ಬೆಂಗಳೂರಿನ ಕಮಲಾನಗರದಲ್ಲಿ ಮನೆ ತೆರವು ಕಾರ್ಯಾಚರಣೆ ಮಾಡಲಾಗ್ತಿದೆ. ವಿದ್ಯುತ್ ಸಂಪರ್ಕ ಕಡಿತಗೊಳಿಸಿ ತೆರವು ಕಾರ್ಯ ಮಾಡಲಾಗ್ತಿದೆ. ಆದರೆ ಕಟ್ಟಡ ತೆರವಿಗೆ ಮಾಲೀಕರು ಬೇಸರ ವ್ಯಕ್ತಪಡಿಸಿದ್ದು, ನಾವೇನು ಬದುಕಬೇಕಾ..? ಸಾಯಬೇಕಾ? ಎಂದು ಪ್ರಶ್ನಿಸಿದ್ದಾರೆ. ಇರೋ ಬಿಲ್ಡಿಂಗ್ ಡೆಮಾಲಿಷ್ ಮಾಡಿದ್ರೆ ಏನು ಮಾಡಬೇಕು? ವಿಷ ಕುಡಿದು ಸಾಯಬೇಕಾಗುತ್ತೆ. 10 ಲಕ್ಷ ಇನ್ನೂ ಸಾಲವಿದೆ. 4 ಲಕ್ಷಕ್ಕೆ ಮನೆ ಲೀಸ್‌ಗೆ ಹಾಕಿದ್ದೆ. ಈಗ ತೆರವು ಮಾಡಲಾಗ್ತಿದೆ ಎಂದಿದ್ದಾರೆ.
ಬಾಬುಸಾಬ್ ಪಾಳ್ಯದಲ್ಲೂ ಬೀಳುವ ಹಂತದಲ್ಲಿದ್ದ ಮತ್ತೊಂದು ಅನಧಿಕೃತ ಕಟ್ಟಡ ತೆರವು ಮಾಡಲಾಗ್ತಿದೆ. ಮಹದೇವಪುರ ವಲಯದ ಹೊರಮಾವಿನ ನಂಜಪ್ಪ ಗಾರ್ಡನ್‌ನಲ್ಲಿದ್ದ ಅನಧಿಕೃತ ಕಟ್ಟಡ ತೆರವು ಮಾಡಲಾಗ್ತಿದೆ. ಪಾಲಿಕೆ ನೋಟಿಸ್ ಬೆನ್ನಲ್ಲೇ ಸ್ವಯಂ ಪ್ರೇರಿತವಾಗಿ ಕಟ್ಟಡ ತೆರವಿಗೆ ಮುಂದಾಗಿದ್ದಾರೆ ಮಾಲೀಕರು. ಅಂದಾಜು 8 ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಡ ತೆರವು ಕಾರ್ಯ ಮಾಡಲಾಗ್ತಿದೆ.
ಮಹಾಲಕ್ಣ್ಮಿ ಲೇಔಟ್ ಶಾಸಕ ಗೋಪಾಲಯ್ಯ ಮಾಧ್ಯಮಗಳ ಜೊತೆಗೆ ಮಾತನಾಡಿ, ನಮ್ಮ ಕ್ಷೇತ್ರದಲ್ಲಿಯೇ ಸಾವಿರಕ್ಕೂ ಹೆಚ್ಚು ಅಕ್ರಮ ಕಟ್ಟಡಗಳಿವೆ. ಇದರಲ್ಲಿ 500ಕ್ಕೂ ಮನೆಗಳಿಗೆ ಸರ್ಕಾರ ಹಕ್ಕು ಪತ್ರ ನೀಡಿದೆ. ಇವರಿಗೆ ಸರ್ಕಾರ ಪರಿಹಾರ ಕೊಡಬೇಕಲ್ಲ. ರಾಜಕಾಲುವೆ, ನೀರುಗಾಲುವೆ ಮೇಲೆ, ಅಕ್ಕಪಕ್ಕದ ಇರುವ ಮನೆಗಳ ಸ್ಥಳಾಂತರ ಮಾಡಲು ಅಸಾಧ್ಯ. ಎಸಿ ರೂಮಲ್ಲಿ ಕೂತು ಹೇಳೋದು ಸುಲಭ. ವಾಸ್ತವವಾಗಿ ಇಲ್ಲಿಗೆ ಬಂದರೆ ಗೊತ್ತಾಗುತ್ತೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ಗೆ ಟಾಂಗ್ ಕೊಟ್ಟಿದ್ದಾರೆ.