ಬೆಳಗಾವಿಯಲ್ಲಿ ರಾಯಣ್ಣನ ಮೂರ್ತಿ ಭಗ್ನ ಹಾಗೂ ನಂತರದ ರಾಜಕೀಯ ಪ್ರೇರಿತ ಹೇಳಿಕೆಗಳ ಕುರಿತು ಶಿವಮೊಗ್ಗದಲ್ಲಿಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಮಾತನಾಡಿ, ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ಏನು ದೇವರಲ್, ಕಾಂಗ್ರೆಸ್ನವರು ಈಗ ಉತ್ತರ ಕೊಡಬೇಕು. ಶಿವಸೇನೆ ಹಾಗೂ ಕಾಂಗ್ರೆಸ್ನ ಜಂಟಿ ಸರ್ಕಾರ ಮಹಾರಾಷ್ಟ್ರದಲ್ಲಿದೆ. ಇಂಥಹ ಗೂಂಡಾಗಿರಿಯನ್ನ ಕರ್ನಾಟಕ ಸರ್ಕಾರ ಯಾವುದೇ ಕಾರಣಕ್ಕೂ ತಡೆದುಕೊಳ್ಳುವುದಿಲ್ಲ. ನಾವು ಇನ್ನೊಬ್ಬರ ಸುದ್ದಿಗೆ ಹೋಗೋದಿಲ್ಲ, ನಮ್ಮ ಸುದ್ದಿಗೆ ಬಂದರೆ ಬಿಡೋದಿಲ್ಲ. ಕರ್ನಾಟಕದ ನೆಲ, ಜಲ ಭಾಷೆ ವಿಚಾರಕ್ಕೆ ಎಲ್ಲಾ ಕ್ಷಣಗಳಲೂ ನಾವು ಒಂದಾಗೇ ಇದ್ದೀವಿ. ಆದರೆ ಗೂಂಡಾಗಿರಿ ಮಾಡಿದವರು, ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜ ಸುಟ್ಟಿರೋದು ಕೂಡ ಅವರೇ, ಸಂಗೊಳ್ಳಿ ರಾಯಣ್ಣನ ಮೂರ್ತಿ ಭಗ್ನ ಮಾಡಿದವರೂ ಸಹ ಅವರೇ, ಇಂಥವರ ಮೇಲೆ ನಾವು ಕ್ರಮ ಕೈಗೊಳ್ತೀವಿ ಬಿಡೋದಿಲ್ಲ. ಮಹಾರಾಷ್ಟ್ರದಲ್ಲಿ ಧ್ವಜ ಸುಟ್ಟ ಪ್ರಕರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಬಳಿ ಮಾತಾಡಿ, ಆ ಕಿಡಿಗೇಡಿಗಳ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡುತ್ತೇವೆ ಎಂದಿದ್ದಾರೆ.
ಡಿಕೆ ಸುರೇಶ್ ಸುದ್ದಿಗೋಷ್ಠಿ..!
https://youtube.com/live/MdiW6v1diHM
Read moreDetails