡ ಅಂದಾಜಿಸಿದೆ”.
ಯಾರ ಬಳಿ ಆ ಮಾಹಿತಿ ಇದೆ ಮತ್ತು ಯಾರಾದರೂ ಆ ಮಾಹಿತಿಯನ್ನು ಕೋರಿದ್ದಲ್ಲಿ ಸಂಪೂರ್ಣ ಕ್ಯಾಬಿನೆಟ್ ಕಚೇರಿ ಮತ್ತು ಎಚ್ಎಂ ಖಜಾನೆ ತನಿಖೆ ನಡೆಯಲಿದೆ. ಖಾಸಗಿ ವ್ಯಕ್ತಿಯ ತೆರಿಗೆ ಸ್ಥಿತಿಯನ್ನು ಬಹಿರಂಗಪಡಿಸುವುದು ಕ್ರಿಮಿನಲ್ ಅಪರಾಧ,” ಎಂದು ಹೆಸರಿಸದ ಹಿರಿಯ ಸರ್ಕಾರಿ ಅಧಿಕಾರಿಯನ್ನು ಪತ್ರಿಕೆ ಉಲ್ಲೇಖಿಸಿ ವರದಿ ಮಾಡಿದೆ ಎಂದು ಟೂಮ್ಸ್ ಆಪ್ ಇಂಡಿಯ ವರದಿ ಮಾಡಿದೆ.
ಭಾರತೀಯ ಪೌರತ್ವ ಹೊಂದಿರುವ ಅಕ್ಷತಾ ಮೂರ್ತಿ, ಬ್ರಿಟನ್ನಲ್ಲಿ ನಾನ್ ಡೊಮಿಸೈಲ್ ಸ್ಟೇಟಸ್ (ಸರಳವಾಗಿ ಪೌರತ್ವ ಹೊರತಾದ ವಾಸ) ಪಡೆದುಕೊಳ್ಳುವ ಮೂಲಕ ತನ್ನ ಸಾಗರೋತ್ತರ ಗಳಿಕೆಯ ಮೇಲೆ ಬ್ರಿಟನ್ನಲ್ಲಿ ದುಬಾರಿ ತೆರಿಗೆ ಕಟ್ಟುವುದನ್ನು ತಪ್ಪಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆಕೆ ನಾನ್ ಡೊಮಿಸೈಲ್ ಸ್ಟೇಟಸ್ ಹೊಂದಿದ್ದಾರೆ ಎಂಬುದು ಪತ್ರಿಕೆಯ ವರದಿಯ ಮೂಲಕವೇ ಜನರಿಗೆ ಗೊತ್ತಾಗಿತ್ತು.