ಆಸ್ಪತ್ರೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದ ಮುಂಬೈಯ ವ್ಯಕ್ತಿ ಮತ್ತು ಸಹಕರಿಸಿದ ಮಹಿಳೆಯನ್ನು ಮಂಗಳೂರು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಿಹಾರ ಮೂಲದ, ಮುಂಬೈಯಲ್ಲಿ ವಾಸವಿರುವ ಅಬ್ದುಲ್ ಹಲೀಂ (37) ಮತ್ತು ಕುಲಶೇಖರದ ಶಮೀನಾ ಬಾನು (22) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ದೂರುದಾರ ಮಹಿಳೆಯ ತಮ್ಮ ಮನ್ಸೂರ್ ಅಹ್ಮದ್ ಬಾಬಾ ಶೇಖ್ ಮತ್ತು ಆತನ ಪರಿಚಯದ ಬಿಹಾರ ಮೂಲದ ಮುಂಬೈಯಲ್ಲಿ ವಾಸವಿರುವ ಅಬ್ದುಲ್ ಹಲೀಂ ಆಗಸ್ಟ್ 10 ತಮ್ಮ ಬೈಕ್ನಲ್ಲಿ ಕಾಸರಗೋಡಿಗೆ ಹೋಗಿ ವಾಪಸು ಬರುತ್ತಿದ್ದಾಗ ಮಂಜೇಶ್ವರ ಹೊಸಂಗಡಿ ಬಳಿ ಬೈಕ್ ಅಪಘಾತವಾಗಿದೆ.
ಘಟನೆಯಲ್ಲಿ ಇಬ್ಬರೂ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ದೂರುದಾರರು ಮತ್ತು ಅವರ ದೊಡ್ಡ ಮಗಳು ಅಪಘಾತದ ಬಗ್ಗೆ ವಿಚಾರಿಸಲು ಮಂಗಳೂರು ಮಂಜೇಶ್ವರ ಠಾಣೆಗೆ ಹೋಗಿದ್ದರು. ಆ ವೇಳೆ ಅವರ ತಮ್ಮನ ಹೆಂಡತಿ ಶಮೀನಾ ಬಾನು ಜತೆ ತಮ್ಮ ಮಗಳನ್ನು ಬಿಟ್ಟು ಹೋಗಿದ್ದರು.
ಶಮೀನಾ ಬಾನು ಆರೋಪಿತನಾದ ಅಬ್ದುಲ್ ಹಲೀಂ ಜತೆ ಆಸ್ಪತ್ರೆಯಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದುದನ್ನು ಹುಡುಗಿ ನೋಡಿದ್ದಳು. ಇದನ್ನು ಗಮನಿಸಿದ ಶಮೀನಾ ಬಾನು ಆಕೆಯನ್ನು ಕರೆದು ಬೆಡ್ ಮೇಲೆ ಕುಳ್ಳಿರಿಸಿದ್ದಳು.
ಈ ಸುದ್ದಿ ಓದಿದ್ದೀರಾ? ಬೆಂಗಳೂರಲ್ಲಿ ಇಂದು ಶೂನ್ಯ ನೆರಳು | ಮಾಯವಾಗಲಿದೆ ನಿಮ್ಮ ನೆರಳು?
ಆಗ ಅಲ್ಲಿದ್ದ ಆರೋಪಿ ಅಬ್ದುಲ್ ಹಲೀಂ ಆಕೆ ಜತೆ ಅನುಚಿತವಾಗಿ ವರ್ತಿಸಿದ್ದಕ್ಕೆ ಆಕೆ ವಿರೋಧಿಸಿದ್ದಳು. ಶಮೀನಾಳ ಸಹಕಾರದಿಂದ ಅರೋಪಿ ಅಬ್ದುಲ್ ಹಲೀಂ ಆಕೆಗೆ ಅತ್ಯಾಚಾರ ಮಾಡಿದ್ದ ಎಂದು ಬಾಲಕಿಯ ತಾಯಿ ಮಹಿಳಾ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಅಬ್ದುಲ್ ಹಲೀಂ ಆ. 16ರಂದು ರಂದು ಮಂಗಳೂರು ಜಿಲ್ಲೆಯಿಂದ ಮುಂಬೈಗೆ ಪ್ರಯಾಣಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ. ಶಮೀನಾಗೆ ಹಾಗೂ ಅಬ್ದುಲ್ ಹಲೀಂ ಗೆ ನ್ಯಾಯಾಲಯವು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.