ರಾಜ್ಯದ ಮಲ್ಪೆಯ (Malpe) ಸಮೀಪ ಮೀನುಗಾರಿಕೆ ನಡೆಸುತ್ತಿದ್ದ ಬೋಟ್ ಗಳು ಗೋವಾ (Goa) ಸಮುದ್ರ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಿದ ಆರೋಪದ ಮೇಲೆ ಮೀನುಗಾರಿಕೆ ನಡೆಸುತ್ತಿದ್ದ 2 ಬೋಟ್ ಗಳನ್ನು (Fishing boats) ಗೋವಾ ಸರ್ಕಾರ ವಶಪಡಿಸಿಕೊಂಡಿದೆ.
ಇದೇ ಅಕ್ಟೋಬರ್ 5 ರಂದು (October) ಈ ರೀತಿ ಬೋಟ್ ಗಳನ್ನು ಸೀಜ್ ಮಾಡಿದ್ದು, ರಾಜ್ಯದ ಸಮುದ್ರದ ಗಡಿ ದಾಟಿ ಅಕ್ರಮವಾಗಿ ಪ್ರವೇಶಿಸಿದ ಕಾರಣ, ಬೋಟ್ ಗಳನ್ನು ವಶಪಡಿಸಿಕೊಂಡಿದ್ದು, ಈ ಬೋಟ್ ಗಳಲ್ಲಿದ್ದ ಮೀನುಗಳನ್ನು ಹರಾಜು ಹಾಕಲಾಗಿದೆ. ಜೊತೆಗೆ ಬೋಟ್ ಮಾಲೀಕರ ವಿರುದ್ಧ ಕಠಿಣ ಕ್ರಮಕ್ಕೆ ಗೋವಾ ರಾಜ್ಯ (Goa government) ಮೀನುಗಾರಿಕಾ ಇಲಾಖೆ ಮುಂದಾಗಿದೆ.
ಸಾಕಷ್ಟು ದಿನಗಳಿಂದ ಹೀಗೆ ಅಕ್ರಮವಾಗಿ ಮೀನುಗಾರಿಕೆ ನಡೆಸಲಾಗುತ್ತಿದೆ ಎಂದು ಗೋವಾದ ಮೀನುಗಾರರು ಅಲ್ಲಿನ ಸರ್ಕಾರಕ್ಕೆ ದೂರು ನೀಡಿದ್ದರು. ಈ ಬಗ್ಗೆ ಗೋವಾ ರಾಜ್ಯ ಮೀನುಗಾರಿಕಾ ಸಚಿವ ನೀಲಕಂಠ ಹಳರ್ಣಕರ್ ಕರ್ನಾಟಕ ಮೀನುಗಾರಿಕಾ ಇಲಾಖೆಯ ಜೊತೆ ಚರ್ಚೆ ನಡೆಸಿದ್ದರು. ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್ (Pramod savant) ಕೂಡ ಬೋಟ್ ಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದರು.