ಹೆಚ್.ಡಿ.ರೇವಣ್ಣನ (HD Revanna) ಇಬ್ಬರು ಮಕ್ಕಳು ಸಿಐಡಿ (CID) ಮತ್ತು ಎಸ್ ಐ ಟಿ (SIT) ಕಸ್ಟಡಿಯಲ್ಲಿ ವಿಚಾರಣೆ ಎದುರಿಸುತ್ತಿರುವುದರಿಂದ ಇಬ್ಬರೂ ಸಿಐಡಿ ಕಚೇರಿಯಲ್ಲಿ ಅಕ್ಕಪಕ್ಕದ ಕೋಣೆಯಲ್ಲಿಇದ್ದಾರೆ.
ಹೀಗಾಗಿ ಖುದ್ದು ರೇವಣ್ಣ (Revanna) ಸಿಐಡಿ ಕಛೇರಿ ಬಳಿ ಬಂದು ಎರಡು ಬ್ಯಾಗ್ ನಲ್ಲಿ ಊಟ ಮತ್ತು ಬಟ್ಟೆ ಸಿಐಡಿ ಸಿಬ್ಬಂದಿ ಕೈಗೆ ಕೊಟ್ಟು ರೇವಣ್ಣ ತೆರಳಿದ್ದಾರೆ. ಸೂರಜ್ ರೇವಣ್ಣ (Suraj revanna) ಹಾಗೂ ಪ್ರಜ್ವಲ್ ರೇವಣ್ಣ (Prajwal revanna) ಪ್ರತ್ಯೇಕ ಪ್ರಕರಣಗಳಲ್ಲಿ ವಿಚಾರಣೆ ನಡೆಸುತ್ತಿರುವ ಸಿಐಡಿ ಹಾಗೂ ಎಸ್ ಐಟಿ ತಮ್ಮ ವಶದಲ್ಲಿ ಇರಿಸಿಕೊಂಡಿದೆ.
ಇಬ್ಬರೂ ಗಂಡುಮಕ್ಕಳೂ ಲೈಂಗಿಕ ದೌರ್ಜನ್ಯದಲ್ಲಿ ಸಿಲುಕಿ ಕಾನೂನಿನ ಕುಣಿಕೆಯಲ್ಲಿ ಇರೋದು ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ತೀವ್ರ ನೋವು ತಂದಿದ್ದು, ಮಕ್ಕಳನ್ನು ನೋಡುವ ಅವಕಾಶ ಸಿಗಬಹುದೇನೋ ಎಂದು ತಾವೇ ಬಂದಿರಬಹುದು.
.