ಬೆಂಗಳೂರು: ನಗರದ ಕೆಲವು ಶಾಲೆ ಮತ್ತು ಶಿಕ್ಷಣ ಸಂಸ್ಥೆಗೆ 4 ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪದ ಮೇಲೆ ಇಬ್ಬರು ಉದ್ಯೋಗಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಖಾಸಗಿ ಶಾಲೆಯ ಉದ್ಯೋಗಿಗಳಾದ ಸಾಗರ್, ಮುರುಳಿ, ಮನೋಜ್, ಮೋಹನ್, ಕಿಶೋರ್ ಶಾಲೆ & ಟ್ರಸ್ಟ್ ನಲ್ಲಿ ಅಕೌಂಟೆಂಟ್ಸ್, ಟ್ರಾನ್ಸ್ ಪೋರ್ಟ್ ಇನ್ಚಾರ್ಜ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ 2017ರಿಂದ ಶಾಲೆ & ಟ್ರಸ್ಟ್ ಗೆ ಸೇರಿದ 4 ಕೋಟಿ ರೂ. ದುರ್ಬಳಕೆ ಮಾಡಿರೋದು ಗೊತ್ತಾಗಿದ್ದು, ಐವರ ವಿರುದ್ಧ ಶಿಕ್ಷಣ ಸಂಸ್ಥೆಯ ನಿರ್ದೇಶಕ ಸಿಸಿಬಿ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿದ್ದರು.

ತನಿಖೆ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳಾದ ಸಾಗರ್, ಮನೋಜ್ ರನ್ನ ಬಂಧಿಸಿ ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.








