ಬಿಗ್ ಬಾಸ್ ಕನ್ನಡ ಸೀಸನ್ 12(Bigg Boss Kannada season 12)ಈಗಾಗಲೇ ಎಂಬತ್ತು ದಿನಗಳನ್ನು ಪೂರೈಸಿದ್ದು, ಶತಕದ ದಿನದತ್ತ ಸಾಗುತ್ತಿದೆ. ಸದ್ಯ ಆಟ ಇಂಟ್ರಸ್ಟಿಂಗ್ ಆಗಿದ್ದು, ಈ ವಾರ ಬಿಗ್ ಬಾಸ್ ಮನೆಯಿಂದ ಇಬ್ಬರು ಹೊರಗೆ ಹೋಗುತ್ತಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ಅತ್ತ ಕಳೆದ ವಾರ ರಕ್ಷಿತಾ ಹಾಗೂ ಧ್ರುವಂತ್ ಅವರನ್ನು ಫೇಕ್ ಎಲಿಮಿನೇಷನ್ ಮಾಡಲಾಗಿದ್ದು, ಸೀಕ್ರೆಟ್ ರೂಂನಲ್ಲಿ ಇರಿಸಲಾಗಿದೆ. ಇತ್ತ ಈ ವಾರ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ಅಶ್ವಿನಿ ಗೌಡ, ಮಾಳು, ಸ್ಪಂದನಾ, ಚೈತ್ರಾ, ಧನುಷ್ ಹಾಗೂ ರಜತ್ ನಾಮಿನೇಟ್ ಆಗಿದ್ದಾರೆ. ಆದರೆ ಕಥೆಯಲ್ಲಿ ಟ್ವಿಸ್ಟ್ ಎನ್ನುವಂತೆ ಈ ವಾರ ವೋಟಿಂಗ್ ಲೈನ್ ಓಪನ್ ಆಗಿಲ್ಲ. ವಾರ ಪೂರ್ತಿ ನಾಮಿನೇಷನ್ ಟಾಸ್ಕ್ ನಡೆದ ಕಾರಣ ಈ ವಾರ ವೋಟಿಂಗ್ ಲೈನ್ ಓಪನ್ ಆಗಿಲ್ಲ. ಆದರೆ ಈ ವಾರ ಇಬ್ಬರು ಮನೆಯಿಂದ ಹೊರಗೆ ಹೋಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ರಕ್ಷಿತಾ ಹಾಗೂ ಧ್ರುವಂತ್ ಸೀಕ್ರೆಟ್ ರೂಂನಿಂದ ಹೊರಗೆ ಬಂದರೆ ಸ್ಪರ್ಧಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ 58ನೇ ದಿನಕ್ಕೆ ಅತಿಥಿಗಳಾಗಿ ಬಂದು ನಂತರ ವೈಲ್ಡ್ ಕಾರ್ಡ್ ಸ್ಪರ್ಧಿಗಳಾದ ರಜತ್ ಹಾಗೂ ಚೈತ್ರಾ ಕುಂದಾಪುರ ಈ ವಾರ ಮನೆಯಿಂದ ಹೊರಗೆ ಹೋಗುವ ಸಾಧ್ಯತೆ ಇದೆ. ಈ ಸೀಸನ್ ಸ್ಪರ್ಧಿಗಳ ಆಟದ ಪರಿ ಬದಲಿಸಲು ರಜತ್ ಹಾಗೂ ಚೈತ್ರಾ ಕುಂದಾಪುರ ಅವರನ್ನು ಕೆಲ ದಿನಗಳ ಮಟ್ಟಿಗೆ ಮನೆಯೊಳಗೆ ಕಳುಹಿಸಲಾಗಿದ್ದು, ಈ ವಾರ ರಕ್ಷಿತಾ ಹಾಗೂ ಧ್ರುವಂತ್ ಬರುತ್ತಿದ್ದಂತೆ ಇವರಿಬ್ಬರು ಹೊರ ಹೋಗಲಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.













