ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪುತ್ರ ಡಿಎಂಕೆ ಯುವ ಘಟಕದ ಅಧ್ಯಕ್ಷ ಶಾಸಕ ಉದಯನಿಧಿ ಸ್ಟಾಲಿನ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ತಮಿಳುನಾಡಿನ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದಯನಿಧಿ ಪ್ರಮಾಣವಚನ ಸ್ವೀಕರಿಸಿದ್ದರು ರಾಜ್ಯಾಪಲ ಆರ್ೆನ್.ರವಿ ಪ್ರತಿಜ್ಞಾವಿಧಿ ಭೋದಿಸಿದ್ದರು.
ಚೆನೈನ ಚೆಪಾಕ್ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿ ಶಾಸಕರಾಗಿ ಆಯ್ಕಯಾಗಿರುವ ಉದಯನಿಧಿಗೆ ಯುವಕನ, ಕ್ರೀಡಾ ಇಲಾಖೆಯನ್ನ ವಹಿಸಲಾಗಿದೆ.

ಇನ್ನು ಸ್ಟಾಲಿನ್ ಪುತ್ರ ಸಚಿವನಾಗಿ ಪ್ರಮಾಣ ವಚನ ಸೀಕರಿಸುತ್ತಿದ್ದಂತೆ ಆಡಳಿತ-ವಿಪಕ್ಷಗಳ ನಡುವೆ ಮಾತಿನ ಚಕಮಕಿ ಜೋರಾಗಿದ್ದು ಇದು ಸನ್‌ರೈಸ್ ಎಂದು ವಿಪಕ್ಷಗಳು ಟೀಕಿಸಿವೆ.
ಇನ್ನು ಕೆಲವು ಅತೃಪ್ತ ಶಾಸಕರು ತಮ್ಮನ್ನು ಪರಿಗಣಬೆಗೆ ತೆಗೆದುಕೊಳ್ಳದಿರುವುದಕ್ಕೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ ಮತ್ತು ಮಗನನ್ನು ಸಚಿವನನ್ನಾಗಿ ಮಾಡುವ ಮೂಲಕ ಸ್ಟಾಲಿನ್ ತಮ್ಮ ರಾಜಕೀಯ ಉತ್ತರಾಧಿಕಾರಿಯನ್ನು ಅನಧಿಕೃತವಾಗಿ ಘೋಷಿಸಿದ್ದಾರೆ ಎಂದು ತಮಿಳುನಾಡು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.