ಕಾಲುವೆಯಲ್ಲಿ ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಬೀದರ್ನಲ್ಲಿ ನಡೆದಿದೆ.
ಬೀದರ್: ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ಕಾರಂಜಾ ಕಾಲುವೆಯಲ್ಲಿ ಈಜಲು ಹೋದ 10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ನೀರು ಪಾಲಾಗಿದ್ದಾರೆ.
ಸಾಯಿಕುಮಾರ (18) ಹಾಗೂ ಬಸವರಾಜ (18) ನೀರು ಪಾಲಾದ ವಿದ್ಯಾರ್ಥಿಗಳು. ವಿದ್ಯಾರ್ಥಿಗಳಾದ ಸಾಯಿಕುಮಾರ ಕಣಜಿ ಹಾಗೂ ಬಸವರಾಜ ಕಟ್ಟಿತೂಗಾಂವ್ ಅವರ ಮೃತ ದೇಹವನ್ನು ಕಾಲುವೆಯಿಂದ ಶೋಧ ಕಾರ್ಯಯಿಂದ ತೆಗೆಯಲಾಯಿತು. ಸ್ಥಳಕ್ಕೆ ಧನ್ನೂರಾ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬಂದಿದ್ದು,
ಈ ಪ್ರಕರಣ ಧನ್ನೂರಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.