ಉಡುಪಿಯ ಪ್ಯಾರಾ ಮೆಡಿಕಲ್(udupi para medical college) ಕಾಲೇಜಿನ ಶೌಚಾಲಯ ವಿಡಿಯೋ ಪ್ರಕರಣ ಇದೀಗ ನಿರ್ಣಾಯಕ ಘಟ್ಟ ತಲುಪಿದೆ. ನೇತ್ರ ಜ್ಯೋತಿ ಕಾಲೇಜಿನ (Netra jyothi college) ಶೌಚಾಲಯದಲ್ಲಿ ಮೊಬೈಲ್ ಇಟ್ಟು ವಿದ್ಯಾರ್ಥಿಯೋರ್ವಳ ಖಾಸಗಿ ದೃಶ್ಯ (private video) ಚಿತ್ರೀಕರಣ ಪ್ರಕರಣ ಕೇವಲ ರಾಜ್ಯವಷ್ಟೇ ಅಲ್ಲ , ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಹಿಂದೂ ವಿದ್ಯಾರ್ಥಿನಿಯೊಬ್ಬಳು (Hindu student) ಶೌಚಾಲಯಕ್ಕೆ ಹೋದಾಗ ವಿಡಿಯೋ ಮಾಡಿದ ಮುಸ್ಲಿಂ ವಿದ್ಯಾರ್ಥಿನಿಯರ (Muslim students) ಬಗ್ಗೆ ಉಡುಪಿಯಲ್ಲಿ ವ್ಯಾಪಕ ಪ್ರತಿಭಟನೆ ನಡೆದಿತ್ತು. 2023 ಜುಲೈ ತಿಂಗಳಲ್ಲಿ ನಡೆದ ಈ ಘಟನೆ ರಾಜ್ಯಾದ್ಯಂತ ತಲ್ಲಣ ಮೂಡಿಸಿತ್ತು. ವಿವಾದ ಮಿತಿಮೀರುವುದನ್ನು ಗಮನಿಸಿದ ಗೃಹ ಇಲಾಖೆ(Home ministry) , ಪ್ರಕರಣದ ತನಿಖೆಯನ್ನು ಸಿಐಡಿಗೆ (CID)ಒಪ್ಪಿಸಿತ್ತು. ಆರೋಪಿತ ವಿದ್ಯಾರ್ಥಿನಿಯರ ಮೊಬೈಲನ್ನು (Mobile)ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ (FSL) ವಿವಿಧ ಹಂತಗಳಲ್ಲಿ ಪರಿಶೀಲನೆ ನಡೆಸಿದ ಬಳಿಕ, ಇದೀಗ ಸಿಐಡಿ ಪೊಲೀಸರು ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ (Charge sheet) ಸಲ್ಲಿಸಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ ಆರೋಪಿತ ವಿದ್ಯಾರ್ಥಿನಿಯರ ತಪ್ರೊಪ್ಪಿಗೆ ಹೇಳಿಕೆಯ ಆಧಾರದಲ್ಲಿ ಈ ಚಾರ್ಜ್ ಶೀಟ್ (charge sheet) ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ. ತಮಾಷೆಗೆ ವಿಡಿಯೋ ಮಾಡಿ ಆನಂತರ ಡಿಲೀಟ್ ಮಾಡಿದ್ದೇವು ಎಂದು ಈ ವಿದ್ಯಾರ್ಥಿನಿಯರು ವಿಚಾರಣೆ ವೇಳೆ ಹೇಳಿದ್ದರು. ಹೀಗಾಗಿ, ಕಾಲೇಜು ಆಡಳಿತ ಮಂಡಳಿಯ (college administration) ಹಂತದಲ್ಲಿಯೇ ಪ್ರಕರಣ ಇತ್ಯರ್ಥ ಮಾಡಿಕೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು (police department) ಈ ಮುಂಚೆ ತಿಳಿಸಿದ್ದರು.
ಈ ಪ್ರಕರಣದ ತನಿಖೆಯಲ್ಲಿ ಬಹು ನಿರೀಕ್ಷಿತ ರಿಟ್ರೈವ್ (retriev) ಪ್ರಕ್ರಿಯೆ ಆಗಿಲ್ಲ. ವಿಡಿಯೋ ರಿಟ್ರೈವ್ ಆಗದೆ ಪ್ರಕರಣಕ್ಕೆ ತಾಂತ್ರಿಕ ಬಲ ಸಿಗುವುದಿಲ್ಲ. ಹಾಗಾಗಿ ಕೇವಲ ಕಾನೂನು ಪ್ರಕ್ರಿಯೆಗೆ ಸೀಮಿತವಾಗಿ ಈ ಪ್ರಕರಣ ಉಳಿದುಬಿಡುವ ಎಲ್ಲಾ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಇದೀಗ ಕೇವಲ ಮುಸ್ಲಿಂ ವಿದ್ಯಾರ್ಥಿನಿಗಳ ಹೇಳಿಕೆಗಳ ಆಧಾರದ ಮೇಲೆ ಸಾಮಾನ್ಯ ಚಾರ್ಜ್ ಶೀಟ್ ಸಲ್ಲಿಕೆ ಮಾಡಿ ಕೇಸ್ ಕ್ಲೋಸ್ (case close) ಮಾಡೋ ಯೋಚನೆ ಪೊಲೀಸರದ್ದು.